ಕೈ -ಕಮಲದಲ್ಲಿ ಭಿನ್ನಮತ,ಜೆಡಿಎಸ್ ಜಯಭೇರಿ

ರಾಯಚೂರು.ಜ.೧೦- ನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದಲ್ಲಿನ ಒಳಜಗಳಗಳಿಂದ ಈ ಸಾರಿ ಜೆಡಿಎಸ್ ಪಕ್ಷಕ್ಕೆ ಲಾಭವಾಗಿ ನಮ್ಮ ಪಕ್ಷದ ಅಭ್ಯರ್ಥಿ ಜಯಗಳಿಸುತ್ತಾರೆ ಎಂದು ಜೆಡಿಎಸ್ ಮುಖಂಡರಾದ ಚಂದ್ರು ಎಲ್ ಬಿ ಎಸ್ ನಗರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದರು.
ಈ ಬಾರಿ ನಗರ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ರಾಮನಗೌಡ ಏಗನೂರು ಅವರಿಗೆ ಟಿಕೆಟ್ ಸಿಗುವುದು ಬಹುತೇಕ ಖಚಿತವಾಗಿದೆ,ಹಾಲಿ ಶಾಸಕರು ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ, ಕಾಂಗ್ರೆಸ್ ಪಕ್ಷದಲ್ಲಿ ಈಗಾಗಲೇ ಭಿನ್ನಮತ ಸ್ಫೋಟವಾಗಿದೆ, ಅವರ ಪಕ್ಷದ ಅಭ್ಯರ್ಥಿಯನ್ನು ಅವರೇ ಸೋಲಿಸುವುದರಲ್ಲಿ ಯಾವುದೇ ಸಂದೇಹವಿಲ್ಲ, ಇದರಿಂದ ಕ್ಷೇತ್ರದಲ್ಲಿನ ಮತದಾರ ಪ್ರಭುಗಳು ಖಂಡಿತ ರಾಮನಗೌಡ ಏಗನೂರು ಅವರಿಗೆ ಆಶೀರ್ವಾದ ಮಾಡುತ್ತಾರೆ, ಜನ ಬದಲಾವಣೆಯನ್ನು ಬಯಸಿದ್ದಾರೆ, ಎಲ್ಲಾ ವರ್ಗದ ಜನರ ಒಲವು ರಾಮನಗೌಡರ ಮೇಲೆ ಇದೆ, ಹಾಗಾಗಿ ಸುಲಭವಾಗಿ ಜಯಗಳಿಸುತ್ತಾರೆ ಎಂದರು.
ನಗರ ಕ್ಷೇತ್ರದಲ್ಲಿರುವ ಕಾಂಗ್ರೆಸ್ -ಬಿಜೆಪಿ ಪಕ್ಷದ ಅನೇಕ ಹಿರಿಯ ಮುಖಂಡರು ಜೆಡಿಎಸ್ ಸೇರುತ್ತಿದಾರೆ, ಇನ್ನೂ ಹೆಚ್ಚಿನ ಮುಖಂಡರು ಹಾಗೂ ಕಾರ್ಯಕರ್ತರು ಇದೇ ತಿಂಗಳು ನಗರದಲ್ಲಿ ನಡೆಯುವ ಪಂಚತಂತ್ರ ಯಾತ್ರೆ ಕಾರ್ಯಕ್ರಮದಲ್ಲಿ ಕುಮಾರಸ್ವಾಮಿಯವರ ಸಮುಖದಲ್ಲಿ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾಗಲಿದ್ದಾರೆ.
ನಮ್ಮ ಪಕ್ಷದ ಮುಖ್ಯ ಯೋಜನೆಯಾದ ಪಂಚತಂತ್ರ ಯೋಜನೆಯಿಂದ ರಾಜ್ಯದ ಜನರು ಸಮೃದ್ಧಿಯಿಂದ ಜೀವನ ಸಾಗಿಸುವಂತೆ ಆಗುತ್ತದೆ,ಬರುವ ಚುನಾವಣೆಯಲ್ಲಿ ರಾಷ್ಟೀಯ ಪಕ್ಷಗಳನ್ನು ಸೋಲಿಸುವ ಮುಖಾಂತರ ಪ್ರಾದೇಶಿಕ ಪಕ್ಷಕ್ಕೆ ಜನರ ಬೆಂಬಲವಿದೆ,ಕುಮಾರಣ್ಣನವರು ಮುಖ್ಯಮಂತ್ರಿಯಾಗುವುದು ಖಚಿತ, ರಾಮನಗೌಡ ಏಗನೂರು ಅವರು ಶಾಸಕರಾಗುವುದು ಶತಸಿದ್ದವೆಂದು ಜೆಡಿಎಸ್ ಮುಖಂಡರಾದ ಚಂದ್ರು ಎಲ್‌ಬಿಎಸ್ ನಗರ ಹೇಳಿದರು.