ಕೈ ನಾಯಕ ರಾಹುಲ್ ಗಾಂಧಿಗೂ ತಟ್ಟಿದ ಟ್ರಾಫಿಕ್ ಜಾಮ್ ಬಿಸಿ

ದಾವಣಗೆರೆ: ದಾವಣಗೆರೆಯಲ್ಲಿ ಆಯೋಜಿಸಲಾಗಿದ್ದ ಸಿದ್ದರಾಮಯ್ಯರ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿ ಮಧ್ಯಾಹ್ನ 2.30ರ ಒಳಗಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬೆಂಗಳೂರಿಗೆ ವಾಪಾಸ್ಸಾಗಿ, ದೆಹಲಿಗೆ ತೆರಳಬೇಕಾಗಿದ್ದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಕೂಡ ಸಂಚಾರದ ಒತ್ತಡದಲ್ಲಿ ಸಿಲುಕಿದ್ದಾರೆ.ಕೇವಲ ರಾಹುಲ್ ಗಾಂಧಿ ಮಾತ್ರವಲ್ಲದೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವರು ಕೂಡ ಟ್ರಾಫಿಕ್‍ನಲ್ಲಿ ಸಿಲುಕಿದ್ದಾರೆ. ಕಾರ್ಯಕ್ರಮದ ಸ್ಥಳದಿಂದ ಸುಮಾರು 20 ಕಿಲೋಮೀಟರ್ ದೂರದಲ್ಲಿ ವಾಹನಗಳ ಸಂಚಾರದ ಒತ್ತಡದಿಂದಾಗಿ ಟ್ರಾಪಿಕ್ ಜಾಮ್‍ನಲ್ಲಿ ಸಿಲುಕಿದ್ದರು, ಕೈ ನಾಯಕರೂ ಸಹ ಟ್ರಾಫಿಕ್ ಜಾಮ್ ಬಿಸಿ ಅನುಭವಿಸಿದ್ದಾರೆ.ಕಾರ್ಯಕ್ರಮದ ಸ್ಥಳಕ್ಕೆ ಚಿತ್ರದುರ್ಗದಿಂದ ದಾವಣಗೆರೆ ಕಡೆಗೆ ಆಗಮಿಸಿದ ರಾಹುಲ್ ಗಾಂಧಿ ಇತರರು ದಾವಣಗೆರೆಗಿಂತ ಮುಂಚೆಯೇ ಇರುವ ಆವರಗೆರೆಯ ರಾಷ್ಟ್ರೀಯ ಹೆದ್ದಾರಿಯಿಂದಲೂ ಟ್ರಾಫಿಕ್ ಜಾಮ್ ಆಗಿದೆ. ಕೇವಲ ವಾಹನಗಳು ಮಾತ್ರವಲ್ಲದೇ ಸಮಾರಂಭಕ್ಕೆ ಜನರು ರಸ್ತೆ ಮೂಲಕವೇ ಸಾಗುತ್ತಿರುವ ಕಾರಣ ಭದ್ರತೆ, ಝೀರೋ ಟ್ರಾಫಿಕ್‍ನಲ್ಲಿ ಸಾಗಬೇಕಾಗಿದ್ದ ಕೈ ವರಿಷ್ಠರು ಟ್ರಾಫಿಕ್‍ನಲ್ಲಿ ಸಿಲುಕಿದ್ದಾರೆ.ಕಾರಣ ಅವರು ಕಾರ್ಯಕ್ರಮಕ್ಕೆ ಬರುವುದು ತಡವಾಗಲಿದೆ. ಅಲ್ಲದೇ ಕಾರ್ಯಕ್ರಮ ಮುಗಿಸಿಕೊಂಡು ಹೋಗುವುದು ನಿಗಧಿತ ಅವಧಿಯಲ್ಲಿ ನವದೆಹಲಿಗೆ ತೆರಳುವುದು ಅಸಾಧ್ಯ ಎನ್ನಲಾಗುತ್ತಿದೆ. ಈ ಮಧ್ಯೆ ದಾವಣಗೆರೆಯ ಕಾಂಗ್ರೆಸ್ ನಾಯಕರು ರಾಹುಲ್ ಗಾಂಧಿಯವರನ್ನು ಬೇರೊಂದು ಮಾರ್ಗದ ಮೂಲಕ ಕಾರ್ಯಕ್ರಮದ ಸ್ಥಳಕ್ಕೆ ಕರೆತರಲು ಪ್ರಯತ್ನ ಮಾಡುತ್ತಿದ್ದಾರೆ. ಇದರಿಂದಾಗಿ ಪೊಲೀಸರು ಹರಸಾಹಸ ಪಡುತ್ತಿದ್ದಾರೆ.ರಾಹುಲ್ ಗಾಂಧಿ ಸಂಚಾರದ ಒತ್ತಡದಿಂದಾಗಿ ತಡವಾಗಿ ಕಾರ್ಯಕ್ರಮದ ಸ್ಥಳಕ್ಕೆ ಆಗಮಿಸಿದ್ದರೂ ಸಹ ವೇದಿಕೆ ಬಳಿ ಸಾಗಲು ಹರಸಾಹಸ ಪಡುತ್ತಿದ್ದಾರೆ. ಪೊಲೀಸರು ದಾರಿ ಮಾಡಿಕೊಡುತ್ತಿದ್ದಾರೆ. ಇದಕ್ಕಾಗಿ ಹರ ಸಾಹಸ ಪಡುತ್ತಿದ್ದಾರೆ.

Attachments area