ಕೈ ಮಗ್ಗ ಮೇಳಕ್ಕೆ ಸಚಿವ ಬೈರತಿ ಚಾಲನೆ

ಕೋಲಾರ, ಆ. ೧೭- ನಗರದ ಪೊಲೀಸ್ ಸಮುದಾಯ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕೈಮಗ್ಗ ಮತ್ತು ಜವಳಿ ಇಲಾಖೆ ಇವರುಗಳ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಕೈ ಮಗ್ಗ ಮೇಳವನ್ನು ನಗರಾಭಿವೃದ್ದಿ ಮತ್ತು ನಗರ ಯೋಜನೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎಸ್.ಬೈರತಿ ಸುರೇಶ್ ಉದ್ಘಾಟಿಸಿದರು,
ಈ ಸಂದರ್ಭದಲ್ಲಿ ಸಂಸದ ಎಸ್.ಮುನಿಸ್ವಾಮಿ ಅವರು ಮಾತನಾಡಿ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಜೀ ಅವರು ಆತ್ಮನಿರ್ಬಾರ್ ಯೋಜನೆಯ ಮೂಲಕ ಸ್ವದೇಶಿ ವಸ್ತುಗಳ ಉತ್ಪನ್ನಗಳಿಗೆ ಹೆಚ್ಚಿನ ಉತ್ತೇಜನ ನೀಡಲು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಅವುಗಳಲ್ಲಿ ಇದು ಸಹ ಒಂದಾಗಿದ್ದು ಸ್ವದೇಶಿ ಉತ್ಪನ್ನಗಳನ್ನು ಹೆಚ್ಚಾಗಿ ಬಳಿಸುವ ಮೂಲಕ ಮಾರುಕಟ್ಟೆ ಒದಗಿಸಿ ನಿರುದ್ಯೋಗ ಸಮಸ್ಯೆಗಳನ್ನು ನೀಗಿಸ ಬೇಕಾಗಿದೆ ಎಂದರು,
ಗ್ರಾಮೀಣಾ ಭಾಗದ ಪಂಚಾಯಿತಿ ಮಟ್ಟದಲ್ಲಿ ಕೈಮಗ್ಗದ ತರಬೇತಿಗಳನ್ನು ನೀಡುವ ಮೂಲಕ ಉದ್ಯೋಗವನ್ನು ಸೃಷ್ಠಿಸುವ ಮೂಲಕ ಸ್ವಾವಲಂಭಿ ಬದುಕಿಗೆ ಕೌಶಲ್ಯ ಅಭಿವೃದ್ದಿ ಪಡೆಸಬೇಕಾಗಿದೆ ಸ್ವದೇಶಿ ಉತ್ಪನ್ನಗಳನ್ನು ಹೆಚ್ಚಾಗಿ ಉತ್ಪಾದಿಸುವ ಮೂಲಕ ವಿದೇಶಿ ಬಳಕೆಗೆ ಕಡಿವಾಣ ಹಾಕ ಬೇಕಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೀಡುವಂತ ಪ್ರೋತ್ಸಾಹ ಮತ್ತು ರಿಯಾಯಿತಿ ಸೌಲಭ್ಯಗಳನ್ನು ಸದ್ಬಳಕೆಗೆ ಕರೆ ನೀಡಿದರು,
ರಾಜ್ಯ ಸಹಕಾರ ಕೈಮಗ್ಗ ನೇಕಾರರ ಮಹಾಮಂಡಳ ನಿಯಮಿತ ಅಧ್ಯಕ್ಷ ಬಿಜೆ ಗಣೇಶ್ ಮಾತನಾಡಿ ಜಿಲ್ಲಾ ಮಟ್ಟದ ಕೈಮಗ್ಗ ಮೇಳವನ್ನು ವಸ್ತ್ರ ಸಿರಿ ಹೆಸರಿನಲ್ಲಿ ಇಂದಿನಿಂದ ಆಗಸ್ಟ್ ೨೩ರವರೆಗೆ ಪೊಲೀಸ್ ಸಮುದಾಯ ಭವನದಲ್ಲಿ ಆಯೋಜಿಸಿದೆ. ಈ ಮೇಳದಲ್ಲಿ ರಾಜ್ಯದ್ಯಂತ ಕೈಮಗ್ಗ ನೇಕಾರರು ಭಾಗವಹಿಸಿದ್ದಾರೆ. ವಿವಿಧ ಬಗೆಯ ಕೈಮಗ್ಗದ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ವರಮಹಾಲಕ್ಷ್ಮೀ ಹಬ್ದ ಪ್ರಯುಕ್ತ ಮೇಳವನ್ನು ಆಯೋಜಿಸಿದೆ. ಇದರಿಂದ ಖರೀದಿದಾರರಿಗೆ ನೇರವಾಗಿ ಉತ್ಪಾದಕರಿಂದಲೇ ಖರೀದಿಗೆ ಅವಕಾಶ ಕಲ್ಪಿಸಿದೆ. ಶೇ ೨೦ರಷ್ಟು ರಿಯಾಯಿತಿಯ ಕಡಿಮೆ ಬೆಲೆಯಲ್ಲಿ ಉತ್ಪನ್ನಗಳು ಲಭ್ಯವಾಗುವುದನ್ನು ಜನತೆ ಸದ್ಬಳಿಸಿ ಕೊಳ್ಳ ಬೇಕೆಂದರು,
ಈ ಸಂದರ್ಭದಲ್ಲಿ ಶಾಸಕ ಡಾ.ಜಿ.ಕೊತ್ತೂರು ಮಂಜುನಾಥ್, ವಿಧಾನ ಪರಿಷತ್ ಸದಸ್ಯರಾದ ಎಂ.ಎಲ್. ಅನಿಲ್ ಕುಮಾರ್, ಇಂಚರ ಗೋವಿಂದರಾಜು, ಜಿಲ್ಲಾಧಿಕಾರಿ ಅಕ್ರಂಪಾಷ, ಎಸ್.ಪಿ. ಎಂ. ನಾರಾಯಣ್, ಜಿ.ಪಂ. ಸಿ.ಇ.ಓ. ಪದ್ಮ ಬಸಂತಪ್ಪ, , ರಾಜ್ಯ ಕೈಮಗ್ಗ ಮತ್ತು ಜವಳಿ ಇಲಾಖೆ ಉಪನಿರ್ದೇಶಕ ಕೆ.ಎಸ್. ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು,