ಕೈ ನಿಂದ ಸುಳ್ಳು ಭರವಸೆ ಕಟೀಲ್ ಗೇಲಿ

ಹೊಸಪೇಟೆ, ಮಾ.೧೭- ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಗ್ಯಾರಂಟಿ ಇಲ್ಲದ ಕಾರಣ ಗ್ಯಾರಂಟಿ ಕಾರ್ಡ್ ನೀಡಲು ಮುಂದಾಗಿ ೬೦ ವರ್ಷಗಳ ನಂತರ ಮತ್ತೊದು ಹೊಸ ಸುಳ್ಳು ಹೇಳಲು ಮುಂದಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ ಕುಮಾರ ಕಟೀಲ್ ಹೇಳಿದರು.
ಹೊಸಪೇಟೆಯಲ್ಲಿ ನಡೆದ ಮಹಿಳಾ ಸಮಾವೇಶದಲ್ಲಿ ಮಾತನಾಡಿದ ಅವರು ಅಧಿಕಾರ ನಡೆಸಿದ ೭೦ವರ್ಷ ಮಾಡಲಾಗದ ಅಭಿವೃದ್ಧಿ ಇದೀಗ ಮಾಡಬೇಕು, ಅಭಿವೃದ್ಧಿ ಮಾಡದಿದ್ದರೆ ಅಧಿಕಾರಕ್ಕೆ ಅಲ್ಲಾ ಹೇಳಿಕೊಳ್ಳಲು ನಾವು ಇರುವುದಿಲ್ಲಾ ಎಂದು ಗೊತ್ತಾಗಿ ಇದೀಗ ಗ್ಯಾರಂಟಿ ಕಾರ್ಡ್ ನೀಡಿ ನಾವು ಬರೋದಿಲ್ಲಾ ಎಂದು ಖಾತ್ರಿಪಡಿಸಿಕೊಂಡು ಜನರನ್ನು ವಂಚಿಸಲು ಗ್ಯಾರಂಟಿ ಕಾರ್ಡ್ ನೀಡಲು ಮುಂದಾಗಿದೆ ಎಂದರು ಯಾರು ಎಷ್ಟೆ ಹೇಳಿದರು ಸಾರ್ವಜನಿಕರಿಗೆ ದಾರಿ ತಪ್ಪಿಸಲು ಸಾಧ್ಯವಿಲ್ಲ ಅತ್ಯಂತ ಪ್ರಭುದ್ದರಿರುವ ಮತದಾರರು ಬಿಜೆಪಿಗೆ ಬೆಂಬಲವಾಗಿ ನಿಲ್ಲಲಿದ್ದಾರೆ ಎಂದರು.