ಕೈ ಕೊಡುವ ವಿದ್ಯುತ್: ರೈತರ ಪ್ರತಿಭಟನೆ


ಲಕ್ಷ್ಮೇಶ್ವರ,ಅ.18: ತಾಲೂಕಿನಾದ್ಯಂತ ಇದುವರೆಗೂ ಮಳೆಯಾಗಿದ್ದರಿಂದ ಸಹನೆ ಕಳೆದುಕೊಂಡಿರುವ ಅನ್ನದಾತರು ಇದೀಗ ಇರುವ ಅಲ್ಪ ಸ್ವಲ್ಪ ಬೆಳೆಗಳನ್ನು ಉಳಿಸಿಕೊಳ್ಳಲು ಕೊಳವೆ ಬಾವಿಯ ನೀರನ್ನು ಅವಲಂಬಿಸಿದ್ದು ಆದರೆ ವಿದ್ಯುತ್ ಸತತವಾಗಿ ಕೈ ಕೊಡುತ್ತಿರುವುದರಿಂದ ಭುಗಿಲೆದ್ದ ಅನ್ನದಾತರ ಅಸಮಾಧಾನ ಕಟ್ಟೆಯೊಡೆದು ಹೆಸ್ಕಾಂ ವಿರುದ್ಧ ಬೀದಿಗೆಳಿದು ಹೋರಾಟಕ್ಕಿಳೆದಿದ್ದಾರೆ.
ತಾಲೂಕಿನ ಸೂರಣಗಿ ಗ್ರಾಮದಲ್ಲಿರುವ ಹೆಸ್ಕಾಂನ ವಿದ್ಯುತ್ ಸರಬರಾಜು ಕೇಂದ್ರದ ಎದುರು ನೂರಾರು ಸಂಖ್ಯೆಯಲ್ಲಿ ಸೇರಿದ ರೈತರು ಅಧಿಕಾರಿಗಳ ವಿರುದ್ಧ ಹರಿಹಾಯ್ದ ರು.
ತಾಲೂಕಿನ ಬಾಲೆ ಹೊಸೂರು ಸೂರಣಗಿ ಯಲ್ಲಾಪುರ ಸುವರ್ಣ ಗಿರಿ ತಾಂಡ ನೆಲೋಗಲ್ಲು ಹುಲ್ಲೂರು ಸೇರಿದಂತೆ ನೂರಾರು ಸಂಖ್ಯೆಯಲ್ಲಿದ್ದ ಅನ್ನದಾತರು ಪ್ರತಿಭಟಿಸಿ ತಮ್ಮ ಅಳಲನ್ನು ಹೊರಹಾಕಿದರು.
ಈ ಸಂದರ್ಭದಲ್ಲಿ ಮುಖಂಡರಾದ ಪ್ರಕಾಶ್ ಕಳ್ಳಿಹಾಳ ಕುಮಾರ್ ಬೆಟಗೇರಿ ನಾಗಯ್ಯ ಮಠಪತಿ, ಸಿದ್ದಪ್ಪ ನನಗನಹಳ್ಳಿ ಮತ್ತಿತರರು ಮಾತನಾಡಿ ಕಳೆದ ಒಂದು ತಿಂಗಳನಿಂದ ಮಳೆ ಕೈಕೊಟ್ಟಿದ್ದು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆಸಿದ ಬೆಳೆಗಳನ್ನು ಉಳಿಸಿಕೊಳ್ಳಲು ಕೊಳವೆಬಾವಿಗಳ ಗತಿಯಾಗಿದೆ ಆದರೆ ವಿದ್ಯುತ್ತಿನ ಪದೇಪದೇ ಅಡಚಣೆಯಿಂದಾಗಿ ಬೆಳೆಗಳನ್ನು ಉಳಿಸಿಕೊಳ್ಳುವುದು ಅಸಾಧ್ಯವಾಗಿದೆ ರೈತರು ಸಹನೆ ಕಳೆದುಕೊಳ್ಳುವ ಪೂರ್ವದಲ್ಲಿಯೇ ವಿದ್ಯುತ್ತನ್ನು ಸಮರ್ಪಕವಾಗಿ ಅಡಚಣೆ ಇಲ್ಲದೆ ಪೂರೈಕೆ ಮಾಡದಿದ್ದರೆ ಮುಂದಾಗುವ ಅನಾಹುತಕ್ಕೆ ಸರ್ಕಾರವೇ ಕಾರಣವಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಹೆಸ್ಕಾಂ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರದ ಗುರುರಾಜ್ ಅವರು ರೊಚ್ಚಿಗೆದ್ದಿದ್ದ ರೈತರನ್ನು ಸಮಾಧಾನಪಡಿಸಿ ಇದೊಂದೇ ಗ್ರೀಡ್ ಮೇಲೆ ಒತ್ತಡವಿರುವುದರಿಂದ ಪದೇ ಪದೇ ಟ್ರಿಪ್ ಆಗುತ್ತಿದೆ ಹಾಗಾಗಿದಂತೆ ಕ್ರಮ ಕೈಗೊಳ್ಳುವದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮಂಜುನಾಥ್ ಜಾಲವಾಡಗಿ ಫಕೀರ್ಗೌಡ್ರು ಪಾಟೀಲ್ ಶಿವಪ್ಪ ಲಮಾಣಿ ನಾಗರಾಜ್ ಹವಳಕೇರಿ ಸಂತೋಷ ಚಕ್ರಸಾಲಿ ಅಂಬರೀಶ್ ಬೆನಕನಹಳ್ಳಿ ಶರಣಪ್ಪ ಬಸಾಪುರ ಶಿವಲಿಂಗಪ್ಪ ಮೆಳ್ಳಿ ವಿರುಪಾಕ್ಷಪ್ಪ ಮರಳಿಹಳ್ಳಿ ಪರಶುರಾಮ್ ಮೈಲಾರಿ ಬಸವರಾಜ್ ಮೇಲ್ಮುರಿ ಸೋಮಣ್ಣ ಸಿಂಗಟಾಲೂರ ಓಕಾರಪ್ಪ ಲಮಾಣಿ ಪರಮೇಶ್ ಲಮಾಣಿ ಹನುಮಂತ ಲಮಾಣಿ ಸೇರಿದಂತೆ ನೂರಾರು ರೈತರು ಪಾಲ್ಗೊಂಡಿದ್ದರು.
ಪಿಎಸ್‍ಐ ಯೂಸುಫ್ ಜಮುಲಾ ಅವರ ನೇತೃತ್ವದಲ್ಲಿ ಸೂಕ್ತ ಪೆÇಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.