ಕೈ ಕಲ್ಲು ಎತ್ತುವ ಸ್ಪರ್ಧೆಯಲ್ಲಿ ಪ್ರತಾಪ್ ವಿಜಯ

ರಾಯಚೂರು,ಡಿ.೪-ತಾಲೂಕಿನ ನಾಗನದೊಡ್ಡಿ ಗ್ರಾಮದ ಕುಮಾರ ಪ್ರತಾಪ್ ೧೦೦ ಕೆ.ಜಿ ಕೈ ಕಲ್ಲು ಎತ್ತುವ ಸ್ಪರ್ಧೆಯಲ್ಲಿ ವಿಜೇತರಾಗಿದ್ದು, ಇವರಿಗೆ ವಡ್ಡೆಪಲ್ಲಿ ಗ್ರಾಮದ ರಾಷ್ಟ್ರೀಯ ರತ್ನ ಪುರಸ್ಕೃತ ಸೂಗೂರಪ್ಪ ನಾಯಕ ಅವರು ೫ ತೊಳೆ ಬೆಳ್ಳಿ ಕಡಗ ಹಾಕಿ ಸನ್ಮಾನ ಮಾಡಿದರು.
ಈ ಸಂದರ್ಭದಲ್ಲಿ ಹನುಮಂತರೆಡ್ಡಿ ಹಾಗೂ ಗ್ರಾಮ ಪಂ ಸದಸ್ಯರು, ಯುವಕರು ಹಾಗೂ ಮುಖಂಡರು ಇದ್ದರು.