ಕೈ ಜಾರಿದ ಪ್ರೀತಿ ಟ್ರೈಲರ್ ಬಿಡುಗಡೆ

ಪ್ರೀತಿಯ ಸಂದೇಶ ಸಾರಿರುವ ’ಕೈ ಜಾರಿದ ಪ್ರೀತಿ’ ಚಿತ್ರದ ಟ್ರೇಲರ್ ಬಿಡುಗಡೆ ಆಗಿದೆ. ತರಿಕೇರೆಯ ಅಮೃತೇಶ್ವರ ದೇವಸ್ಥಾನ, ಚಿಕ್ಕಮಗಳೂರು, ಬೆಂಗಳೂರು ಕಡೆಗಳಲ್ಲಿ ಚಿತ್ರೀಕರಣ ನಡೆದಿದೆ. ಈ  ತಿಂಗಳಲ್ಲಿ  ಚಿತ್ರ ತೆರೆಗೆ ಬರುವ ಸಾದ್ಯತೆಗಳಿವೆ.

ಪುಷ್ಪಭದ್ರಾವತಿ  ಬಂಡವಾಳ ಹೂಡಿರುವ‌ ಚಿತ್ರದಲ್ಲಿ ಅವರು ಪುತ್ರಿ  ಮಂಜುಶ್ರೀಶೆಟ್ಟಿ.ಕೆ.ಆರ್ ನಾಯಕಿ ಹಾಗೂ ನಿರ್ಮಾಪಕಿಯಾಗಿ ಗುರುತಿಸಿಕೊಂಡಿದ್ದಾರೆ. ತಂಗಿ ಮಧುಶೆಟ್ಟಿ.ಕೆ.ಆರ್ ನಾಯಕಿ.

ಕಥಾನಾಯಕಿ ಜಿಲ್ಲಾಧಿಕಾರಿ ಹೆಂಡತಿ. ದುರದೃಷ್ಟವಶಾತ್ ಪತಿ ಅಪಘಾತದಿಂದ ಮರಣ ಹೊಂದಿರುತ್ತಾನೆ. ಚಿಕ್ಕ ಮಗುವಿನೊಂದಿಗೆ ಜೀವನ ನಡೆಸಲು ಕೆಲಸಕ್ಕೆ ಹೋಗುತ್ತಿರುತ್ತಾಳೆ.ಕಥಾನಾಯಕ ಈಕೆ ಕಷ್ಟವನ್ನು ಕಂಡು ಮದುವೆ ಮಾಡಿಕೊಳ್ಳುತ್ತಾನೆ. ಇವನು ಎಷ್ಟು ಪ್ರೀತಿ ಮಾಡುತ್ತಿದ್ದರೂ ಅವಳಿಂದ ಸರಿಯಾದ ಸ್ಪಂದನೆ ಸಿಗುತ್ತಿರುವುದಿಲ್ಲ. ಒಮ್ಮೆ ನಡೆಯಬಾರದ ಘಟನೆ ನಡೆದುಹೋಗುತ್ತದೆ. ಇದರಿಂದ ವಿಚಲಿತನಾಗುವ ಆತ ಯಾರಿಗೆ ಬಾಳು ಕೊಡುತ್ತಾನೆ ಎನ್ನುವುದು ಕ್ಲೈಮಾಕ್ಸ್‌ದಲ್ಲಿ ಸುಂದರವಾಗಿ ಹೇಳಲಾಗಿದೆ.

ಚೇತನ್‌ಕೃಷ್ಣನ್ ಮತ್ತು ಸನತ್ ನಾಯಕಾಗಿ ಕಾಣಿದಿಕೊಂಡಿದ್ದಾರೆ.  ಹಿರಿಯ ನಟ ಸುಮನ್, ಡ್ಯಾನಿಕುಟ್ಟಪ್ಪ, ಕೋಟೆಪ್ರಭಾಕರ್, ಭುವನ್‌ಗೌಡ ಉಳಿದಂತೆ ನಾಗೇಂದ್ರಅರಸ್, ನಾರಾಯಣಸ್ವಾಮಿ, ಬಾಬುಹಿರಣಯ್ಯ ಐಟಂ ಹಾಡಿಗೆ ಆಶಿತಾ ಹೆಜ್ಜೆ ಹಾಕಿದ್ದಾರೆ. ಆರ್.ಗಿರಿ ಛಾಯಾಗ್ರಹಣ, ಥ್ರಿಲ್ಲರ್‌ಮಂಜು, ಕೌರವವೆಂಕಟೇಶ್, ಸಾಹಸವಿದೆ.