ಕೈ ಮುಖಂಡ ಈಶ್ವರ್ ಖಂಡ್ರೆಗೆ 5 ಲಕ್ಷ ರೂ ದಂಡ

ಬೆಂಗಳೂರು, ನ 18- ಚುನಾವಣಾ ತಕರಾರು ಪ್ರಕರಣದ ವಿಚಾರಣೆಗೆ ಗೈರುಹಾಜರಾದ ಕಾಂಗ್ರೆಸ್ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅವರಿಗೆ ಹೈಕೋರ್ಟ್ ಐದು ಲಕ್ಷ ರೂ ದಂಡ ವಿಧಿಸಿದೆ.
ಡಿ.ಕೆ.ಸಿದ್ರಾಮ ಅವರು ಈಶ್ಬರ್ ಖಂಡ್ರೆ ವಿರುದ್ಧ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ವೇಳೆ ನ್ಯಾಯಾಲಯಕ್ಕರ ಹಾಜರಾಗದ ಕಾರಣ ಖಂಡ್ರೆ‌ಅವರಿಗೆ ಐದು ಲಕ್ಷ ರೂ ದಂಡ ವಿಧಿಸಿದೆ. ಈ ಹಣವನ್ನು ಮುಖ್ಯಮಂತ್ತಿಗಳ ಕೋವಿಡ್ -19 ಪರಿಹಾರ ನಿಧಿಗೆ ನೀಡುವಂತೆ ನ್ಯಾಯಾಲಯ ಆದೇಶಿಸಿದೆ.
ಖಂಡ್ರೆ ಅವರು ಚುನಾವಣೆಯಲ್ಲಿ ಭಾರೀ ಅಕ್ರಮ ಎಸಗಿದ್ದಾರೆಂದು ಆರೋಪಿಸಿ ಸಿದ್ರಾಮ ಅವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಅಲ್ಲದೆ ಖಂಡ್ರೆಯವರು ಆಸ್ತಿ ವಿವರ ಬಹಿರಂಗಪಡಿಸಿಲ್ಲ. ಹೀಗಾಗಿ ಖಂಡ್ರೆ ಅವರನ್ನು ಅಸಿಂಧುಗೊಳಿಸಬೇಕೆಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದರು.
ಈ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಈಶ್ವರ್ ಖಂಡ್ರೆ ಅವರಿಗೆ ಹೈಕೋರ್ಟ್ ನೋಟೀಸ್ ನೀಡಿತ್ತು. ಆದರೆ ಖಂಡ್ರೆ ವಿಚಾರಣೆಗೆ ಗೈರುಹಾಜರಾದ ಕಾರಣ ನ್ಯಾಯಾಲಯ ದಂಡ ವಿಧಿಸಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಈಶ್ವರ್ ಖಂಡ್ರೆ ತಮ್ಮ ಆಪ್ತ ಸಹಾಯಕನಿಗೆ ಮರವಿನ ಕಾಯಿಲೆ ಇರುವುದರಿಂದ ವಿಚಾರಣಾ ದಿನಾಂಕ ತಮ್ಮ ಗಮನಕ್ಕೆ ಬಂದಿಲ್ಲ ಎಂದು ಕೋರ್ಟಿಗೆ ಅರ್ಜಿ ಹಾಕಿದ್ದಾರೆ‌.
ಆದರೆ ನ್ಯಾಯಾಧೀಶ ಕೃಷ್ಣ ಎಸ್.ದೀಕ್ಷಿತ್ ಅವರನ್ನೊಳಗೊಂಡ ಪೀಠ ಐದು ಲಕ್ಷ ರೂ ದಂಡ ಹಾಕಿದೆ.