ಕೈ ಸರ್ಕಾರದಿಂದ ಭರವಸೆ ಈಡೇರಿಕೆ – ಡಾ.ಯತೀಂದ್ರ

ಸಿಂಧನೂರು,ಡಿ.೮- ಚುನಾವಣೆ ಸಮಯದಲ್ಲಿ ಕೊಟ್ಟಂತಹ ಭರವಸೆಗಳನ್ನು ಅಧಿಕಾರಕ್ಕೆ ಬಂದ ತರುವಾಯ ಈಡೆರಿಸಿದ ಏಕೈಕ ಸರ್ಕಾರ ನಮ್ಮ ಕಾಂಗ್ರೆಸ್ ಪಕ್ಷದ ಸರ್ಕಾರ ಎಂದು ಮಾಜಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ನಗರಕ್ಕೆ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿ ಕಾಕತೀಯ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡುತ್ತಾ ಐದು ಗ್ಯಾರಂಟಿ ಗಳಲ್ಲಿ ನಾಲ್ಕು ಗ್ಯಾರಂಟಿ ಗಳನ್ನು ಈಡೇರಿಸಿದ್ದು ಉಳಿದ ಇನ್ನು ಒಂದು ಗ್ಯಾರಂಟಿ ಯನ್ನು ಡಿಸೆಂಬರ್ ಅಂತ್ಯಕ್ಕೆ ಭರವಸೆ ಈಡೆರಿಸಲಿದೆ ಮತ್ತು ರಾಜ್ಯ ಮಟ್ಟದಲ್ಲಿ ಅಧಿಕಾರಿಗಳ ವರ್ಗಾವಣೆಯಲ್ಲಿ ನಿಮ್ಮ ಕೈ ಚಳಕ ಇದೆ ಎನ್ನುವ ಪತ್ರಕರ್ತರ ಪ್ರಶ್ನೆಗೆ ನಾನು ಯಾವುದೇ ರೀತಿಯಲ್ಲಿ ಆ ಕೆಲಸಕ್ಕೆ ಮುಂದಾಗಿಲ್ಲ ಸಾಕ್ಷಿ ಇದ್ದರೆ ತೋರಿಸಲಿ .ಆಧಾರ ರಹಿತ ಆರೋಪವನ್ನು ವಿರೋಧ ಪಕ್ಷದವರು ಮಾಡುತ್ತಿದ್ದಾರೆ ಆಗ ಬಿಜೆಪಿ ಪಕ್ಷದಲ್ಲಿ ವಿಜಯೇಂದ್ರ ಅವರದು ವಿ.ಎಸ್.ಟಿ ಆರೋಪ ಇತ್ತು ನನ್ನ ಕಡೆಯಿಂದ ಆ ರೀತಿ ಇಲ್ಲ ಎಂದರು.
ರಾಜಸ್ಥಾನ, ಮಧ್ಯಪ್ರದೇಶ ರಾಜ್ಯಗಳಲ್ಲಿ ಬಾರಿ ಬಹುಮತದ ಫಲಿತಾಂಶ ಬಿಜೆಪಿ ಪಕ್ಷದ್ದಾಯಿತು ಇದು ಲೋಕಸಭಾ ಚುನಾವಣೆಗೆ ಪರಿಣಾಮ ಬೀರಬಹುದಾ ? ಎಂಬ ಪ್ರಶ್ನೆಗೆ ಪ್ರಧಾನಿ ಮೋದಿ ಹಾಗೂ ನಮ್ಮ ಕಾಂಗ್ರೆಸ್ ಪಕ್ಷದ ಸರ್ಕಾರದ ಅಭಿವೃದ್ಧಿ ಕೆಲಸಗಳನ್ನು ಜನ ತುಲನೆ ಮಾಡಿ ಮತ ಹಾಕುತ್ತಾರೆಂದರು.
ಮಸ್ಕಿ ಶಾಸಕ ಬಸನಗೌಡ ತುರವಿಹಾಳ ,ಅನೀಲ್ ಚಿಕ್ಕಮಾಧು ,ರಾಜಶೆಖರ ಹಿಟ್ನಾಳ ,ನಿರುಪಾದೆಪ್ಪ ಗುಡಿಹಾಳ ,ಡಾ.ನಾಗವೇಣಿ ಪಾಟೀಲ್ ,ಶೆಖರಗೌಡ ದೇವರಮನಿ ,ಹುನುಮೇಶ ಬಾಗೋಡಿ ,ಮಲ್ಲಿಕಾರ್ಜುನ ಯದ್ದಲದಿನ್ನಿ ,ವೆಂಕೋಬ ಹುಳ್ಳಿ ,ಸೋಮನಗೌಡ ಬಾದರ್ಲಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.