ಕೊಂಡಾಪುರ:ಅದ್ಧೂರಿ ಬಸವೇಶ್ವರ ರಥೋತ್ಸವ

??????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????

ಸೈದಾಪುರ:ಎ.25:ಸಮೀಪದ ಕೊಂಡಾಪುರ ಗ್ರಾಮದ ಬಸವೇಶ್ವರ ಜಾತ್ರಾ ಮಹೋತ್ಸವವು ನೂರಾರೂ ಭಕ್ತರ ಮಧ್ಯೆ ಸಡಗರ ಸಂಭ್ರಮದೊಂದಿಗೆ ಅದ್ಧೂರಿಯಾಗಿ ನೆರವೇರಿತು.
ಭಾನುವಾರ ವಿಶೇಷವಾದ ರುದ್ರಾಭಿಷೇಕ ಪೂಜೆ ಮತ್ತು ಗಣರಾಧನೆಯನ್ನು ನೆರವೇರಿಸಲಾಯಿತು. ಸಂಜೆ ಪರುವಂತಿಗೆ ಸೇವೆ ನಂತರ ಬಸವೇಶ್ವರ ಮೂರ್ತಿಯನ್ನು ರಥದಲ್ಲಿಟ್ಟು ವೈಭವದ ರಥೋತ್ಸವಕ್ಕೆ ಅದ್ದೂರಿಯಾಗಿ ಚಾಲನೆ ನೀಡಲಾಯಿತು. ವಿದ್ಯುತ್ ದ್ವೀಪಗಳು ಹಾಗೂ ಹೂಮಾಲೆಗಳಿಂದ ಶೃಂಗರಿಸಲ್ಪಟ್ಟಿದ್ದ ರಥದ ಹಗ್ಗವನ್ನಿಡಿದ ಭಕ್ತರು ಜೈ ಘೋಷಗಳನ್ನು ಮೊಳಗಿಸಿ ಎಳೆದರು. ಮಹಿಳೆಯರು ಕಳಸವನ್ನು ಹಿಡಿದು ರಥದಯಿಂದೆ ಹೆಜ್ಜೆ ಹಾಕಿದರು. ನೆರೆಯ ಸೈದಾಪುರ, ಗುಡೂರ, ಸಂಗ್ವಾರ, ಮುನಗಲ್ ಯಾದಗಿರಿ ನಗರ ಸೇರಿದಂತೆ ನಾನಾ ಗ್ರಾಮಗಳ ಸಹಸ್ರಾರು ಭಕ್ತರು ಆಗಮಿಸಿ ದೇವರ ದರ್ಶನ ಪಡೆದು ಪುನಿತರಾದರು.
40 ವರ್ಷಗಳಿಂದ ಅನ್ನ ಸಂತಾರ್ಪಣೆ: ಪಟ್ಟಣದ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಶರಣಿಕ ಕುಮಾರ ದೋಖಾ ಹಾಗೂ ಸಹೋದರ ಅಭಯ ಕುಮಾರ ದೋಖಾ ಅವರು ಸುಮಾರು 40 ವರ್ಷಗಳಿಂದ ಗ್ರಾಮದ ಬಸವೇಶ್ವರ ಜಾತ್ರೆಗೆ ಆಗಮಿಸುವ ಭಕ್ತರಿಗೆ ಅನ್ನ ಸಂತಾರ್ಪಣೆಯನ್ನು ಮಾಡುತ್ತ ಬರುತ್ತಿದ್ದಾರೆ. ಅದೇ ರೀತಿ ಈ ವರ್ಷವು ಕೂಡ ವ್ಯವಸ್ಥೆ ಮಾಡಲಾಗಿತ್ತು. ಭಕ್ತರು ಅನ್ನ ಪ್ರಸಾದ ಸವಿದು ಹರ್ಷವ್ಯಕ್ತಪಡಿಸಿದರು.