ಕೈ ಗೆಲುವಿಗಾಗಿ ಶ್ರಮಿಸಿದ ಅಲ್ಪಸಂಖ್ಯಾತರಿಗೆ ಅಭಿನಂದನೆ

ವಿಜಯಪುರ : ಮೇ.15:ಕರ್ನಾಟಕ ವಿಧಾನ ಸಭಾ ಚುನಾವಣೆಯಲ್ಲಿ ಮುಸ್ಲಿಂ ಮತದಾರರು ಕಾಂಗ್ರೆಸ್ ಪರವಾಗಿ ಸುಮಾರು 90 ಮತ ಚಲಾಯಿಸಿ 136 ಶಾಸಕರನ್ನು ಆಯ್ಕೆ ಮಾಡುವಲ್ಲಿ ಮುಸ್ಲಿಂ ಬಾಂಧವರ ಬಹುಮುಖ್ಯ ಪಾತ್ರವಾಗಿದೆ ಎಂದು ಜಿಲ್ಲಾ ಅಲ್ಪಸಂಖ್ಯಾತ ಗ್ರಾಮ ಪಂಚಾಯತ ಸದಸ್ಯರ ಒಕ್ಕೂಟದ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಅಲ್ಪಸಂಖ್ಯಾತ ಗ್ರಾಮ ಪಂಚಾಯತ ಒಕ್ಕೂಟದ ಅಧ್ಯಕ್ಷರಾದ ಮಹ್ಮದಇಸಾಕ ಪಠಾಣ ಮಾತನಾಡಿ, ವಿಧಾನಸಭಾ ಚುನಾವಣೆ ಸನ್ 2023 ರಲ್ಲಿ 136 ಶಾಸಕರನ್ನು ಮುಸ್ಲಿಂ ಸಮುದಾಯದ ಮತಗಳು ಕ್ರೂಡಿಕರಣವಾಗಿ ಕಾಂಗ್ರೆಸ್ ಜಯಿಸಲು ಬಹುಮುಖ್ಯ ಪಾತ್ರ ನಮ್ಮ ಸಮಾಜದ್ದು ಇರುತ್ತದೆ. ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ವ್ಯಕ್ತಿ ಪ್ರತಿಭಾರಿ 7 ರಿಂದ 15 ಮುಸ್ಲಿಂ ಶಾಸಕರನ್ನು ಆಯ್ಕೆ ಮಾಡಿಕೊಟ್ಟ ಇತಿಹಾಸ ಇದೆ. ಈ ಭಾರಿ ಕರ್ನಾಟಕ ರಾಜ್ಯದ 136 ಶಾಸಕರನ್ನು ಆಯ್ಕೆ ಮಾಡುವಲ್ಲಿ ನಿರ್ಣಾಯಕ ಪಾತ್ರವನ್ನು ನಮ್ಮ ಸಮುದಾಯ ವಹಿಸಿದೆ. ಮುಸ್ಲಿಂ ಸಮುದಾಯ 9 ಶಾಸಕರು ವಿಧಾನ ಸಭೆಗೆ ಪ್ರವೇಶ ಪಡೆದಿದ್ದಾರೆ, ಈ ಬಾರಿ ನಮ್ಮ ಸಮುದಾಯಕ್ಕೆ ಉಪ ಮುಖ್ಯಮಂತ್ರಿ ಸ್ಥಾನ ನೀಡಿ ಗೌರವಿಸಬೇಕೆಂದು ರಾಷ್ಟ್ರೀಯ ಹಾಗೂ ರಾಜ್ಯದ ನಾಯ್ಕರಲ್ಲಿ ವಿನಂತಿಸುತ್ತೇವೆ ಕರ್ನಾಟಕ ರಚನೆ ಆದಾಗಿನಿಂದ ಇಲ್ಲಿಯವರೆಗೆ ಮುಸ್ಲಿಂರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಿರುವದಿಲ್ಲಾ, ಆದಕಾರಣ ಕರ್ನಾಟಕದಲ್ಲಿ ಮುಸ್ಲಿಂ ಸಮುದಾಯಕ್ಕೆ ನ್ಯಾಯ ಒದಗಿಸಿಕೊಡಬೇಕೆಂದರು.
ಈ ಸಂದರ್ಭದಲ್ಲಿ ಕಲಕೇರಿ ಕಾರ್ಯದರ್ಶಿ ಚಾಂದಪಾಶಾ ಹವಾಲದಾರ, ಆಹೇರಿ ಮಹಿಬೂಬ ಹಿಟನಳ್ಳಿ ಮಾತನಾಡಿ, ನಮ್ಮ ಸಮಾಜ ಆರ್ಥಿಕವಾಗಿ ಶೈಕ್ಷಣಿಕವಾಗಿ ಸಾಮಾಜಿಕವಾಗಿ ಹಿಂದುಳಿದಿರುತ್ತದೆ. ಹಾಗೂ ವಿಜಯಪುರ ನಗರದ ಕಾಂಗ್ರೆಸ್ ಅಭ್ಯರ್ಥಿ ಅಬ್ದುಲಹಮೀದ ಖಾಜಾಸಾಬ ಮುಶ್ರೀಫ ರವರು ಅಧಿಕ ಮತಗಳನ್ನು ಪಡೆದು ಅಲ್ಪ ಅಂತರದಿಂದ ಪರಭಾವಗೊಂಡ ಜಿಲ್ಲೆಯಲ್ಲಿ ಒಬ್ಬ ಮುಸ್ಲಿಂ ನಾಯಕನಾಗಿ ಹೊರ ಹೊಮ್ಮಿದ್ದಾರೆ. ಆದ್ದರಿಂದ ಅವರಿಗೂ ಕೂಡ ಉನ್ನತ ಸ್ಥಾನ ಮಾನ ನೀಡಿ ಗೌರವಿಸಬೇಕು. ಮುಂಬರುವ ಜಿಲ್ಲಾ ಪಂಚಾಯತಿ ಹಾಗೂ ತಾಲೂಕ ಪಂಚಾಯತಿಯಲ್ಲಿ ಚುನಾವಣೆಯಲ್ಲಿ ಅಲ್ಪಸಂಖ್ಯಾತರಿಗೆ ಒಂದು ಮತಕ್ಷೇತ್ರದಲ್ಲಿ ಇಬ್ಬರೂ ಮುಸ್ಲಿಂ ಅಭ್ಯರ್ಥಿಗಳಿಗೆ ಜಿಲ್ಲಾ ಪಂಚಾಯತಿಯಲ್ಲಿ ಹಾಗೂ ಪ್ರತಿ ತಾಲೂಕ ಪಂಚಾಯತಿಗಳಿಗೆ 5 ಮುಸ್ಲಿಂ ಅಭ್ಯರ್ಥಿಗಳನ್ನು ನಿಲ್ಲಿಸಿ ಗೆಲ್ಲಿಸಿ ತರುವ ಪಕ್ಷದ ಪ್ರತಿಯೊಂದು ಶಾಸಕರ ಹಾಗೂ ಕಾಂಗ್ರೆಸ್ ಧುರಿಣರ ಕರ್ತವ್ಯವಾಗಿರುತ್ತದೆ. ಈ ಭಾರಿ ಅತ್ಯಧಿಕ ಮುಸ್ಲಿಂ ಮತಗಳು ಕಾಂಗ್ರೆಸ್ ಪಾಲಾಗಿದ್ದು ರಾಜ್ಯಕ್ಕೆ ದಿಕ್ಕೂಚಿಯಾಗಿರುತ್ತದೆ. ಮುಂಬರುವ ಚುನಾವಣೆಗಳಲ್ಲಿ ಅಹಿಂದ ಮತಗಳನ್ನು ಒಂದು ಗೂಡಿಸಿ ಪಕ್ಷ ನೀಡಿದ ಜವಾಬ್ದಾರಿಯುತ ಕಾರ್ಯವನ್ನು ನಮ್ಮ ಸಮಾಜ ನಿರ್ವಹಿಸುತ್ತದೆಂದು ಈ ಪತ್ರಿಕೆ ಪ್ರಕಟಣೆ ಮೂಲಕ ತಿಳಿಪಡಿಸುತ್ತೇವೆ ಎಂದರು.
ಈ ಸಂದರ್ಭದಲ್ಲ ಜಂಬಗಿ ಸದಸ್ಯರಾದ ಪೈಗಂಬರ ಮುಲ್ಲಾ, ಕಲಕೇರಿ ಸದಸ್ಯರಾದ ರಾಜಅಹ್ಮದ ಶಿರಸಗಿ, ಕನ್ನೂರ ಸದಸ್ಯರಾದ ಶಫೀಕ ಮುಜಾವರ, ಶಿವಣಗಿ ಸದಸ್ಯರಾದ ಇಮ್ರಾನ ಜಾಗೀರದಾರ, ಹಡಗಲಿ ಸದಸ್ಯರಾದ ಅಬ್ಬಾಸಲಿ ಮುಲ್ಲಾ ಇಂಚಗೇರಿ ಸಲಹೇಗಾರರಾದ ಡಾ.ಶಮಶೇರಅಲಿ ಮುಲ್ಲಾ ಮುಂತಾದವರು ಇದ್ದರು.