ಕೊಂಚಿಗೇರಿ ನಾಗರಾಜ ಆಯ್ಕೆ

ಸಂಡೂರು :ನ:8 ನೂತನವಾಗಿ ನೋಂದಣಿಯಾಗಿರುವ ಶ್ರೀ ಯಡಿಯೂರು ಸಿದ್ದಲಿಂಗೇಶ್ವರ ಗೃಹ ನಿರ್ಮಾಣ ಸಹಕಾರ ಸಂಘ ನಿಯಮಿತ ಬಳ್ಳಾರಿ ಆಡಳಿತ ಮಂಡಳಿಗೆ ನಿರ್ದೇಶಕರಾಗಿ ಕೊಂಚಿಗೇರಿ ನಾಗರಾಜ ಆಯ್ಕೆಯಾಗಿದ್ದಾರೆ.
ಸಂಡೂರಿನ ಪರವಾಗಿ ಗೃಹ ನಿರ್ಮಾಣ ಮಂಡಳಿಯ ನಿರ್ದೇಶಿಕರ ಸ್ಥಾನಕ್ಕೆ ಸಿರುಗುಪ್ಪ ತಾಲೂಕು ಬಿ.ಜೆ.ಪಿ. ಅಧ್ಯಕ್ಷರು ಸಂಡೂರಿನ ನಿವಾಸಿಗಳಾದ ಕೊಂಚಗೇರಿ ನಾಗರಾಜ ರವರೊಬ್ಬರೇ ನಾಮ ಪತ್ರ ಸಲ್ಲಿಸಿದ ಕಾರಣ ಚುನಾವಣಾ ಅಧಿಕಾರಿಗಳು ಅವಿರೋಧವಾಗಿ ನಾಗರಾಜ ಆಯ್ಕೆಯಾಗಿದ್ದಾರೆಂದು ಘೋಷಿಸಿದರು. ಬಳ್ಳಾರಿಯ ಹಳೇ ಬಸ್ ನಿಲ್ದಾಣ ಎದುರುಗಡೆ ಇರುವ ದಾನಮ್ಮನ ಆಸ್ಪತ್ರೆಯ ಸಮೀಪದ ಬಳ್ಳಾರಿ ಶರಣ ಸಕ್ಕರೆ ಕರಡೀಶರವರ ಬ್ಯಾಂಕಿನಲ್ಲಿ ಬುಧವಾರ 11ನೇ ತಾರಿಕು ಪದಗ್ರಹಣ ಕಾರ್ಯಕ್ರಮ ನಡೆಯಲಿದೆ ಎಂದು ಬಲ್ಲಮೂಲಗಳಿಂದ ತಿಳಿದು ಬಂದಿದೆ.