ಕೈ ಗೆಲುವಿಗೆ ಸರಣಿ ಸಭೆ

ಬೆಂಗಳೂರು,ಮಾ.೨೩-ಲೋಕಸಭಾ ಚುನಾವಣೆಗೆ ಸಂಪೂರ್ಣ ಸಜ್ಜಾಗಿರುವ ಕಾಂಗ್ರೆಸ್ ಪಕ್ಷ, ಚುನಾವಣಾ ಗೆಲುವು ಹಾಗೂ ಜವಾಬ್ದಾರಿಗಳ ನಿಗದಿ ಸಂಬಂಧ ಇಂದು ಸರಣಿ ಸಭೆಗಳನ್ನು ನಡೆಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ಪ್ರದೇಶ ಕಾಂಗ್ರೆಸ್ ಕಚೇರಿಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರು, ಉಪಾಧ್ಯಕ್ಷರುಗಳು, ಕಾಂಗ್ರೆಸ್‌ನ ಎಲ್ಲ ಶಾಸಕರುಗಳು,ವಿಧಾನ ಪರಿಷತ್ ಸದಸ್ಯರುಗಳು, ಮಾಜಿ ಶಾಸಕರುಗಳು,ಎಲ್ಲ ಜಿಲ್ಲಾಧ್ಯಕ್ಷರುಗಳು,ವಿವಿಧ ನಿಗಮಮಂಡಳಿಗಳ ಅಧ್ಯಕ್ಷ-ಉಪಾಧ್ಯಕ್ಷ,ನಿರ್ದೇಶಕರುಗಳ ಸಭೆ ನಡೆದಿದೆ.
ಈ ಸಭೆಯಲ್ಲಿ ಎಲ್ಲರೂ ಒಗ್ಗೂಡಿ ಚುನಾವಣೆಗೆ ಶ್ರಮಿಸುವ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಕೆಲವು ಸಲಹೆ ಸೂಚನೆಗಳನ್ನು ನೀಡಿದ್ದಾರೆ.
ಇಂದು ಸಂಜೆಯವರೆಗೂ ಈ ಸರಣಿ ಸಭೆಗಳು ನಡೆಯಲಿವೆ
ಈ ಸಭೆಗಳ ಬಳಿಕ ಮೊದಲ ಹಂತದ ಚುನಾವಣೆ ನಡೆಯುವ ೧೪ ಲೋಕಸಭಾ ವ್ಯಾಪ್ತಿಯ ವಿಧಾನಸಭೆ ಮತ್ತು ವಿಧಾನ ಪರಿಷತ್‌ನ ಶಾಸಕರುಗಳು ಹಾಗೂ ಮಾಜಿ ಶಾಸಕರುಗಳ ಸಭೆಯೂ ನಡೆಯಲಿದೆ.