ಕೊಂಡಜ್ಜಿ ಕೆರೆ ಅರಣ್ಯ ಪ್ರದೇಶ ಜೀವ ವೈವಿದ್ಯ ತಾಣ ಎಂದು ಘೋಷಿಸಲು ಶಿಫಾರಸ್ಸು

 ದಾವಣಗೆರೆ ಜ.7; ಕರ್ನಾಟಕ ಜೀವವೈವಿದ್ಯ ಮಂಡಳಿಯ ಅಧ್ಯಕ್ಷರಾದ ಅನಂತ ಹೆಗಡೆ ಆಶೀಸರರವರು  ಕೊಂಡಜ್ಜಿ ಕೆರೆ  ಪ್ರದೇಶಕ್ಕೆ ಬೇಟಿ ನೀಡಿ,ಕೊಂಡಜ್ಜಿ ಕೆರೆ ಅರಣ್ಯ ಪ್ರದೇಶವನ್ನು ಪಾರಂಪರಿಕ ಜೀವ ವೈವಿಧ್ಯ ತಾಣ ಎಂದು ಮಂಡಳಿ ನಿರ್ಣಯ ಕೈಗೊಳ್ಳಲು ಶಿಪಾರಸು ಮಾಡುತ್ತೇನೆಂದು ಹೇಳಿದರು ಅರಣ್ಯ ಅಧಿಕಾರಿಗಳು ಪರಿಸರ ತಜ್ಞರ ಜೊತೆ ಹರಿಹರ.ತಾ ಕೊಂಡಜ್ಜಿ ಗ್ರಾಮದ ಕೆರೆ ಪ್ರದೇಶಕ್ಕೆ ಭೇಟಿ ನೀಡಿದ ಅವರು ಕೆರೆ ಮತ್ತು ಅರಣ್ಯ ಪ್ರದೇಶ ಮಲಿನವಾಗಿಲ್ಲ. ಅರಣ್ಯ ನಾಶವಾಗದೇ ಉಳಿದಿದೆ. ಈ ಬಗ್ಗೆ ಕೊಂಡಜ್ಜಿ ಗ್ರಾಮದ ಜನರನ್ನು ಅರಣ್ಯ ಇಲಾಖೆಯ ಅಧಿಕಾರಿ ಸಿಬ್ಬಂದಿಯನ್ನು ಅಶೀಸರ ಶ್ಲಾಘಿಸಿದರು ಈ ಕೆರೆ ಪಕ್ಷಿ ಸಂಕುಲಕ್ಕೆ ಆಶ್ರಯ ತಾಣ. ಕೆರೆ ಸುತ್ತಲಿನ 1250 ಎಕರೆ ಅರಣ್ಯ ದಾವಣಗೆರೆ-ಹರಿಹರದ–ಆಮ್ಲಜನಕ ಕೇಂದ್ರ. ಬಯಲು ಸೀಮೆಯ ಹಸಿರು ಜಯಸಿಸ್. ಹರಿಹರ ತಾಲ್ಲೂಕು ಪಂಚಾಯಿತಿ ಜೀವವೈವಿಧ್ಯ ಸಮಿತಿ ಕೊಂಡಜ್ಜಿ ಕೆರೆ – ಅರಣ್ಯವನ್ನು ಗುರುತಿಸಿ ಪಾರಂಪರಿಕ ತಾಣ ಎಂದು ನಿರ್ಣಯ ಕೈಗೊಳ್ಳಬೇಕು ಎಂದರು.   ಪಾಲಿಕೆ ವ್ಯಾಪ್ತಿಯಲ್ಲಿ ವನೀಕರಣ ಕಾರ್ಯ ಚುರುಕುಗೊಳ್ಳಲಿ: ದಾವಣಗೆರೆ ನಗರ ವ್ಯಾಪ್ತಿಯಲ್ಲಿ ಇರುವ 200 ಪಾರ್ಕಗಳಲ್ಲಿ ಫಲವೃಕ್ಷಗಳನ್ನು ನೆಡಲು ವಿಶೇಷ ಯೋಜನೆ ಜಾರಿ ಮಾಡಬೇಕು ಎಂದು ಅನಂತ ಹೆಗಡೆ ಆಶೀಸರ ಹೇಳಿದರು. ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಮಹಾನಗರ ಪಾಲಿಕೆ ಮಹಾಪೌರರಾದ ಬಿ.ಜೆ.ಅಜಯ್ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು ಮಹಾನಗರ ಪಕ್ಷಿ ಸಂಕುಲಕ್ಕೆ ಆಶ್ರಯ ನೀಡಿರುವ ವೃಕ್ಷ ಸಮೂಹ ಗುರುತಿಸಿ ಪಾರಂಪರಿಕ ವೃಕ್ಷಗಳು ಎಂದು ಮಾನ್ಯತೆ ನೀಡಬೇಕು. ಸ್ಮಾರ್ಟ್ಸಿಟಿ ಯೋಜನೆಯಲ್ಲಿ ಗ್ರೀನ್ ಸಿಟಿ ತತ್ವ ಅಳವಡಿಸಬೇಕು. ಕೆರೆ ಅಭಿವೃದ್ಧಿಯಲ್ಲಿ ಅತಿಯಾದ ಕಾಂಕ್ರಿಟೀಕರಣ ಕಾಮಗಾರಿ ಸಾಧು ಅಲ್ಲ ಎಂಬ ಒಟ್ಟಾಭಿಪ್ರಾಯ ದಾವಣಗೆರೆ ಮಹಾನಗರ ಪಾಲಿಕೆಯ ಜೀವವೈವಿಧ್ಯ ಸಮಿತಿ ಸಭೆಯಲ್ಲಿ ವ್ಯಕ್ತವಾಯಿತು. ನಗರದ ಹೋಟೆಲ್, ಕಲ್ಯಾಣ ಮಂಟಪ, ಹಾಸ್ಟೆಲ್‌ಗಳ ಅಡಿಗೆ ತ್ಯಾಜ್ಯದಿಂದ ಬಯೋಗ್ಲಾಸ್ ತಯಾರಿಸುವ ಯೋಜನೆ ಜಾರಿ ಮಾಡಬೇಕು. ಪಾಲಿಕೆ ಈ ಬಗ್ಗೆ ಅಗತ್ಯ ಕ್ರಮಕ್ಕೆ ಮುಂದಾಗಬೇಕು ಎಂದು ನಿರ್ಣಯಿಸಲಾಯಿತು.ಪಾಲಿಕೆ ಕಮೀಷನರ್ ವಿಶ್ವನಾಥ್ ಮುದಜ್ಜಿ,  ಜೀವವೈವಿಧ್ಯ ಸಮಿತಿ ಸದಸ್ಯರು, ಪರಿಸರ ಸಂಸ್ಥೆಗಳ ಸದಸ್ಯರು, ಜಿಲ್ಲೆಯ ನಗರ ಸಂಸ್ಥೆಗಳ ಪ್ರಮುಖರು ಭಾಗವಹಿಸಿದ್ದರು. .