ಕೈ ಹೈನೋದ್ಯಮಕ್ಕೆ ಬರೆ :ಎಸ್ ಆರ್ ವಿ

ಬೆಂಗಳೂರು,ಡಿ.೨೩:ಯಲಹಂಕ ತಾಲೂಕಿನ ಪಶು ಆಸ್ಪತ್ರೆಗಳನ್ನ ಸ್ಥಳಾಂತರಿಸಿ ಯಲಹಂಕ ತಾಲೂಕಿನ ಹೈನೋದ್ಯಮಕ್ಕೆ ಸರ್ಕಾರ ಬರೆ ಎಳೆದಿದ್ದಾರೆಂದು ಶಾಸಕ ಎಸ್.ಆರ್.ವಿಶ್ವನಾಥ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಲಹಂಕ ಮಾಧ್ಯಮಕೇಂದ್ರದಲ್ಲಿ ಬಿಜೆಪಿ ಯಲಂಹಂಕ ಕ್ಷೇತ್ರ ಬಿಜೆಪಿ ರೈತಮೋರ್ಚಾ ವತಿಯಿಂದ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಯಲಹಂಕ ಹಾಗೂ ಹೆಸರಘಟ್ಟ ಹೋಬಳಿಯಲ್ಲಿ ಪಶುವೈದ್ಯಕೀಯ ಆಸ್ಪತ್ರೆಗಳನ್ನು ಸರ್ಕಾರ ರದ್ದು ಪಡಿಸಿ ಬೇರೆ ಜಿಲ್ಲೆಗೆ ಸ್ಥಳಾಂತರ ಮಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಯಲಹಂಕ ತಾಲೂಕಿನಲ್ಲಿ ಮಾದಪ್ಪನಹಳ್ಳಿ, ಲಿಂಗನಹಳ್ಳಿ, ಹನಿಯೂರು, ಘಂಟಿಗಾನಹಳ್ಳಿ ಪಶು ಆಸ್ಪತ್ರೆಯನ್ನು ರದ್ದು ಮಾಡಿ ಬೇರೆ ಜಿಲ್ಲೆಗೆ ಸ್ಥಳಾಂತರ ಮಾಡಿದೆ ಇದರಿಂದ ಸಾವಿರಾರು ಜನ ಪಶುಸಂಗೋಪನೆ ಮಾಡುತ್ತಿದ್ದ ರೈತರಿಗೆ ತೊಂದರೆ ಯಾಗಿದೆ. ತಾಲೂಕಿನಲ್ಲಿ ೩೨೮೭೬ರಾಸುಗಳು, ೧೭,೨೧೧ಕುರಿಗಳು, ೧೦೪೩೧೩ಮೇಕೆಗಳು,೫೯೪೭ಹಂದಿಗಳು ೨.೭೩ಕ್ಷ ಕೋಳಿಗಳು ಇವುಗಳನ್ನು ಸಾಕುತ್ತಿದ್ದಾರೆ. ಈ ಇವುಗಳಿಗೆ ಚಿಕಿತ್ಸೆ ದೊರೆಯದೆ ಹೈನೋದ್ಯಮದ ಮೇಲೆ ಬರೆ ಎಳೆದು ಬೀದಿಗೆ ತಳ್ಳಿದಂದಾಗುತ್ತದೆ.
ಬೆಂಗಳೂರು ನಗರ ಜಿಲ್ಲೆಯ ೧೦೧ ಪಶು ಆಸ್ಪತ್ರೆಗಳನ್ನ ಏಕಾಏಕಿ ಸ್ಥಳಾಂತರಿಸುವ ಮೂಲಕ ಜಿಲ್ಲೆಯ ಹೈನೋದ್ಯಮದಲ್ಲಿ ತೊಡಗಿರುವ ರೈತರಿಗೆ ಕಾಂಗ್ರೆಸ್ ಸರ್ಕಾರ ದ್ರೋಹವೆಸಗಿದೆ ಎಂದು ದೂರಿದರು.
ಈ ಭಾಗದಲ್ಲಿ ಪ್ರತಿದಿನ ೧ಲಕ್ಷ ಲೀ.ಹಾಲು ಉತ್ಪಾದನೆ ಆಗುತ್ತದೆ. ಇತ್ತೀಚಿನ ಹೆಚ್ಚು ಹಾಲು ನೀಡುವ ರಾಸುಗಳಿಗೆ ಕಾಲುಬಾಯಿರೋಗ, ಕೆಚ್ಚಲು ಬಾವು,
ಬೊಬ್ಬೆರೋಗದಂತ ಮಾರಕ ಖಾಯಿಲೆಗಳು ಭಾಧಿಸುತ್ತಿವೆ. ಹೈನೋದ್ಯಮ ನಂಬಿಕೊಂಡಿರುವ ಈ ಭಾಗದ ರೈತರಿ ಜೀವನಕ್ಕೆ ಹೊಡೆತ ಬೀಳುತ್ತದೆ. ಪಶುಸಂಗೋಪನೆ ಸಚಿವರು ದಯಮಾಡಿ ಈ ಬಗ್ಗೆ ಗಮನಹರಿಸಿ ಗ್ರಾಮೀಣ ಪ್ರದೇಶದ ಆಸಪತ್ರೆಗಳನ್ನು ವಾಪಾಸ್ ಮಾಡಬೇಕು ಎಂದು ಒತ್ತಾಯಿಸಿದರು. ಬಿಜೆಪಿ ಬೆಂಗಳೂರು ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಕಡತನಮಲೆ ಸತೀಶ್ ಮಾತನಾಡಿ, ರೈತರ ಹೆಸರೇಳಿಕೊಂಡು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ರಾಜ್ಯದ ಎಲ್ಲಾ ರೈತರಿಗೆ ಅನುಕೂಲವಾಗುವಂತೆ ಹೊಸ ಆಸ್ಪತ್ರೆ ಮಾಡಬೇಕಿತ್ತು ಆದರೆ, ಬೆಂಗಳೂರು ಉತ್ತರ ಭಾಗದ ರೈತರಿಗೆ ಮಲತಾಯಿ ಧೋರಣೆ ತೋರಿಸುತ್ತಿದೆ.
ಈ ಆದೇಶವನ್ನು ಈ ಕೂಡಲೇ ಹಿಂಪಡೆಯಬೇಕು ಇಲ್ಲವಾದಲ್ಲಿ ಜಾನುವಾರುಗಳನ್ನು ಹಿಡಿದು ತಂದು ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.