‘ಕೈ ಮುಗಿತಿನ್ರೀ ಯಪ್ಪಾ ಹೊರಗ ಬರಬ್ಯಾಡ್ರಿ’: ಬೈಕ್ ಸವಾರನ ಮುಂದೆ ಕೈಜೋಡಿಸಿ ನಿಂತ ಲೇಡಿ ಪಿಎಸ್ಐ

ಕಲಬುರಗಿ:ಮೇ. 28: ‘ಕೈ ಮುಗಿತಿನ್ರೀ ಯಪ್ಪಾ ಹೊರಗ ಬರಬ್ಯಾಡ್ರಿ’ ಎಂದು ಮಹಿಳಾ ಪೊಲೀಸ್​ ಅಧಿಕಾರಿಯೊಬ್ಬರು ಬೈಕ್ ಸವಾರನಿಗೆ ಕೈಜೋಡಿಸಿ ಮನವಿ ಮಾಡಿದ ಘಟನೆ ನಗರದಲ್ಲಿ ನಡೆದಿದೆ.
ಮಾಹಾಮಾರಿ ಕೊರೊನಾ ಜನರ ಪ್ರಾಣ ತಿನ್ನುತ್ತಿದೆ. ದಯವಿಟ್ಟು ಮನೆಯಿಂದ ಹೊರಗೆ ಬರಬೇಡಿ ಎಂದು ಟ್ರಾಫಿಕ್​ ಪಿಎಸ್ ಐ ಭಾರತಿಬಾಯಿ ದನ್ನಿ ಅವರು, ಬೈಕ್ ಸವಾರಿಗೆ ಕೈಮುಗಿದು ಬೇಡಿಕೊಂಡಿದ್ದಾರೆ.
ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗಿವೆ. ಜೊತೆಗೆ ಸಾವು-ನೋವುಗಳು ಸಹ ಹೆಚ್ಚು ಸಂಭವಿಸುತ್ತಿವೆ. ಆಸ್ಪತ್ರೆಯಲ್ಲಿ ಬೆಡ್ ಸಿಗುತ್ತಿಲ್ಲ, ಆಕ್ಸಿಜನ್ ಸಮಸ್ಯೆ ಕಾಡುತ್ತಿದೆ. ದಯವಿಟ್ಟು ಹೊರಗಡೆ ‌ಬರದಿರಿ. ಮನೆಯಲ್ಲೇ ನೀವು ಸುರಕ್ಷಿತವಾಗಿರಿ.
ನಿಮ್ಮ ಕುಟುಂಬವನ್ನು ಸುರಕ್ಷಿತವಾಗಿರಿಸಿ ಎಂದು ಭಾರತಿಬಾಯಿ ಅವರು ಬೈಕ್ ಸವಾರಲ್ಲಿ ಬೇಡಿಕೊಂಡಿದ್ದಾರೆ.ಕಲಬುರಗಿಯಲ್ಲಿ ಕಠಿಣ ಲಾಕ್​ಡೌನ್​ ಜಾರಿಗೊಳಿಸಿದರು ಸಹ ಜನ ಕೇಳುತ್ತಿಲ್ಲ. ಅನಗತ್ಯವಾಗಿ ಮನೆಯಿಂದ ಹೊರಗಡೆ ಬಂದು ಸುತ್ತಾಡುತ್ತಿದ್ದಾರೆ‌. ಪೊಲೀಸರು ಬೈಕ್ ಸಿಜ್ ಮಾಡಿದ್ರೂ ಸಹ ಜನ ಹೆದರುತ್ತಿಲ್ಲ. ಇದು ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.