ಕೊಂಡಜ್ಜಿ ಬಸಪ್ಪ ಅವರ ಪುಣ್ಯ ತಿಥಿ

ರಾಯಚೂರು.ನ.16-ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಜಿಲ್ಲಾ ಸಂಸ್ಥೆ ರಾಯಚೂರು ವತಿಯಿಂದ ಶ್ರೀ ಕೊಂಡ್ಡಜ್ಜಿ ಬಸ್ಸಪ್ಪನವರ 38ನೇ ಪುಣ್ಯ ಸ್ಮರಣೆ ಹಾಗೂ ಪಂಡಿತ್ ಜವಾಹರಲಾಲ್ ನೆಹರು ರವರ 131ನೇ ಜನ್ಮದಿನಾಚರಣೆ (ಮಕ್ಕಳ ದಿನಾಚರಣೆ) ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಸವರಾಜ ಬೋರಡ್ಡಿ ಜಿಲ್ಲಾ ಆಯುಕ್ತರು ಸ್ಕೌಟ್ ರವರು ವಹಿಸಿದ್ದರು. ಮೊದಲಿಗೆ ಸ್ಕೌಟ್ಸ್ ಮತ್ತು ಗೈಡ್ಸ್ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ನಾಗೇಶಗೌಡ ಡಿ.ಟಿ.ಸಿ ಸ್ಕೌಟ್ ರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಗಣ್ಯರು ಎಲ್ಲಾರೂ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪೂಜೆ ಕಾರ್ಯಕ್ರಮವನ್ನು ನೆರವೇರಿಸಿದರು.ನಂತರ ಮುಖ್ಯ ಅತಿಥಿಗಳಾಗಿ ಡಾ:ಆರ್.ಬಸವರಾಜ ಪ್ರಾಂಶುಪಾಲರು ಎಸ್.ಎಲ್.ಎನ್. ಇಂಜಿನಿಯರಿಂಗ್ ಕಾಲೇಜು ರಾಯಚೂರು ಆಗಮಿಸಿದ್ದರು.ಇದೇ ಸಂದರ್ಭದಲ್ಲಿ ಆಲೀಯಾ ಖಾನಂ ಜಿಲ್ಲಾ ಆಯುಕ್ತರು ಗೈಡ್,ಶ್ರೀ ಬಸವರಾಜ ಗದಗಿನ ಜಿಲ್ಲಾ ಕಾರ್ಯದರ್ಶಿಗಳು, ಎನ್.ಶೇಖರ್ ಕಾರ್ಯದರ್ಶಿಗಳು ಸ್ಥಳೀಯ ಸಂಸ್ಥೆ ರಾಯಚೂರು, ಫ್ಲಾಕ್ ಲೀಡರ್ ಉಷಾಬಾಯಿ, ಸುಮಂಗಲಾ,ಹಾಗೂ ಜಿಲ್ಲಾ ಸಂಸ್ಥೆಯ ಪದಾಧಿಕಾರಿಗಳು, ಶಿಕ್ಷಕರು, ಕಬ್ ಆಯಾನ್ , ರೋವರ್ ವೆಂಕಟೇಶ ನಾಯಕ ರವರು . ಮನುಕುಮಾರಿ.ಎಸ್.ಜಿ.ವಿ ಅಂಬಣ್ಣಾ ಹಾಜರಿದ್ದರು. ಮಾನ್ವಿಯ ಕಾರ್ಯಕ್ರಮದಲ್ಲಿ ಜಂಟಿ ಕಾರ್ಯದರ್ಶಿ ನರಸಿಂಹ ಮೂರ್ತಿ ದೇಸಾಯಿ,ವಸಂತ್ ರಾವ್ ಕುಲಕರ್ಣಿ,ಐಶ್ವರ್ಯ ದೇಸಾಯಿ,ಸೃಷ್ಟಿ ಕರಕಿಹಳ್ಲಿ,ಸೈ ದೀಕ್ಷಿತ್,ನಮ್ರತಾ ಹಾಜರಿದ್ದರು.