“ಕೈ” ವಶವಾದ ಚಿತ್ತಾಪುರ ಪುರಸಭೆ ಅಧ್ಯಕ್ಷರಾಗಿ ಚಂದ್ರಶೇಖರ್ ಕಾಶಿ, ಉಪಾಧ್ಯಕ್ಷೆಯಾಗಿ ಶ್ರುತಿ ಪೂಜಾರಿ ಆಯ್ಕೆ

ಚಿತ್ತಾಪುರ:ನ.10: ಸ್ಥಳೀಯ ಪುರಸಭೆಯ ಆಡಳಿತ ಚುಕ್ಕಾಣಿ ಕೈ ವಶವಾಗಿದ್ದು, 2ನೇ ವಾರ್ಡ್‌ನ ಕಾಂಗ್ರೆಸ್‌ ಸದಸ್ಯ ಚಂದ್ರಶೇಖರ್ ವಾಯ್ ಕಾಶಿ, ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ 18 ಮತಗಳು ಪಡೆದು ಅಧ್ಯಕ್ಷರಾಗಿದ್ದರೆ ಹಾಗೂ 11ನೇ ವಾರ್ಡ್‌ನ ಕಾಂಗ್ರೆಸ್‌ ಸದಸ್ಯೆ ಶ್ರುತಿ ಪೂಜಾರಿ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ 18 ಮತಗಳು ಪಡೆದು ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ. ವರಿಷ್ಠರ ಆಯ್ಕೆಗಾಗಿ ಸೋಮವಾರ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಚುನಾವಣಾಧಿಕಾರಿಯೂ ಆಗಿದ್ದ ತಹಸೀಲ್ದಾರ್‌ ಉಮಾಕಾಂತ್ ಹಳ್ಳೆ ಆಯ್ಕೆ ಘೋಷಿಸಿದರು. ಈ ವೇಳೆಯಲ್ಲಿ ಪುರಸಭೆ ಅಧಿಕಾರಿ ಮನೋಜ್ ಕುಮಾರ್ ಗುರಿಕಾರ್, ಸಿಪಿಐ ಕೃಷ್ಣಪ್ಪ ಕಲ್ಲದೇವರ, ಪಿಎಸ್ಐ ಶ್ರೀಶೈಲ್ ಅಂಬಾಟಿ, ಇದ್ದರು.

ಪುರಸಭೆಯ ಒಟ್ಟು 23 ಸದಸ್ಯರಲ್ಲಿ
ಕಾಂಗ್ರೆಸ್ -18, ಬಿಜೆಪಿ-5, ಸದಸ್ಯರಿದ್ದು. ಬಿಜೆಪಿ ಪಕ್ಷದಲ್ಲಿ ಒಬ್ಬ ಸದಸ್ಯ ಗೈರಾಗಿದ್ದರು. ಬಹುಮತ ಹೊಂದಿದ ಕಾಂಗ್ರೆಸ್ ಪಕ್ಷ ಪುರಸಭೆಯ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಬಿಜೆಪಿಯಿಂದ ಅಧ್ಯಕ್ಷ ಸ್ಥಾನಕ್ಕೆ ಸುಶೀಲಾ ದೇವಸುಂದರ, ಉಪಾಧ್ಯಕ್ಷ ಸ್ಥಾನಕ್ಕೆ ಪ್ರಭು ಗಂಗಾಣಿ, ಸ್ಪರ್ಧಿಸಿದರು ಆದರೆ ಬಿಜೆಪಿ ಪಕ್ಷದ ಬಹುಮತ ಇರದ ಕಾರಣ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನ ಬಿಜೆಪಿ ಪಕ್ಷಕ್ಕೆ ದೊರೆಯದಂತಾಗಿದೆ.

ಪಟ್ಟಣದ ಪುರಸಭೆಯ ಒಟ್ಟು 23 ವಾರ್ಡ್‌ಗಳಲ್ಲಿ ಸದಸ್ಯರ ವಿಶ್ವಾಸ ಪಡೆದು ವಾರ್ಡ್‌ಗಳಿಗೆ ಮೂಲ ಸೌಲಭ್ಯ ಕಲ್ಪಿಸಿಕೊಂಡವ ಮೂಲಕ ಕೆಲಸ ಕಾರ್ಯಗಳು ಮಾಡಿಕೊಂಡು ಹೋಗುತ್ತೇವೆ ಎಂದು ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಚಂದ್ರಶೇಖರ್ ಕಾಶಿ ಮಾಧ್ಯಮದವರಿಗೆ ತಿಳಿಸಿದರು.
ಹಾಗೂ ನೂತನವಾಗಿ ಆಯ್ಕೆಯಾದ ಉಪಾಧ್ಯಕ್ಷೆ ಶ್ರೀಮತಿ ಶ್ರುತಿ ಪೂಜಾರಿ ಮಾತನಾಡಿ ಪ್ರತಿ ವಾರ್ಡಿನ ಮಹಿಳೆಯರ ಸಮಸ್ಯೆಗೆ ಸ್ಪಂದಿಸಿ ಪುರಸಭೆಯಿಂದ ಆಗಬೇಕಾದ ಕೆಲಸ ಕಾರ್ಯಗಳನ್ನು ಮಾಡಿಕೊಡುವ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.

ಕಾಂಗ್ರೆಸ್ ಕಚೇರಿಯಲ್ಲಿ ನೂತನವಾಗಿ ಆಯ್ಕೆಯಾದ ಅಧ್ಯಕ್ಷರು ಉಪಾಧ್ಯಕ್ಷರಿಗೆ ಸನ್ಮಾನಿಸಿ ಅಭಿನಂದಿಸಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮವನ್ನು ಆಚರಿಸಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ವಿಧಾನ ಪರಿಷತ್ ಮಾಜಿ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ್, ಎಪಿಎಂಸಿ ಅಧ್ಯಕ್ಷ ಸಿದ್ದುಗೌಡ ಅಫಜಲಪುರ, ಜಗದೇವರೆಡ್ಡಿ ಪಾಟೀಲ್, ಶಿವಾನಂದ್ ಪಾಟೀಲ್, ಶಿವರುದ್ರ ಬೇಣಿ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ರಮೇಶ್ ಮರಗೋಳ, ಅಣ್ಣಾರಾವ್ ಸಣ್ಣೂರಕರ್, ಮಲ್ಲಿಕಾರ್ಜುನ ಕಾಳಗಿ, ಶ್ರೀಮತಿ ಶೀಲಾ ಕಾಶಿ, ಸಂತೋಷ್ ಚೌದ್ರಿ, ಶಿವರಾಜ ಪಾಳ್ಯದ, ಅತೀಯಾ ಬೇಗಮ್ ಅನ್ನಪೂರ್ಣ ಕಲ್ಲಾಕ್, ಪಾಷಮಿಯ ಖುರೇಷಿ, ಶಿವಕಾಂತ್ ಬೆಣ್ಣೂರ್, ಸುನಿಲ್ ದೊಡ್ಡಮನಿ, ನಜೀರ್ ಆಡಿಕಿ, ನಾಗಯ್ಯ ಗುತ್ತೇದಾರ್, ಸಂತೋಷ್ ಪೂಜಾರಿ, ಸಾಬಣ್ಣ ಕಾಶಿ, ಸುರೇಶ್ ಗುತ್ತೇದಾರ್, ಸೇರಿದಂತೆ ಇತರರು ಇದ್ದರು.