’ಕೈ ಪ್ರಣಾಳಿಕೆ ಸುಳ್ಳಿನ ಕಂತೆ’

ನವದೆಹಲಿ,ಏ.೭- ಲೋಕಸಭೆ ಚುನಾವಣೆಗೆ ಇನ್ನೂ ಎರಡು ವಾರ ಬಾಕಿ ಉಳಿದಿರುವಂತೆಯೇ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು “ಕಾಂಗ್ರೆಸ್ ಪ್ರಣಾಳಿಕೆ ಸುಳ್ಳಿನ ಕಂತೆ”ಎಂದು ಹರಿಹಾಯ್ದಿದ್ದಾರೆ.ಪ್ರಣಾಳಿಕೆ ದಾಖಲೆಯ ಪ್ರತಿಯೊಂದು ಪುಟದಲ್ಲಿಯೂ ಭಾರತವನ್ನು ಛಿದ್ರಗೊಳಿಸುವ ಪ್ರಯತ್ನಗಳನ್ನು ಕಾಂಗ್ರೆಸ್ ನಡೆಸುತ್ತಿದೆ ಎಂದು ಅವರು ದೂರಿದ್ದಾರೆ.ರಾಜಸ್ಥಾನದ ಅಜ್ಮೀರ್‍ನಲ್ಲಿ ಚುನಾವಣಾ ರಾಲಿ ಉದ್ದೇಶಿಸಿ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷದ ಆಲೋಚನೆಗಳು ಸ್ವಾತಂತ್ರ್ಯ ಪೂರ್ವದ ಅವಧಿಯಲ್ಲಿ ಮುಸ್ಲಿಂ ಲೀಗ್‌ನ ಆಲೋಚನೆಗಳನ್ನು ಹೋಲುತ್ತವೆ ಎಂದು ಆರೋಪಿಸಿದ್ದಾರೆ.”ಕಾಂಗ್ರೆಸ್ ತನ್ನ ಪ್ರಣಾಳಿಕೆಯ ರೂಪದಲ್ಲಿ ಪಕ್ಷದ ಮುಖವಾಡವನ್ನು ಬಿಚ್ಚಿಟ್ಟು ಸುಳ್ಳಿನ ಕಂತೆಗಳನ್ನು ಬಿಡುಗಡೆ ಮಾಡಿದೆ. ದೇಶದಲ್ಲಿ ಮುಸ್ಲಿಂ ಲೀಗ್ ಅನ್ನು ಹೇರಲು ಕಾಂಗ್ರೆಸ್ ಬಯಸುತ್ತದೆ. ಇಂದಿನ ಭಾರತದ ಬಗ್ಗೆ ಆ ಯುಗದ ಆಲೋಚನೆಗಳು ಮತ್ತು ಪ್ರಣಾಳಿಕೆಯಲ್ಲಿ ಉಳಿದಿರುವುದು ಕಮ್ಯುನಿಸ್ಟ್ ಮತ್ತು ಎಡಪಂಥೀಯ ಚಿಂತನೆಗಳಿಂದ ಪ್ರಾಬಲ್ಯ ಹೊಂದಿದೆ” ಎಂದು ತಿಳಿಸಿದ್ದಾರೆಇಂದಿನ ಕಾಂಗ್ರೆಸ್ ತತ್ವ ಮತ್ತು ನೀತಿಗಳಿಂದ ವಂಚಿತವಾಗಿದೆ. ಪಕ್ಷ ಎಲ್ಲವನ್ನೂ ಹೊರಗುತ್ತಿಗೆ ನೀಡಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಇಂತಹ ಪಕ್ಷದಿಂದ ದೇಶದ ಹಿತಾಸಕ್ತಿಗೆ ಏನಾದರೂ ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆಕಾಂಗ್ರೆಸ್ ಪ್ರಣಾಳಿಕೆಯನ್ನು ನೋಡಿದರೆ ಭಾರತವನ್ನು ಹಿಂದಿನ ಶತಮಾನಕ್ಕೆ ತಳ್ಳಲು ಬಯಸುತ್ತಾರೆ ಎಂಬುದು ಸ್ಪಷ್ಟವಾಗಿದೆ … ಕಾಂಗ್ರೆಸ್ ಎಂದಿಗೂ ಮಹಿಳಾ ಶಕ್ತಿ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಸ್ವಾತಂತ್ರ್ಯದ ನಂತರ ಮಹಿಳೆಯರು ತಲೆಮಾರುಗಳು ಅನುಭವಿಸಿದ್ದಾರೆ ಎಂದು ತಿಳಿಸಿದ್ದಾರೆ.

ಕೇಂದ್ರದಿಂದ ಹಲವು ಯೋಜನೆ

ಶೌಚಾಲಯಗಳ ನಿರ್ಮಾಣ ಮತ್ತು ಗರ್ಭಿಣಿ ಮಹಿಳೆಯರಿಗೆ ಎಲ್‌ಪಿಜಿ ಸಿಲಿಂಡರ್‍ಗಳು, ನಲ್ಲಿ ಮೂಲಕ ಶುದ್ಧ ಕುಡಿಯುವ ನೀರು ಮತ್ತು ಪೌಷ್ಟಿಕಾಂಶವನ್ನು ಒದಗಿಸುವ ಯೋಜನೆಗಳನ್ನು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಜಾರಿ ಮಾಡಿದೆ. ತಮ್ಮ ಸರ್ಕಾರವು ಮಹಿಳೆಯರಿಗಾಗಿ ಮಾತ್ರವಲ್ಲದೆ ಹುಟ್ಟಲಿರುವ ಶಿಶುಗಳ ಬಗ್ಗೆಯೂ ಕಾಳಜಿ ವಹಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ವೀರ ಹೆಣ್ಣುಮಕ್ಕಳು ಸೇನೆಗೆ ಸೇರಲು ಸಾಧ್ಯವಾಗಿರಲಿಲ್ಲ. ಅದರ ಬಾಗಿಲು ತೆರೆಯಲು ಮೋದಿಯೇ ಬರಬೇಕಾಯಿತು. ಸೈನಿಕ ಶಾಲೆಗಳ ಬಾಗಿಲು ತೆರೆದಿದ್ದೇವೆ. ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆಯನ್ನು ಖಾತರಿಪಡಿಸಿದ್ದೇವೆ. ಮಹಿಳೆಯರಿಗೆ ಮೀಸಲಾತಿಗಾಗಿ ಕಾನೂನನ್ನು ಜಾರಿಗೊಳಿಸಿದ್ದೇವೆ ಎಂದು ತಿಳಿಸಿದ್ದಾರೆ