“ಕೊಂಚಿಗೇರಿ ವಿದ್ಯಾರ್ಥಿಗಳಿಗೆ ತಪ್ಪದ ಬಸ್ಸಿನ ಬವಣೆ”

ಸಿ.ಶಿವರಾಮ ಸಿರಿಗೇರಿ
ಸಿರಿಗೇರಿ 30. ಸಮೀಪದ ಕೊಂಚಿಗೇರಿ ಗ್ರಾಮದ 70ಕ್ಕೂ ಹೆಚ್ಚು ಕಾಲೇಜು ವಿದ್ಯಾರ್ಥಿಗಳಿಗೆ ತಮ್ಮ ಗ್ರಾಮದಿಂದ ಬಳ್ಳಾರಿ, ಸಿರುಗುಪ್ಪ ನಗರಗಳಿಗೆ ಕಾಲೇಜಿಗೆ ತೆರಳಲು ಸರ್ಕಾರಿ ಬಸ್ಸಿನ ತೊಂದರೆ ಬಗೆಹರಿಯದ ಸಮಸ್ಯೆಯಾಗಿದೆ. ಬಸ್ಸಿಗಾಗಿ ವಾರಕ್ಕೊಮ್ಮೆ 3ದಿನಕ್ಕೊಮ್ಮೆ ಡ್ರೈವರ್-ಕಂಡಕ್ಟರ್ ಮತ್ತು ವಿದ್ಯಾರ್ಥಿಗಳ ಮದ್ದೆ ಮಾತಿನ ಜಕಮಕಿ ನಡೆಯುವುದ ಸಾಮಾನ್ಯ ಸಂಗತಿಯಾಗಿ ಶಾಶ್ವತ ಪರಿಹಾರ ಇದುವರೆಗೂ ಕಾಣದಾಗಿದೆ. ಕೊಂಚಿಗೇರಿಯಲ್ಲಿ ಬೆಳಿಗ್ಗೆ 7ಗಂಟೆಯಿಂದ ಬಸ್‍ನಿಲ್ದಾಣದಲ್ಲಿ ಸಮಯ ಪಾಲನೆ ಇಲ್ಲದೇ ಬರುವ ಒಂದೇ ಒಂದು ಬಸ್ಸಿಗಾಗಿ ಜಾತಕಪಕ್ಷಿಗಳಂತೆ ವಿದ್ಯಾರ್ಥಿಗಳು ಕಾದು ಕುಳಿತುಕೊಳ್ಳಬೇಕು. ಕುರುಗೋಡು ಡಿಪೋದಿಂದ ಬಿಡುವ ಈ ಬಸ್ಸು ಬಳ್ಳಾರಿಗೆ ಹೋಗಲು ಗುಂಡಿಗನೂರು ಸಿರಿಗೇರಿ ಮಾರ್ಗವಾಗಿ ಬಂದು ಕೊಂಚಿಗೇರಿಯಿಂದ ಬಳ್ಳಾರಿಗೆ ಹೋಗುತ್ತದೆ.
   ಸಮಯಕ್ಕೆ ಬಾರದ ಬಸ್ಸು: ವಿದ್ಯಾರ್ಥಿಗಳ ಪ್ರಯಾಣಿಕರ ಅನುಕೂಲಕ್ಕೆ ಈ ಮಾರ್ಗದಲ್ಲಿ ಬಿಟ್ಟಿರುವ ಬಸ್ಸು ನಿಗದಿತ ಸಮಯಕ್ಕೆ ಬರದಿರುವುದೇ ಸಮಸ್ಯೆಗೆ ಕಾರಣವಾಗುತ್ತಿದೆ ಎಂದು ವಿದ್ಯಾರ್ಥಿಗಳು, ಗ್ರಾಮಸ್ಥರು ದೂರುತ್ತಿದ್ದಾರೆ. ತಾಂತ್ರಿಕ ತೊಂದರೆ, ಸಿಬ್ಬಂದಿಯ ಹೊಂದಾಣಿಕೆಯಿಂದ ಬಸ್ಸು ಬರಲು ಕೆಲವು ದಿನ ಸಮಯದಲ್ಲಿ ವಿಳಂಬವಾಗುತ್ತದೆ ಎಂದು ಕಾರಣಕೊಡುವ ಸಾರಿಗೆ ಅಧಿಕಾರಿಗಳಿಗೆ, ಹಲವು ಬಾರಿ ವಿದ್ಯಾರ್ಥಿಗಳು ತಮ್ಮ ಅಳಲನ್ನು ತೋಡಿಕೊಂಡು ಕಾಲೇಜಿಗೆ ಸಮಯಕ್ಕೆ ಸರಿಯಾಗಿ ಹೋಗದೇ ತರಗತಿಗಳು ತಪ್ಪುತ್ತಿವೆ ಎಂದು ತಿಳಿಸಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಗುಂಡಿಗನೂರಿನ 10-15, ಸಿರಿಗೇರಿಯ 20-30 ವಿದ್ಯಾರ್ಥಿಗಳನ್ನು ಪ್ರಯಾಣಿಕರನ್ನು ತುಂಬಿಕೊಂಡು ಕೊಂಚಿಗೇರಿಗೆ ಹೋಗುವಷ್ಟರಲ್ಲಿ ಭರ್ತಿಯಾಗಿರುತ್ತದೆ. ತುಂಬಿದ ಬಸ್ಸಿನಲ್ಲಿ ಕೊಂಚಿಗೇರಿಯ 70ಕ್ಕೂ ಹೆಚ್ಚು ಅಷ್ಟೂ ವಿದ್ಯಾರ್ಥಿಗಳಿಗೆ ಇದೇ ಬಸ್ಸು ಗತಿಯಾಗಿದೆ.
   ಈಡೇರದ ಗುಂಡಿಗನೂರು ಹಾಲ್ಟ್ ಬಸ್ಸು: ಗುಂಡಿಗನೂರು ಗ್ರಾಮದಲ್ಲಿ ಬಸ್ಸು ವಸತಿ ಮಾಡಿ ಬೆಳಿಗ್ಗೆ 6ಗಂಟೆಗೆ ಬಿಡುವುದರಿಂದ ವಿದ್ಯಾರ್ಥಿಗಳಿಗೆ, ಪ್ರಯಾಣಿಕರಿಗೆ ಅನುಕೂಲವಾಗುತ್ತದೆಂದು ಈಭಾಗದ ಮುಖಂಡರು, ಗ್ರಾ.ಪಂ.ಸದಸ್ಯರು ಶಾಸಕರಲ್ಲಿ, ಡಿಪೋ ಅಧಿಕಾರಿಗಳಲ್ಲಿ ವರ್ಷಗಳಿಂದ ಒತ್ತಾಯ ಮಾಡುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಬೆಳಿಗ್ಗೆ ಮಾತ್ರ ಬಸ್ಸು ಪ್ರಯಾಣ ಮಾಡಿ ಮದ್ಯಾಹ್ನ ಬರುವಾಗ ಗುಂಡಿಗನೂರು ವಿದ್ಯಾರ್ಥಿಗಳಿಗೆ ಸಿರಿಗೇರಿಗೆ ಬಂದ ಪ್ರಯಾಣಿಕರಿಗೆ ಕಾಲ್ನಡಿಗೆಯೇ ಗತಿಯಾಗಿದೆ. ಬೇಕೂಬೇಡವೆಂಬಂತೆ ಬರುವ ಬಸ್ಸು ನ.29ರಂದು ಹೊತ್ತಾಗಿ ಬಂದ ಪರಿಣಾಮ ಸಿಡಿಮಿಡಿಗೊಂಡ ವಿದ್ಯಾರ್ಥಿಗಳು ಮತ್ತು ಚಾಲಕ-ನಿರ್ವಾಹಕರ ಮದ್ದೆ ವಾಗ್ವಾದ ತಾರಕಕ್ಕೇರಿ ಸಿರಿಗೇರಿಯ ಪೋಲಿಸ್‍ಠಾಣೆ ಮೆಟ್ಟಿಲನ್ನೂ ಹತ್ತಿದ ಘಟನೆ ನಡೆಯಿತು. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ಮಾರ್ಗದ ಬಸ್ಸಿನ ಸಮಸ್ಯೆಯನ್ನು ಸಂಬಂಧಿಸಿದವರೇ ಬಗೆಹರಿಸಬೇಕಾಗಿದೆ.
•    ಹಾಲ್ಟಿಂಗ್ ಬಸ್ಸು ಬಿಡುವಂತೆ ಹಲವುಬಾರಿ ಅಧಿಕಾರಿಗಳಲ್ಲಿ ಒತ್ತಾಯಿಸಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಗುಂಡಿಗನೂರಿನಿಂದ ಬಸ್ಸು ಹೊರಟರೆ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಕುರುಗೋಡಿನಿಂದ ಬಂದರೆ ಸಮಯ ವ್ಯತ್ಯಾಸವಾಗಿ ಆಗಾಗ ಜಗಳಗಳು ನಡೆಯುತ್ತಿವೆ- ಪ್ರಕಾಶಗೌಡ. ಗ್ರಾ.ಪಂ.ಸದಸ್ಯ ಗುಂಡಿಗನೂರು
•    ಮುಖ್ಯ ತರಗತಿಗಳು ತಪ್ಪುತ್ತವೆಂದು ವಾರದಲ್ಲಿ 2-3ಸಲ ಈ ಬಸ್ಸಿನ ಸಹವಾಸ ಬೇಡವೆಂದು ಕೊಂಚಿಗೇರಿ ಕ್ರಾಸ್ (ಸಿರಿಗೇರಿ ರಸ್ತೆ) ವರೆಗೆ ನಡೆದುಕೊಂಡು ಹೋಗಿಬಿಡುತ್ತೇವೆ. ಮದ್ಯಾಹ್ನವೂ ಎಷ್ಟೋಸಲ ನಡೆದು ಬರುತ್ತಿದ್ದೇವೆ. ನಮ್ಮ ಗ್ರಾಮದ ಮುಖಂಡರು ನಮಗೆ ಶಾಶ್ವತ ಬಸ್ಸು ಬಿಡಿಸಲು ವ್ಯವಸ್ಥೆ ಮಾಡಬೇಕಿದೆ – ಕೊಂಚಿಗೇರಿ ವಿದ್ಯಾರ್ಥಿಗಳು.  

Attachments area