ಕೊಂಡಾಪುರ ಭಕ್ತಾಧಿಗಳಿಂದ ಶ್ರೀಶೈಲಕ್ಕೆ ಪಾದಯಾತ್ರೆ

ಸೈದಾಪುರ:ಎ.4:ಇಲ್ಲಿಗೆ ಸಮೀಪದ ಕೊಂಡಾಪುರ ಗ್ರಾಮದ ಭಕ್ತಾಧಿಗಳು ಬಸವೇಶ್ವರ ದೇವಸ್ಥಾನದಿಂದ ಸುಕ್ಷೇತ್ರ ಶ್ರೀಶೈಲಕ್ಕೆ ಪಾದಯಾತ್ರೆ ಕೈಗೊಂಡರು.

ಪಾದಯಾತ್ರೆಯ ಮೂಲಕ ಪಡೆಯುವ ದೇವರ ದರ್ಶನ ಅತಿ ಮಹತ್ವದ್ದಾಗಿದ್ದೂ ಬಾರವಾದ ಮನಸ್ಸುಗಳಿಗೆ ನೆಮ್ಮದಿಯನ್ನು ನೀಡುತ್ತದೆ. ಗ್ರಾಮಸ್ಥರು ಸೇರಿಕೊಂಡು ಭಕ್ತಿಯೊಂದಿಗೆ ಸಾಗುವ ಮೂಲಕ ಸರಳತೆಯನ್ನು ಕಂಡು ಕೊಳ್ಳಲು ಸಾಧ್ಯವಾಗುತ್ತದೆ ಎಂಬುವುದು ಪಾದಯಾತ್ರಿಗಳಾದ ಬಸವರಾಜಪ್ಪಗೌಡ, ಶಿವರಾಜಪ್ಪಗೌಡ, ನಾಗಪ್ಪ, ಪರಶುರಾಮ, ಪಿಡ್ಡಪ್ಪ ಬಾವಿ, ಮಲ್ಲಪ್ಪ ಬಾಗ್ಲಿ,ಮಹೇಶ ಬಾಗ್ಲಿ ಸೇರಿದಂತೆ ಇತರರು ಅಭಿಪ್ರಾಯವನ್ನು ಹಂಚಿಕೊಂಡರು.