ಕೊಂಚಾವರಂ ಡಾ. ಅಂಬೇಡ್ಕರ್ ವಸತಿ ಶಾಲೆಗೆ ಕಾಂಗ್ರೆಸ್ ಮುಖಂಡ ರಾಠೋಡ ಭೇಟಿ

ಚಿಂಚೋಳಿ :ಜು.17:ತಾಲೂಕಿನ ಕೊಂಚಾವರಂ ಗ್ರಾಮದ
ಸಮಾಜಕಲ್ಯಾಣ ಇಲಾಖೆಯ
ಡಾ. ಬಿ. ಆರ್. ಅಂಬೇಡ್ಕರ್ ವಸತಿ ಶಾಲೆ ಕುಂಚಾವರಂನಲ್ಲಿ ನಿನ್ನೆ ರಾತ್ರಿ ಆಹಾರ ಸೇವಿಸಿದ ವಿದ್ಯಾರ್ಥಿಗಳು ಅಸ್ವಸ್ಥರಾಗಿ ಬೀದರ್ ಆಸ್ಪತ್ರೆಗೆ ದಾಖಲಾದ ವಿಷಯ ತಿಳಿದು ಚಿಂಚೋಳಿ ಕಾಂಗ್ರೇಸ್ ಮುಖಂಡರಾದ ಸುಭಾಷ್ ರಾಠೋಡ್, ಅವರು ವಸತಿ ನಿಲಯಕ್ಕೆ ಭೇಟಿ ನೀಡಿದರು ಆಸ್ಪತ್ರೆಗೆ ದಾಖಲಾದ ವಿದ್ಯಾರ್ಥಿಗಳಿಗೆ ಸೂಕ್ತ ಚಿಕಿತ್ಸೆ ನೀಡಬೇಕೆಂದು ವಸತಿ ನಿಲಯದ ಸಿಬ್ಬಂದಿ ವರ್ಗಕ್ಕೆ ತಿಳಿಸಿದರು ಅಲ್ಲದೆ ವಸತಿ ನಿಲಯಕ್ಕೆ ಸೌಕರ್ಯಗಳನ್ನು ಪರಿಶೀಲಿಸಿ ಅಡುಗೆ ಕೊಣೆ, ವಿದ್ಯಾರ್ಥಿಗಳು ಮಲಗುವ ಕೋಣೆ ಕುಡಿಯುವ ನೀರಿನ ಟ್ಯಾಂಕ್ ಸುಚಿಯಾಗಿ ಇಟ್ಟು ವಿದ್ಯಾರ್ಥಿಗಳಿಗೆ ಪೌಷ್ಟಿಕ ಆಹಾರ ನೀಡುವಂತೆ ಎಚ್ಚರಿಸಿದರು. ಕುಂಚಾವರಂ ನಲ್ಲಿ ಎಲ್ಲಾ ಸವಲತ್ತುಗಳನ್ನು ಒಳಗೊಂಡ ಸ್ವಂತ ಕಟ್ಟಡದ ಅವಶ್ಯಕತೆ ಇದೆ ಎಂದು ವಸತಿ ನಿಲಯದ ಸಿಬ್ಬಂದಿ ತಿಳಿಸಿದರು. ಇದರ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರುವದಾಗಿ ಸುಭಾಷ ವ್ಹಿ ರಾಠೋಡ ರವರು ತಿಳಿಸಿದರು.
ಈ ಸಂದರ್ಭದಲ್ಲಿ ಚಿಂಚೋಳಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರು ಬಸವರಾಜ ಮಾಲಿ, ಕಾಂಗ್ರೆಸ್ ಪಕ್ಷದ ಮುಖಂಡರಾದ ಕಸ್ತೂರಿ ವೆಂಕಟರೆಡ್ಡಿ, ಶರಣು ಪಾಟೀಲ ಮೋತಕಪಳ್ಳಿ, ಶರಣು ತೆಂಗನೊರ,
ಡಾ. ತುಕಾರಾಮ ಪವಾರ್, ತಾರಾಸಿಂಗ್ ಚವ್ಹಾಣ, ಜನಾರ್ಧನ್ ಮಡಗು, ಶ್ರೀನಿವಾಸ್ ಅತೆಲಿ, ಮಲ್ಲೇಶ್ ರೋಮಪಲ್ಲಿ, ಪ್ರವೀಣ್ ಅತೆಲಿ ವಿಜಯ್ ಮೊಮಲಾ, ಸಂಜೀವ ಅತೇಲಿ, ಶ್ರೀನಿವಾಸ್ ಮಡಿವಾಳ, ಮತ್ತು ಕೊಂಚಾವರಂ ಗ್ರಾಮದ ಅನೇಕ ಕಾಂಗ್ರೆಸ್ ಮುಖಂಡರು ಇದ್ದರು