ಕೈ ಕಟ್ಟಿ ಕುಳಿತ ಶಿಕ್ಷಣ ಇಲಾಖೆ

ಶಿಕ್ಷಕರ ಖಾಲಿ ಹುದ್ದೆಗಳ ಭರ್ತಿಗೆ ಸೂಕ್ತ ಕ್ರಮ ಯಾವಾಗ
ಲಿಂಗಸುಗೂರ,ಜು.೧೨-
ಸಂಜೆ ವಾಣಿ ಪ್ರತಿನಿಧಿ
ಲಿಂಗಸುಗೂರ ಪಟ್ಟಣದಲ್ಲಿರುವ ಶಾಸಕರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ಕೊರೆತೆ ಇದ್ದು ಇಲ್ಲಿ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ ಒಂದರಿಂದ ಏಳನೇ ತರಗತಿಯವರಿಗೆ ಇರುವ ಶಾಲೆಯಲ್ಲಿ ಸುಮಾರು ೭೦೦ ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದು ಇದರಲ್ಲಿ ಒಂದರಿಂದ ಮೂರನೇ ತರಗತಿವರಗೆ ಸರಕಾರದ ಇಂಗ್ಲಿಷ್ ಮೀಡಿಯಂ ಸುಮಾರು ನೂರಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣವನ್ನು ಪಡೆಯುತ್ತಿದ್ದು ಇಲ್ಲಿ ಕೇವಲ ಹನ್ನೊಂದು ಜನ ಶಿಕ್ಷಕರು ಇದ್ದು ಇದರಲ್ಲಿ ಒಬ್ಬ ಶಿಕ್ಷಕರು ಡೇಪ್ಟೇ ಷನ್ ಹೋಗಿದ್ದು ಹತ್ತು ಜನ ಶಿಕ್ಷಕರಲ್ಲಿ ಒಬ್ಬರು ದೈಹಿಕ ಶಿಕ್ಷಕರು. ಮೂರು ಜನ ಶಿಕ್ಷಕರು ಇಂಗ್ಲಿಷ್ ಮೀಡಿಯಂಗೆ ಉಳಿದ ಆರು ಜನ ಶಿಕ್ಷಕರು ಒಂದರಿಂದ ೭ ನೇ ತರಗತಿಯವರಿಗೆ ಕನ್ನಡ ಮೀಡಿಯಮ್‌ಗೆ ಇದರಲ್ಲಿ ಮುಖ್ಯ ಗುರುಗಳು ದಿನಾಲು ಬರುವ ಪಾಲಕರಿಗೆ ವಿದ್ಯಾರ್ಥಿ ಗಳಿಗೆ ವರ್ಗಾವಣೆ ಹಾಗೂ ಶಾಲಾ ದೃಡೀಕರಣ ಇನ್ನಿತರ ಕೆಲಸದಲ್ಲಿ ಮಾಡುವಲ್ಲಿ ಶಾಲೆಗೆ ಸಂಬಂದಿಸಿದ ಚಟುವಟಿಕೆಗಳಲ್ಲಿ ತೊಡಗಿರುತ್ತಾರೆ ಶಿಕ್ಷಕರ ಖಾಲಿ ಹುದ್ದೆಗಳ ಭರ್ತಿಗೆ ಸೂಕ್ತ ಕ್ರಮ ಯಾವಾಗ ಎಂದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಈ ಶಾಲೆಯಲ್ಲಿ ಐದು, ಆರು ಮತ್ತು ೭ ನೇ ತರಗತಿಯಲ್ಲಿ ೧೫೦ ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಇದ್ದು ಮಕ್ಕಳಿಗೆ ಸರಿಯಾಗಿ ಎಲ್ಲಾ ವಿಷಯಗಳ ಶಿಕ್ಷಕರಿಲ್ಲದೆ ಒಂದನೇ ತರಗತಿಯಲ್ಲಿ ಎರಡು ತರಗತಿಗಳ ಮಕ್ಕಳನ್ನು ಕೊಡಿಸಿ ಮಕ್ಕಳಿಗೆ ಕಲಬರಿಕೆ ಶಿಕ್ಷಣ ನೀಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.
ಶಾಲೆಯ ಮುಖ್ಯ ಗುರುಗಳು ನಮ್ಮಲ್ಲಿ ಶಿಕ್ಷಕರ ಕೊರೆತೆ ಇದೆ ಕಳೆದ ವರ್ಷ ೯ ಜನ ಅತಿಥಿ ಶಿಕ್ಷಕರನ್ನು ನೀಡಿದ್ದರು ಈ ವರ್ಷ ಕೇವಲ ಇಬ್ಬರು ಅತಿಥಿ ಶಿಕ್ಷಕರನ್ನು ನೀಡಿದ್ದಾರೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಹಲವಾರು ಬಾರಿ ಮೌಖಿಕ ಹಾಗೂ ಲಿಖಿತವಾಗಿ ವಾಗಿ ಶಿಕ್ಷಕರ ಕೂರೆತೆಯ ಬಗ್ಗೆ ಮಾಹಿತಿ ನೀಡಿದ್ದವೆ ಶಿಕ್ಷಣ ಇಲಾಖೆ ಅಧಿಕಾರಿಗಳು ನಮ್ಮಲ್ಲಿ ಇನ್ನೂ ಅನುದಾನ ಕೂರೆತೆ ಇದೆ ಮುಂದಿನ ದಿನಗಳಲ್ಲಿ ಸೂಕ್ತ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.
ಶಿಕ್ಷಕರು ಮತ್ತು ಸಹ-ಶಿಕ್ಷಕರ ಹುದ್ದೆಗಳು ಅನೇಕ ವರ್ಷಗಳಿಂದ ಖಾಲಿ ಇರುವುದರಿಂದ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ ಎಂದು ಪಾಲಕರು-ಪೋಷಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ತಾಲೂಕಿನಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆ, ಕೇಂದ್ರ ಪ್ರಾಥಮಿಕ ಶಾಲೆ, ಹಿರಿಯ ಪ್ರಾಥಮಿಕ ಶಾಲೆ, ಪ್ರೌಢ ಶಾಲೆಗಳಲ್ಲಿ ಪ್ರಾಥಮಿಕ ಶಾಲಾ
ಶಿಕ್ಷಕರ ಹುದ್ದೆಗಳು ಖಾಲಿ ಇರುವುದರಿಂದ ಕೆಲವು ಶಾಲೆಗಳಲ್ಲಿ ಮಕ್ಕಳ ಹಾಜರಾತಿಯೂ ಕಡಿಮೆಯಾಗಿದೆ.
ಮಧ್ಯಾಹ್ನ ಬಿಸಿಯೂಟ, ತತ್ತಿ, ಬಾಳೆಹಣ್ಣು, ಸಮವಸ್ತ್ರ, ಪಠ್ಯಪುಸ್ತಕ, ವಿದ್ಯಾರ್ಥಿ ವೇತನ ಇನ್ನಿತರ ಸವಲತ್ತುಗಳನ್ನು ಸರ್ಕಾರ ವಿದ್ಯಾರ್ಥಿಗಳಿಗೆ ಒದಗಿಸುತ್ತಿದೆ. ಆದರೆ ಶಿಕ್ಷಕರ ಹುದ್ದೆಗಳು ಖಾಲಿ ಇರುವುದರಿಂದ ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರಕುತ್ತಿಲ್ಲ ಎಂದು ಪ್ರಜ್ಞಾವಂತರು, ವಿದ್ಯಾರ್ಥಿಗಳ ಪಾಲಕರು ಬೇಸರ ವ್ಯಕ್ತಪಡಿಸಿದ್ದಾರೆ.
ಅತಿಥಿ ಶಿಕ್ಷಕರ ಮೂಲಕ ಕೊರತೆ ನೀಗಿಸುವ ಪ್ರಯತ್ನವನ್ನು ಶಿಕ್ಷಣ ಇಲಾಖೆ ಮಾಡುತ್ತಿದ್ದರೂ ಅದು ಪೂರ್ಣ ಪ್ರಮಾಣದಲ್ಲಿ ಪರಿಣಾಮ ಬೀರುತ್ತಿಲ್ಲ.
ತಾಲೂಕಿನಲ್ಲಿ ಖಾಯಂ ಶಿಕ್ಷಕರ ನೇಮಕಾತಿಗೆ ಗ್ರಹಣ:
ಈಗಾಗಲೇ ಶಾಲಾ ಶೈಕ್ಷಣಿಕ ವರ್ಷ ಪ್ರಾರಂಭ ವಾದರು ಖಾಯಂ ಶಿಕ್ಷಕರ ನೇಮಕಾತಿಗೆ ಗ್ರಹಣ ಹಿಡಿದಿದೆ ತಾಲೂಕಿನಲ್ಲಿ ಪ್ರಸಕ್ತ ಸಾಲಿನಲ್ಲಿ ಶೈಕ್ಷಣಿಕ ಚಟುವಟಿಕೆಗಳು ಆರಂಭ ಗೊಂಡು ಎರಡು ತಿಂಗಳು ಕಳೆಯುತ್ತಾ ಬಂದರೂ ಇದುವರೆಗೆ ಯಾವುದೇ ಖಾಯಂ ಶಿಕ್ಷಕರ ಕೊರತೆ ನೀಗಿಸಲು ಅಧಿಕಾರಿಗಳು ಮೀನಾ ಮೇಷ ಮಾಡುವ ಮುಖಾಂತರ ಬಡ ಮಕ್ಕಳ ವಿದ್ಯಾಭ್ಯಾಸದ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂಬುದು ಪಟ್ಟಣದ ಶಾಸಕರ ಹಿರಿಯ ಪ್ರಾಥಮಿಕ ಶಾಲೆ ಸಾಕ್ಷಿಯಾಗಿದೆ.
ದೊಡ್ಡಿ ಗ್ರಾಮೀಣ ಶಾಲೆಗಳಲ್ಲಿ ಅತಿಥಿ ಶಿಕ್ಷಕರೆ ಆಸರೆ:
ತಾಲ್ಲೂಕಿನ ಬಹುತೇಕ ದೊಡ್ಡಿಗಳಲ್ಲಿ ಖಾಯಂ ಶಿಕ್ಷಕರ ಕೊರತೆಯಿಂದಾಗಿ ಶಿಕ್ಷಣ ಕುಂಠಿತಗೊಂಡು ಮಕ್ಕಳ ವಿದ್ಯಾಭ್ಯಾಸದ ಮೇಲೆ ಕರಿ ಛಾಯೆ ಬಿರಿದೆ
ಆದರೆ ಶಾಲಾ ಆಡಳಿತ ಮಂಡಳಿ ಸಕಾಲದಲ್ಲಿ ಎಚ್ಚೆತ್ತುಕೊಂಡು ಬಹುತೇಕ ದೊಡ್ಡಿ ಗಳ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಸ್ಥಳೀಯ ವಾಗಿ ಸರ್ಕಾರದ ನಿಯಮ ಪ್ರಕಾರ ಆಡಳಿತ ಮಂಡಳಿಯು ಅತಿಥಿ ಶಿಕ್ಷಕರ ನೇಮಕಕ್ಕೆ ಶಿಕ್ಷಣ ಇಲಾಖೆ ಪತ್ರ ಬರೆದು ನಮ್ಮ ಶಾಲೆಗಳಿಗೆ ಶಿಕ್ಷಕರ ನೇಮಕಕ್ಕೆ ಪೂರ್ಣ ಪ್ರಮಾಣದ ಭರ್ತಿ ಮಾಡಬೇಕು ಎಂಬುದು ಶಾಲಾ ಶೈಕ್ಷಣಿಕ ಆಡಳಿತ ಮಂಡಳಿ ಅನೇಕ ಸಲ ಮನವಿ ಮಾಡಿದ್ದಾರೆ.
ಶಾಲಾ ಶೈಕ್ಷಣಿಕ ಆಡಳಿತ ಮಂಡಳಿಯಿಂದ ಸರ್ಕಾರಿ ಪ್ರಾಥಮಿಕ ಕಿರಿಯ ಹಿರಿಯ ದೊಡ್ಡಿ ಗಳಲ್ಲಿ ಇರುವ ಶಾಲೆಗಳಿಗೆ ಬಹುತೇಕ ಅತಿಥಿ ಶಿಕ್ಷಕರೆ ಆಸರೆ ಯಾಗಿದ್ದಾರೆ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ತಾಲೂಕಿನಲ್ಲಿ ಕೊರತೆ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಮುಂದಾಗಬೇಕು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಸರಕಾರಿ ಶಾಲೆಗಳಲ್ಲಿ ಗ್ರಾಮೀಣ ಹಾಗೂ ಬಡ ವರ್ಗದ ಮಕ್ಕಳು ಓದುತ್ತಿದ್ದಾರೆ. ಶಿಕ್ಷಕರ ಕೊರತೆಯಿಂದ ಈ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರಕಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಸರಕಾರ ಕೂಡಲೇ ಈ ಕುರಿತು ಗಮನ ಹರಿಸಬೇಕಾಗಿದೆ. ಅಗತ್ಯವಿರುವ ಶಿಕ್ಷಕರ ಹುದ್ದೆಗಳ ಭರ್ತಿಗೆ ಸೂಕ್ತ ಕ್ರಮ ಕೈಗೊಳ್ಳುತ್ತಾರೆ ಇಲ್ಲವೊ ಕಾದುನೋಡಬೇಕಾಗಿದೆ?.