ಕೈ ಕೊಟ್ಟ ಮಳೆ ಏರಿಕೆಯಾಯ್ತು ತರಕಾರಿ-ದಿನಸಿ

ಜನಸಾಮಾನ್ಯರ ಬದುಕು ದುಸ್ತರ
ದುರುಗಪ್ಪ ಹೊಸಮನಿ
ಲಿಂಗಸುಗೂರು,ಜೂ.೨೭-
ತಾಲೂಕಿನಲ್ಲಿ ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ತರಕಾರಿ ಬೆಲೆ ಹೆಚ್ಚಾಗಲು ಕಾರಣವಾಗಿದೆ ಮತ್ತು ದಿನದಿಂದ ದಿನಕ್ಕೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರ ಬದುಕು ದುಸ್ತರವಾಗಿದೆ ಕೂಡಲೆ ರಾಜ್ಯ ಸರ್ಕಾರ ಬೆಲೆ ನಿಯಂತ್ರಣ ಮಾಡಿ ಬಡ ಮದ್ಯಮ ವರ್ಗದ ಜನರಿಗೆ ಕೈಗೆಟುಕುವ ದರದಲ್ಲಿ ಅಗತ್ಯ ವಸ್ತುಗಳ ಪೂರೈಕೆ ಮಾಡಬೇಕು ಎಂಬುದು ಗ್ರಾಹಕರ ಆಗ್ರಹವಾಗಿದೆ.
ಮಳೆ ಕೊರತೆಯಿಂದ ಉಂಟಾಗಿರುವ ಸಮಸ್ಯೆಗಳು ಅಗತ್ಯ ವಸ್ತುಗಳ ಬೆಲೆ ವಿಪರೀತ ಏರಿಕೆಯಾಗಿದ್ದು ನಿಯಂತ್ರಿಸುವುದಕ್ಕೆ ಸಾಧ್ಯವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಜೊತೆಗೆ ತರಕಾರಿ ಬೆಲೆಯೂ ಗಗನಕ್ಕೇರಿದೆ.
ಬಡ ಮದ್ಯಮ ವರ್ಗದ ಜನರಿಗೆ ಆಹಾರ ಭದ್ರತಾ ಕಾಯ್ದೆ ಅಡಿಯಲ್ಲಿ ಅಗತ್ಯ ವಸ್ತುಗಳ ಬೆಲೆ ನಿಯಂತ್ರಣ ಮಾಡಬೇಕು ಎಂಬುದು ನಾಗರಿಕರ ಕೂಗು ಕೇಳಿ ಬರುತ್ತಿದೆ.
ಈ ಹಿಂದೆ ಯುಪಿಎ ಸರ್ಕಾರದ ಅವಧಿಯಲ್ಲಿ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಆಹಾರ ಭದ್ರತಾ ಮಸೂದೆ ಜಾರಿಗೆ ತಂದಿದೆ ಆದರೆ ಇಂದು ಸಾಮಾನ್ಯ ಜನರ ಬದುಕು ಬಹಳಷ್ಟು ದುಸ್ತರವಾಗುತ್ತಿದೆ ಈಗಿರುವ ಎನ್‌ಡಿಎ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ
ಜನರ ಬಾಯಿಗೆ ಮಣ್ಣು ಬಿದ್ದಿದೆ.
ದಲ್ಲಾಳಿಗಳಿಂದ ತರಕಾರಿ ಬೆಲೆ ಏರಿಕೆ, ಗ್ರಾಹಕರಲ್ಲಿ ಕಣ್ಣಿರು:
ತಾಲ್ಲೂಕಿನಲ್ಲಿ ತರಕಾರಿ ಬೆಲೆ ದಾಖಲೆ ಮಟ್ಟದಲ್ಲಿ ಏರಿಕೆಗೆ ದಲ್ಲಾಳಿಂದ ಬೆಲೆ ಏರಿಕೆ ಬಿಸಿ ಗ್ರಾಹಕರ ಕಣ್ಣಿರು ಲಿಂಗಸುಗೂರು ತಾಲೂಕಿನ ಇಂದಿನ ತರಕಾರಿ ದರ ಟೊಮೋಟೊ ದರ ೧೦೦ ಅಲ್ಲಾ ೨೦೦ ರೂಪಾಯಿ ಬದನೆ ಕಾಯಿ ೬೦ ದರ ನುಗ್ಗೆಕಾಯಿ ೧೦೦ ಹುರುಳಿ ಕಾಳು ೧೬೦ ಹಸಿಮೆಣಸಿನಕಾಯಿ ೧೦೦ ಗೆಡ್ಡೆ ಕೋಸು ೫೦ ಈರುಳ್ಳಿ ೪೦ ಆಲೂಗಡ್ಡೆ ೪೦ ಹೀರೆಕಾಯಿ ೭೦ ದರ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿವೆ ಇದರಿಂದ ತರಕಾರಿ ಬೆಲೆ ಏರಿಕೆಯಿಂದ ಮನೆ ನಡೆಸುವುದು ತುಂಬಾ ಕಷ್ಟವಾಗುತ್ತದೆ ಎಂದು ಗ್ರಾಹಕರ ಅಳಲಾಗಿದೆ.
ತಾಲೂಕಿನಲ್ಲಿ ಮುಂಗಾರು ವಿಳಂಬ ಮಳೆ ಇಲ್ಲದೆ ಹೊಲದಲ್ಲಿ ಬೆಳೆ ಇಲ್ಲಾ. ತೋಟಗಾರಿಕೆ ಬೆಳೆಗಳು ಬಲು ದುಬಾರಿ:
ಜಿಲ್ಲೆಯಲ್ಲಿ ವಿವಿಧ ಭಾಗಗಳಲ್ಲಿ ವಾಡಿಕೆಗಿಂತ ಮಳೆ ವಿಳಂಬವಾಗಿದ್ದು ಹೊಲದಲ್ಲಿ ಮಳೆ ಇಲ್ಲದೆ ಬೆಳೆ ಇಲ್ಲಾ ತೋಟಗಾರಿಕೆ ಬೆಳೆಗಳು ಬಲು ದುಬಾರಿ ರೈತಾಪಿ ವರ್ಗ ಬಿತ್ತನೆ ಮಾಡದೆ ಆಕಾಶ ನೋಡುತ್ತಿದ್ದರೆ ಇತ್ತ ತರಕಾರಿ ಬೆಲೆಯೂ ಕೂಡ ಆಕಾಶದೆತ್ತರಕ್ಕೆ ಮುಖಮಾಡಿದೆ
ತಾಲ್ಲೂಕಿನ ಬಹುತೇಕ ದೊಡ್ಡ ದೊಡ್ಡ ಕಿರಾಣಿ ಅಂಗಡಿ ಮಾಲ್‌ಗಳಲ್ಲಿ ದಿನಸಿ ವಸ್ತುಗಳ ಬೆಲೆ ಏರಿಕೆಯಿಂದ ಗ್ರಾಹಕರ ಕೈ ಸುಡುವುದು ಮತ್ತು ಜೇಬಿಗೆ ಕತ್ತರಿ ಬಿದ್ದಿದೆ.
ತೊಗರಿ ಬೇಳೆ ೧೬೦ ರೂಪಾಯಿ ಕೆಜಿ ಬಿಳಿ ಜೋಳ ೬೦ ರೂ ಕೆಜಿ ಸೋನಾ ಮಸೂರಿ ಅಕ್ಕಿ ೬೫ ರೂಪಾಯಿ ಕೆಜಿ ಮಸೂರ್ ದಾಲ್ ೧೦೦ರೂಪಾಯಿ ಕೆಜಿ ಹೆಸರು ಬೇಳೆ ೧೩೦ ರೂಪಾಯಿ ಬೆಲ್ಲ ೫೦ರೂಪಾಯಿ ಸಕ್ಕರೆ ೪೫ ರೂಪಾಯಿ ಕೆಜಿ ಹಾಗೂ ಇತರೆ ಆಹಾರ ಪದಾರ್ಥಗಳು ಬೆಲೆ ಹೆಚ್ಚಳದಿಂದ ಗ್ರಾಹಕರ ಕೈ ಸುಡುತ್ತಿದೆ. ದಿನಸಿ ವಸ್ತುಗಳ ಬೆಲೆ ಏರಿಕೆಯಿಂದ ಮದ್ಯಮ ವರ್ಗದ ಬಡ ಜನರು ತತ್ತರಿಸುತ್ತಿದ್ದಾರೆ.
ಕೂಡಲೇ ರಾಜ್ಯ ಸರ್ಕಾರ ಆಹಾರ ಭದ್ರತಾ ಕಾಯ್ದೆ ಅಡಿಯಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಣ ಮಾಡಿ ಗ್ರಾಹಕರ ಕೈ ಗೆಟುಕುವ ಯೋಗ್ಯ ದರದಲ್ಲಿ ಮಾರಾಟ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ನಾಗರಿಕರು ಸರ್ಕಾರಕ್ಕೆ ಆಗ್ರಹ ಮಾಡಿದ್ದಾರೆ.