ಕೊಂಡಯ್ಯನವರೇ ನಿಮ್ಮ ಆಮಿಷ ನಮಗೆ ಬೇಡ:ಗಾಳಿ ಬಸವರಾಜ್

ಬಳ್ಳಾರಿ, ಏ.02: ಪಂಚಾಯ್ತಿ ವ್ಯವಸ್ಥೆ ಜಾರಿಗೆ ಬಂದು ಮೂರು ದಶಕಗಳಿಗೂ ಹೆಚ್ಚು ಕಾಲ ಆದರೂ ಅನೇಕ ಗ್ರಾಮ ಪಂಚಾಯ್ತಿಗಳಿಗೆ ಸ್ವಂತ ಕಟ್ಟಡಗಳಿಲ್ಲ ಈ ಬಗ್ಗೆ ಮಾತನಾಡದ ಕೊಂಡಯ್ಯನವರೇ ನಿಮ್ಮ ಬೆಳ್ಳಿ ನಾಣ್ಯದ ಆಮಿಷ ನಮಗೆ ಬೇಡ ಎಂದು ಕುರುಗೋಡು ತಾಲೂಕಿನ ಬಾದನಹಟ್ಟಿ ಗ್ರಾಮ ಪಂಚಾಯ್ತಿ ಸದಸ್ಯ ಗಾಳಿ ಬಸವರಾಜ್ ಹೇಳಿದ್ದಾರೆ.
ಸಂಜೆವಾಣಿಯೊಂದಿಗೆ ಮಾತನಾಡಿದ ಅವರು, ಯುಗಾದಿ ಹಬ್ಬದ ಶುಭಾಶಯ ಪತ್ರದ ಜೊತೆ ಗ್ರಾಮ ಸ್ಪರಾಜ್ಯದ ಬಗ್ಗೆ ಪಂಚಾಯ್ತಿ ಸದಸ್ಯರ ಕೈಪಿಡಿ ಅಲ್ಲದೆ ಬೆಳ್ಳಿ ನಾಣ್ಯವನ್ನು ಕಾಂಗ್ರೆಸ್ ಮುಖಂಡರ ಜೊತೆ ಆಯಾ ಗ್ರಾಮ ಪಂಚಾಯ್ತಿ ಸದಸ್ಯರಿಗೆ ನೀಡಿದ್ದಾರೆ.
ಕೇವಲ ಕೈಪಿಡಿ ಶುಭಾಶಯ ಪತ್ರ ನೀಡಿದ್ದರೆ ಸರಿ ಇತ್ತು. ಆದರೆ ಅವರು ಬೆಳ್ಳಿ ನಾಣ್ಯ ನೀಡಿದ್ದೇಕೆ? ಇದು ಒಂದು ರೀತಿ ಆಮಿಷದಂತೆ ಇದೆ. ಈ ಹಿಂದೆ ಸಹ ಅವರು ಇದೇ ರೀತಿ ನೀಡಿ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದರು. ಆಯ್ಕೆಯಾದ ಅವರು ಪಂಚಾಯ್ತಿಗಳ ಅಭಿವೃದ್ಧಿ ಬಗ್ಗೆ ಮಾತನಾಡದ ಅವರು, 2022ರಲ್ಲಿ ಬರಲಿರುವ ಎಂ.ಎಲ್.ಸಿ ಚುನಾವಣೆಯಲ್ಲಿ ಮತ್ತೊಮ್ಮೆ ಈ ರೀತಿ ಆಮಿಷ ಒಡ್ಡಿ ಗೆಲ್ಲುವ ದುರಾಲೋಚನೆ ಮಾಡಿರಬೇಕು.
ಎಡ ಪಕ್ಷದಿಂದ ಆಯ್ಕೆಯಾದ ನಾವು ಇಂತಹವರ ಆಮಿಷಕ್ಕೆ ಒಳಗಾಗಲು ಇಷ್ಟವಿಲ್ಲ. ಬೆಳ್ಳಿ ನಾಣ್ಯವನ್ನು ನೀಡಿದವರಿಗೆ ಹಿಂತಿರುಗಿಸಲಿದೆಂದು ಹೇಳಿದ್ದಾರೆ.