ಕೈ ನಿಂದ ದ್ವೇಷ ರಾಜಕಾರಣ

ಬೆಂಗಳೂರು,ಮೇ೨೭:ಕಾಂಗ್ರೆಸ್ ಸರ್ಕಾರದ ಆಡಳಿತ ದ್ವೇಷದ ಮೂಲಕ ಆರಂಭವಾಗಿದೆ. ಕಾಂಗ್ರೆಸ್ ಸರ್ಕಾರ ದ್ವೇಷ ರಾಜಕಾರಣ ಮಾಡುತ್ತಿದೆ ಎಂದು ಬಿಜೆಪಿ ಶಾಸಕ ಬಿ.ವೈ. ವಿಜಯೇಂದ್ರ ಹೇಳಿದರು.
ಬೆಂಗಳೂರು ಅಂತಾರಾಷ್ಟ್ರೀಯವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣವೇ ಬಿಜೆಪಿಯ ಶಾಸಕರಾದ ಹರೀಶ್‌ಪೂಂಜಾ ಮತ್ತು ಅಶ್ವತ್ಥ ನಾರಾಯಣ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಹಾಗೆಯೇ ಹತ್ಯೆಯಾದ ಪ್ರವೀಣ್‌ನೆಟ್ಟಾರು ಪತ್ನಿಗೆ ನೀಡಿದ್ದ ಅನುಕಂಪದ ನೌಕರಿಯನ್ನು ಕಿತ್ತುಕೊಂಡಿದೆ. ಇದು ಸರಿಯಲ್ಲ. ಈ ತರಹದ ಕೀಳು ಮಟ್ಟಕ್ಕೆ ಕಾಂಗ್ರೆಸ್ ಸರ್ಕಾರ ಇಳಿಯುತ್ತದೆ ಎಂಬ ನಿರೀಕ್ಷೆ ನನಗಿರಲಿಲ್ಲ ಎಂದರು.
ಕಾಂಗ್ರೆಸ್ ಸರ್ಕಾರದ ಸಂಪುಟ ವಿಸ್ತರಣೆ ಬಗ್ಗೆ ಪ್ರತಿಕ್ರಿಯಿಸದ ಅವರು ತಡವಾಗಿಯಾದರೂ ಪೂರ್ಣಪ್ರಮಾಣದ ಸಂಪುಟ ಅಸ್ಥತ್ವಕ್ಕೆ ಬರುತ್ತಿರುವುದು ಸಂತೋಷ, ಕಾಂಗ್ರೆಸ್ ಚುನಾವಣೆ ವೇಳೆ ಸಾಕಷ್ಟು ಭರವಸೆ ನೀಡಿತ್ತು. ಗ್ಯಾರೆಂಟಿ ಯೋಜನೆಗಳ ತಕ್ಷಣವೇ ಜಾರಿ ಮಾಡಬೇಕು ಎಂದು ಆಗ್ರಹಿಸಿದರು.