ಕೈ ಮಡಿಲಿಗೆ ಹರವಿ ಗ್ರಾಮ ಪಂಚಾಯತ

ಸಿರವಾರ ಆ೦೫: ತಾಲೂಕಿನ ಹರವಿ ಗ್ರಾಮ ಪಂಚಾಯತಿ ಯ ಎರಡನೇ ಅವಧಿಗೆ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ಗುರುವಾರ ನಡೆಯಿತು.
ಶರಣಬಸವ ತಂದೆ ಪಂಪಣ್ಣ ಇವರು ೧೦ ಮತಗಳನ್ನು ಪಡೆದು ಅಧ್ಯಕ್ಷರಾಗಿ ಆಯ್ಕೆಯಾದರು. ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದ ಶಿವಮ್ಮ ಗಂಡ ಹಂಪಯ್ಯ ಇವರು ೧೨ ಮತಗಳನ್ನು ಪಡೆದು ಉಪಾಧ್ಯಕ್ಷರಾಗಿ ಚುನಾಯಿತರಾದರು. ಚುನಾವಣೆ ಅಧಿಕಾರಿಯಾಗಿ ತಾಲೂಕ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಯಾದ ಉಮೇಶ ಕರ್ತವ್ಯ ನಿರ್ವಹಿಸಿದರು.
ಪೊಲೀಸರು ಸೂಕ್ತ ಬಂದೋಬಸ್ತ್ ಒದಗಿಸಿದ್ದರು.
ಗ್ರಾಮ ಪಂಚಾಯತಿ ಸದಸ್ಯರಾದ ಶಶಿಧರ ಗೌಡ ಮಾಲೀ ಪಾಟೀಲ, ಯಂಕಪ್ಪ ನಾಯಕ,ಬಸಪ್ಪ ನಾಯಕ, ಪೋಮಣ್ಣ ರಾಥೋಡ್,ಯಲಪ್ಪ ಗೋನಕ್ಕಿ,ಹನುಮಂತ ನಾಯಕ,ನಾಗರಾಜ ಹಡಪದ,ಭೀಮಣ್ಣ ಭೋವಿ,ದ್ಯಾವಪ್ಪ, ಮುಖಂಡರಾದ ಬಸಪ್ಪ ಗೌಡ, ಮರಿಸಿದಪ್ಪ ಹೊರಗಳ ಮನೆ,ಗಡ್ಡಂ ರೆಡ್ಡಿ, ಎಮ್ ಮಾರಪ್ಪ ನಾಯಕ, ಗೋಪಾಲ ನಾಯಕ ಹರವಿ ಸೇರಿದಂತೆ ಇತರರು ಇದ್ದರು.