ಕೈ ಬರಹ ಸ್ಪರ್ಧೆ:ವಿಜೇತರಿಗೆ ಬಹುಮಾನ ವಿತರಣೆ


ಸಂಜೆವಾಣಿ ವಾರ್ತೆ
ಹೊಸಪೇಟೆ ಜ29: ಬ್ರೈಟ್ ಸಂಸ್ಥೆ ವತಿಯಿಂದ ನಗರದಲ್ಲಿ ಒಂದರಿಂದ ಹತ್ತನೇ ತರಗತಿ ವಿದ್ಯಾರ್ಥಿಗಳಿಗಾಗಿ ನಗರದ ರೋಟರಿ ಹಾಲ್‍ನಲ್ಲಿ ಕೈ ಬರಹ ಸುಧಾರಣೆ ಸ್ಪರ್ಧೆಯನ್ನು ಭಾನುವಾರ ಆಯೋಜಿಸಲಾಗಿತ್ತು.
1 ರಿಂದ 2, 3 ರಿಂದ 4, 5 ರಿಂದ 6, 7 ರಿಂದ 8 ಹಾಗೂ 9 ರಿಂದ 10 ತರಗತಿಯ ವಿದ್ಯಾರ್ಥಿಗಳಿಗಾಗಿ ಒಟ್ಟು ಐದು ತಂಡಗಳಲ್ಲಿ ರಚಿಸಿ, ಸ್ಪರ್ಧೆಗಳನ್ನು ನಡೆಸಲಾಯಿತು.
ಮೊದಲ ಗುಂಪಿನಿಂದ ಅಜೀತ್ ಕುಮಾರ್ ಎಸ್., ಶುಶಾಂತ್ ಕೋಳೂರು, ಆರ್ಯನ್ ಶೆಟ್ಟಿ. ಎರಡನೇ ಗುಂಪಿನಿಂದ ಸಾನ್ವಿ ಎಚ್., ನೇಹಾ ವಿ., ಟಿ ಮೆಹ್ರಾನ್, ಮೂರನೇ ಗುಂಪಿನಿಂದ ಇಶಿಕಾ ಎಂ., ಶ್ರೀನಿಧಿ ಎಂ., ಚಿನ್ಮಯಿ ವಿ.,ಹಾಗೂ ನಾಲ್ಕನೇ ಗುಂಪಿನಿಂದ ಜೋಯಾ ಕ್ವಾದ್ರಿ., ಚಂದನಾ ಟಿ.ಆರ್., ಶ್ರಾವ್ಯ ವಿ.ಆರ್., ಬಿಂಧು ಎಂ., ಐದನೇ ಗುಂಪನಿಂದ ಪಿ.ಎಂ.ಸುಮೇಧಾ, ಶ್ರೇಯಾ ಆರ್.ಕೆ. ಹಾಗೂ ಟಿ ನಿಖಿತಾ ಸ್ಪರ್ಧೆಯಲ್ಲಿ ವಿಜೆತರಾಗಿದ್ದಾರೆ. ಅವರಿಗೆ ನೆನಪಿನ ಕಾಣಿಕೆ ಹಾಗೂ ಪ್ರಮಾಣ ಪತ್ರವನ್ನು ವಿತರಿಸಲಾಗಿದೆ ಎಂದು ಸಂಸ್ಥೆ ಆಡಳಿತಾಧಿಕಾರಿ ರೂಪಶ್ರೀ ಮುದಗಲ್ ತಿಳಿಸಿದ್ದಾರೆ.

One attachment • Scanned by Gmail