
ಬೆಂಗಳೂರು,ಮೇ.೨೫- ಕಾಂಗ್ರೆಸ್ ಕಾರ್ಯಕರ್ತ ರವಿ ಅಲಿಯಾಸ್ ಮತ್ತಿರವಿಯನ್ನು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಭೀಕರವಾಗಿ ಕೊಲೆ ಮಾಡಿರುವ ದುರ್ಘಟನೆ ಲಗ್ಗೆರೆ ಬಳಿಯ ಚೌಡೇಶ್ವರಿನಗರದಲ್ಲಿ ನಡೆದಿದೆ.
ನಂದಿನಿ ಲೇಔಟ್ ನ ಕಾಂಗ್ರೆಸ್ ಕಾರ್ಯಕರ್ತ ರವಿ ಅಲಿಯಾಸ್ ಮತ್ತಿ ರವಿ (೪೨)ಯನ್ನು ಲಗ್ಗೆರೆಯ
ಚೌಡೇಶ್ವರಿನಗರದ ಹಳ್ಳಿರುಚಿ ಹೊಟೇಲ್ ಮುಂಭಾಗ ನಿನ್ನೆ ಮಧ್ಯರಾತ್ರಿ ೧೧ರ ವೇಳೆ ಕೊಲೆ ಮಾಡಿರುವ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ ಎಂದು ಡಿಸಿಪಿ ಶಿವಪ್ರಕಾಶ್ ದೇವರಾಜ್ ತಿಳಿಸಿದ್ದಾರೆ.
ಟೆಂಪೋ ಟ್ರಾವೆಲರ್ ಚಾಲಕನಾಗಿದ್ದ ರವಿ ಕೊಲೆ ಮಾಡಲು ಬೈಕ್‌ಗಳಲ್ಲಿ ಬಂದ ಐದಾರು ಮಂದಿ ಹಂತಕರು ಸಂಚು ಹಾಕಿ ಕಾದು ಕುಳಿತಿದ್ದರು.
ಕೆಲಸ ಮುಗಿಸಿ ನಿನ್ನೆ ಸಂಜೆ ಮನೆ ಹತ್ತಿರ ಬಂದ ರವಿ ಮಧ್ಯರಾತ್ರಿ ಮನೆಯಿಂದ ಹೊರಬರುತ್ತಿದ್ದಂತೆ ಎಕಾಏಕಿ ದಾಳಿ ನಡೆಸಿದ್ದಾರೆ. ತಪ್ಪಿಸಿಕೊಳ್ಳುವ ಭರದಲ್ಲಿ ಓಡಿದ ರವಿಯನ್ನು ಅಟ್ಟಾಡಿಸಿ ಹಂತಕರು ಸಿಎಂಹೆಚ್ ಬಾರ್ ಬಳಿಗೆ ಬಂದು ಹಲ್ಲೆ ಮಾಡಲಾಗಿದೆ. ಕೊನೆಗೆ ಹಳ್ಳಿರುಚಿ ಹೊಟೇಲ್ ಬಳಿ ಮಾರಕಾಸ್ತ್ರಗಳಿಂದ ದಾಳಿ ಮಾಡಲಾಗಿದೆ. ಬಳಿಕ ತಲೆಯ ಮೇಲೆ ಸೈಜ್ ಕಲ್ಲು ಎತ್ತಾಕಿ ಕೊಲೆ ಮಾಡಿದ್ದಾರೆ.
ಹಂತಕರು ಕೊಲೆಗೂ ಮುನ್ನ ಏರಿಯಾದಲ್ಲಿ ಹಾಕಿದ್ದ ಪ್ಲೆಕ್ಸ್‌ನಲ್ಲಿದ್ದ ರವಿಕುಮಾರ್ ಪೋಟೋ ಹರಿದು ಹಾಕಿ ಬಳಿಕ ಕೊಲೆ ನಡೆಸಿದ್ದಾರೆ.
ಸುದ್ದಿ ತಿಳಿದ ತಕ್ಷಣವೇ ಸ್ಥಳಕ್ಕೆ ನಂದಿನಿ ಲೇಔಟ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿ. ಹಂತಕರ ಪತ್ತೆಗೆ ಬಲೆ ಬಿಸಿದ್ದಾರೆ. ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಡೆಸಿ ಕುಟುಂಬದವರಿಗೆ ನೀಡಲಾಗಿದೆ.
ಕೊಲೆಯಾದ ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದ್ದು ಹೆಚ್ಚಿನ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕೈಗೊಳ್ಳಲಾಗಿದೆ.