ಕೈ ಗ್ಯಾರಂಟಿ: ಸೆಸ್ಕಾಂ ಸಿಬ್ಬಂದಿಗಳಿಗೇ ಶಾಕ್

ಚಾಮರಾಜನಗರ, ಮೇ.18:- ಜಿಲ್ಲೆಯ ಯಳಂದೂರು ತಾಲೂಕಿನ ಹೊನ್ನೂರು ಗ್ರಾಮಕ್ಕೆ ವಿದ್ಯುತ್ ಬಿಲ್ ನೀಡಲು ತೆರಳಿದ್ದ ಸೆಸ್ಕ್ ಸಿಬ್ಬಂದಿಗೆ ರೈತ ಮುಖಂಡರು ಕೈ ಗ್ಯಾರಂಟಿ ಶಾಕ್ ಕೊಟ್ಟಿದ್ದು ಬಿಲ್‍ನ್ನೇ ಪಡೆಯದೇ ವಾಪಸ್ ಕಳುಹಿಸಿದ್ದಾರೆ.
ಪ್ರತಿ ಮನೆಗೂ 200 ಯೂನಿಟ್ ಉಚಿತ ವಿದ್ಯುತ್ ಕೊಡುವವರೆಗೂ ನಾವು ಬಿಲ್ ಪಡೆಯುವುದಿಲ್ಲ, ಸಿಬ್ಬಂದಿಗಳು ಬಿಲ್ ಕೊಡುವುದಕ್ಕೂ ಬಿಡುವುದಿಲ್ಲ. ಕಾಂಗ್ರೆಸ್ ಭರವಸೆ ಬಗ್ಗೆ ನಂಬಿಕೆ ಇಟ್ಟು ಇಡೀ ಜಿಲ್ಲೆಯ 4 ಕ್ಷೇತ್ರಗಳಲ್ಲಿ ಮೂವರು ಕಾಂಗ್ರೆಸ್ ಶಾಸಕರನ್ನು ಆರಿಸಿ ಕಳುಹಿಸಿದ್ದು ಐದು ಗ್ಯಾರಂಟಿಗಳಲ್ಲಿ ಉಚಿತ ವಿದ್ಯುತ್ ಗ್ಯಾರಂಟಿಯನ್ನು ತಕ್ಷಣ ಜಾರಿಗೆ ತರಬೇಕೆಂದು ರೈತ ಸಂಘದ ಮುಖಂಡ ಹೊನ್ನೂರು ಪ್ರಕಾಶ್ ಒತ್ತಾಯಿಸಿದ್ದಾರೆ.
ಪ್ರತಿ ಮನೆಗೂ 200 ಯೂನಿಟ್ ಉಚಿತ ವಿದ್ಯುತ್ ಕೊಡುವವರೆಗೂ ನಾವು ಬಿಲ್ ಪಡೆಯುವುದಿಲ್ಲ, ಸಿಬ್ಬಂದಿಗಳು ಬಿಲ್ ಕೊಡುವುದಕ್ಕೂ ಬಿಡುವುದಿಲ್ಲ. ಕಾಂಗ್ರೆಸ್ ಭರವಸೆ ಬಗ್ಗೆ ನಂಬಿಕೆ ಇಟ್ಟು ಇಡೀ ಜಿಲ್ಲೆಯ
4 ಕ್ಷೇತ್ರಗಳಲ್ಲಿ ಮೂವರು ಕಾಂಗ್ರೆಸ್ ಶಾಸಕರನ್ನು ಆರಿಸಿ ಕಳುಹಿಸಿದ್ದು ಐದು ಗ್ಯಾರಂಟಿಗಳಲ್ಲಿ ಉಚಿತ ವಿದ್ಯುತ್ ಗ್ಯಾರಂಟಿಯನ್ನು ತಕ್ಷಣ ಜಾರಿಗೆ ತರಬೇಕೆಂದು ರೈತ ಸಂಘದ ಮುಖಂಡ ಹೊನ್ನೂರು ಪ್ರಕಾಶ್ ಒತ್ತಾಯಿಸಿದ್ದಾರೆ.