ಕೈ ಇಲ್ಲದಿದ್ದರೂ ಕಾಲುಗಳಿಂದಲೇ ಮೋಡಿ ಮಾಡುವ ಬೈಕ್ ಮೆಕ್ಯಾನಿಕ್:ಅಂಗವಿಕಲ ಯುವಕನ ಅದ್ಭುತ ಟ್ಯಾಲೆಂಟ್

ಕಲಬುರಗಿ: ನ.14:ತಾಯಿ ಹೊಟ್ಟೆಯಿಂದ ಬರುವಾಗಲೇ ಕೈಗಳಿಲ್ಲದೆ ಜನ್ಮತಾಳಿದ ಮಗುವೊಂದು ಇಂದು ಯುವಕನಾಗಿ ತನ್ನ ಕಾರ್ಯಕ್ಷಮತೆಯಿಂದಾಗಿ ದೇಶಾದ್ಯಂತ ಮನೆ ಮಾತಾಗುವ ಮೂಲಕ ಯುವಜನತೆಗೆ ಪ್ರೇರಕನಾಗಿದ್ದಾನೆ.

ಕಲಬುರಗಿ ನಗರದ ಸ್ಟೇಶನ್ ಬಜಾರ್ ಅಪರ್ ಲೈನ್ ನಿವಾಸಿಯಾಗಿರುವ ಅಬ್ದುಲ್ ರೆಹಮಾನ್ ಇಂದು ತನ್ನ ಕಾಲುಗಳ ಸಹಾಯದಿಂದಲೇ ಬೈಕನ್ನು ರಿಪೇರಿ ಮಾಡುವಂತಹ, ಕ್ರಿಕೆಟ್ ಆಡುವಂತಹ ಚಾಕಚಕ್ಯತೆ ಪಡೆದಿದ್ದಾನೆ. ಈತನ ಕಾರ್ಯವೈಖರಿಯನ್ನು ರಾಹುಲ್ ಗಾಂಧಿ ಕಣ್ಣಾರೆ ನೋಡಿ ಮೂಕ ವಿಸ್ಮಯರಾಗಿದ್ದಾರೆ.

ಕಲಬುರಗಿ: ಪರಿಪೂರ್ಣ ಅಂಗಾಂಗಳು ಹೊಂದಿದ್ದರು ಮಾನಸಿಕವಾಗಿ ಅಂಗವಿಕಲತೆಯನ್ನು ಕಾಪಾಡಿಕೊಳ್ಳುವಂತಹ ಯುವಪಿಳಿಗೆ ತಾಯಿ ಹೊಟ್ಟೆಯಿಂದಲೇ ಎರಡು ಕೈಗಳು ಇಲ್ಲದೇ ಜನ್ಮತಾಳಿದ ಯುಗಪುರಷನ ಮೆಕ್ಯಾನಿಕ್ ಕೆಲಸ ಇದೀಗ ಭಾರಿ ವೈರಲ್ ಆಗಿ ಜನರಿಗೆ ಮೂಡಿ ಮಾಡಿ ಅಶ್ಚರ್ಯ ಪಡುವಂತೆ ಮಾಡಿದೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಮ್ಮಿಕೊಂಡಿರುವ ಭಾರತ ಜೋಡೊ ಯಾತ್ರೆ ರಾಯಚೂರುಗೆ ತಲ್ಲುಪಿದ ವೇಳೆ ಅಬ್ದುಲ್ ರೆಹಮಾನ್ ಮತ್ತು ಮೂವರು ಸೇರಿ ಯಾತ್ರೆಯಲ್ಲಿ ಭಾಗವಹಿಸಲು ತೆರಳಿದರು. ಯಾತ್ರೆಯಲ್ಲಿ ಅಬ್ದುಲ್ ರೆಹಮಾನ್ ರಾಷ್ಟ್ರ ಧ್ವಜವನ್ನು ತನ್ನ ಹೇಗಲಲ್ಲಿ ಹಿಡಿದುಕೊಂಡು ಗಾಳಿಯಲ್ಲಿ ಅಳಗಾಡಿಸುವ ಮೂಲಕ ತನ್ನ ದೇಶಭಿಮಾನ ಪ್ರದರ್ಶನ ಮಾಡುತ್ತಿದ ಎರಡು ಕೈಗಳು ಇಲ್ಲೇ ಧ್ವಜವನ್ನು ಗಾಳಿಯಲ್ಲಿ ಅಳುಗಾಡಿಸುವ ಸಹಾಸದ ದೃಶ್ಯ ರಾಹುಲ್ ಗಾಂಧಿಯ ಮುಕವಿಸ್ಮಯವಾಗಿಸಿ ಅವನ ಟೈಲೆಂಟ್ ನೋಡಲು ರಾಹುಲ್ ಗಾಂಧಿ ಉತ್ಸುಕರಾಗಿದ್ದರು.

ರಾಹುಲ್ ಗಾಂಧಿ ರಾತ್ರಿ 9 ಗಂಟೆಗೆ ರಾಹುಲ್ ಗಾಂಧಿ ಸಭೆ ಮೊಟಕುಗೊಳ್ಳಿಸಿ ಕೆಪಿಸಿಸಿ ಅಧ್ಯಕ್ಷರಾದ. ಡಿ.ಕೆ ಶಿವಕುಮಾರ, ಶಾಸಕ ಪ್ರಿಯಾಂಕ್ ಖರ್ಗೆ ಮತ್ತು ಡಾ. ಅಜಯಸಿಂಗ್ ಹಾಗೂ ಯುಟಿ ಖಾದರ್ ಪಕ್ಷದ ಮುಖಂಡರ ಜೊತೆಗೆ ಸುಮಾರು ಒಂದುವರೆ ತಾಸು ತನ್ನ ಕೆಲಸ ಮತ್ತು ಟೈಲೆಂಟ್ ಮೂಲಕ ರಾಹುಲ್ ಗಾಂಧಿಯನ್ನು ಸೇರಿದಂತೆ ಹಲವರನ್ನು ಮಂತ್ರಮುಗ್ಧಗೊಳಿಸಿದ ಅಬ್ದುರ್ರಹ್ಮಾನ್.

ಅವನ ಟೈಲೆಂಟ್ ಮತ್ತು ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ರಾಹುಲ್ ಗಾಂಧಿ ಮುಂದೆ ಬಂದು ಏನು ಕೆಲಸ ಮಾಡುತ್ತಿ, ಹೇಗೆ ಕೆಲಸ ಮಾಡುತ್ತಿ ಎಂದು ಕೇಳಿದಕ್ಷಣ, ಮೆಕ್ಯಾನಿಕ್ ಕೆಲಸವನ್ನು ತನ್ನ ಕಾಲುಗಳ ಸಹಾಯದಿಂದ ಮಾಡುತ್ತೇನೆ ಎಂಬುದಾಗಿ ತಿಳಿಸಿದೆ ಎಂದು ಅಬ್ದುಲ್ ರೆಹಮಾನ್ ಹೇಳಿಕೊಂಡಿದ್ದಾನೆ.

ಅಬ್ದುಲ್ ರಹೇಮಾನ ತನ್ನ ಕಾಲುಗಳ ಸಹಾಯದಿಂದ ಬೈಕ್ ರಿಪೇರಿ ಮತ್ತು ಕ್ರಿಕೇಟ್ ಆಡುವ ಪ್ರತಿಭೆ ಕಂಡ ರಾಹುಲ್ ಗಾಂಧಿ ಅಬ್ದುಲ್ ರಹೇಮಾನಗೆ ಚಪ್ಪಾಳೆ ತಟ್ಟುತ್ತಾರೆ. ಮಾತುಕತೆ ನಡೆಸಿ ದಿಲ್ಲಿಗೆ ಬನ್ನಿ ಎಂದು ರಾಹುಲ್ ಗಾಂಧಿ ಆಹ್ವಾನ ನೀಡಿದ್ದಾರೆ. ನಾನು ದಿಲ್ಲಿಗೆ ಹೋಗಿ ಸೋನಿಯಾ ಗಾಂಧಿಯನ್ನು ಭೇಟಿ ಮಾಡಲು ಉತ್ಸುಕನಾಗಿದ್ದೇನೆ ಎಂದು ಅಬ್ದುಲ್ ರಹೇಮಾನ್ ತಿಳಿಸಿದ್ದಾರೆ.

ಅಬ್ದುಲ್ ರಹೇಮಾನ ಕಲಬುರಗಿ ನಗರದ ಸ್ಟೇಶನ್ ಬಜಾರ್ ಅಪರ್ ಲೈನ್ ನಿವಾಸಿಯಾಗಿದ್ದು, ತಾಯಿ ಹೊಟ್ಟೆಯಿಂದ ತನ್ನ ಎರಡು ಕೈಗಳು ಇಲ್ಲದೇ ಹುಟ್ಟಿದ್ದಾನೆ. ಇಂತಹ ಅಪರೂಪದ ಮಗು ಹೊಟ್ಟಿರುವ ವಿಷಯ ಕುಟುಂಬಸ್ಥರು 15 ದಿನಗಳ ವರೆಗೆ ಮುಚ್ಚಿಟಿದರು ಎಂದು ತಾಯಿಯಾದ ಶಾಹೀನ್ ಬೇಗಂ ಹೇಳುತಾರೆ. ಎರಡು ಕೈಗಳು ಇಲ್ಲದ ವಿಶೇಷವಾಗಿರುವ ನನ್ನ ಶಿಶುವನ್ನು ಮೊದಲ ಸಲ ಕಂಡು ನಾನು ಮುರ್ಚೆಹೊಗಿದ್ದೆ ಎಂದು ಶಾಹೀನ್ ಬೇಗಂ ತನ್ನ ಹಳೆ ನೆನಪ್ಪುಗಳನ್ನು ಮೇಲಕ್ಕೆ ಹಾಕಿದರು.

ವೀಧಿ ಆಟಾವನ್ನು ಸ್ವೀಕರಿಸಿ ಅಬ್ದುಲ್ ರಹೇಮಾನ ನನ್ನು ಉಳಿಸಿಕೊಳ್ಳಲು ಆಸ್ಪತ್ರೆ ಆಸ್ಪತ್ರೆಗಳಿಗೆ ಅಲೇದಾಡಿದ್ದೇವೆ. ಆಗ ಅವನು ನೆಲದ ಮೇಲೆ ಹೊರಳಾಡುತ್ತಿದ್ದ. ಅವನ ಈ ಸ್ಥಿತಿ ಕಂಡವರು ಕಣ್ಣಿರು ಹಾಕಿದೆ ಇರುತ್ತಿರಲಿಲ್ಲ. ವಾಕರ್ ಮೂಲಕ ನಡೆಯುವದನ್ನು ಕಲಿತ, 7ನೇ ತರಗತಿ ವರೆಗೆ ನಗರದ ಆಲ್ ಮೀನ್ ಶಾಲೆಯಲ್ಲಿ ಓದಿಸಿ ಶಾಲೆಯನ್ನು ಬಿಡಿಸಿ ಮೆಕ್ಯಾನಿಕ್ ಕೆಲಸಕ್ಕೆ ಕಳುಹಿಸಿದ್ದೇವೆ. ಅವನಿಗೆ ದಿನಕ್ಕೆ 10ರೂ ಕುಡುತಿದ್ದರು. ನಂತರ 20,30,40,50 ಹೇಗೆ ಸಂಬಳ ಕುಡುತಿದ್ದರು. ನಾಲ್ಕು ವರ್ಷದವರೆಗೆ ಮೆಕ್ಯಾನಿಕ್ ಕೆಲಸ ಮಾಡುತ್ತ ಬೈಕ್ ಟೈಯರ್ ಬಿಚ್ಚುವುದು, ಆಲ್ ಚೇಂಜ್, ಬೈಕ್ ಸ್ಟಾರ್ಟ್ ಮಾಡುವುದು, ಸೈಡ್ ಮಿರರ್ ಸೇಟ್ ಮಾಡುವುದು ಸೇರಿದಂತೆ ಬೈಕ್ ರಿಪೇರಿಗೆ ಸಂಬಂಧಿಸಿದ ಎಲ್ಲಾ ಕೆಲಸವನ್ನು ಕಲೆತಿದ್ದಾನೆ. ಇತ್ತೀಚಿಗೆ ಮೆಕ್ಯಾನಿಕ್ ಕೆಲಸವು ಬಿಡಿಸಿದ್ದೇವೆ ಮನೆಯಲ್ಲಿ ಸಣ್ಣ ಕಿರಾಣಿ ಅಂಗಡಿ ನಡೆಸುತ್ತಿದ್ದಾನೆ.

ದಿನನಿತ್ಯ ಕಾರ್ಯಗಳಾದ ಮುಖಾ ತೊಳೆದುಕೊಳ್ಳುವುದು ಹಲ್ಲುವುಜ್ಜುವುದು, ತಲೆಬಾಚಿಕೊಳ್ಳುವುದು, ಶೇವಿಂಗ್ ಮಾಡಿಕೊಳ್ಳುವುದು ಊಟ ಮತ್ತು ಟೀ ತಯಾರಿಸುವ ಕೆಲಸ ಸಹ ಕಾಲುಗಳ ಮೂಲಕನೇ ಮಾಡುತ್ತಾನೆ. ಮೊಬೈಲ್ ನಂಬರ್ ಡೈಲ್ ಮಾಡುವುದು ಮೊಬೈಲ್ ಕರೆಗಳು ಸ್ವೀಕರಿಸುವ ಕೆಲಸ ಸಹ ತನ್ನ ಕಾಲುಗಳ ಮೂಲಕ ಮಾಡುವ ಕೌಶಲ್ಯವನ್ನು ಹೊಂದಿದ್ದಾನೆ.

ಹವ್ಯಾಸಗಳು: ಕ್ರಿಕೇಟ್ ಆಡುವುದು, ಗಾಳಿಪಟ ಹಾರಿಸುವುದು, ದೀಪಾವಳಿಯಲ್ಲಿ ಪಟಾಕಿ ಸಿಡಿಸುವುದು, ಗೊಲಿ ಆಡುವುದು, ಛೀಣಿ ಆಡುವುದು ಹೀಗೆ ಮಕ್ಕಳೊಂದಿಗೆ ಎಲ್ಲಾತರಹದ ಆಟಗಳನ್ನು ಆಡಿಕೊಂಡು ಬೇಳದಿದ್ದೇನೆ. ಇಷ್ಟೇಲ್ಲ ಕಲಿತರು ನನ್ನಗೆ ಬೈಕ್ ಓಡಿಸಲು ಕಲೆಯಲ್ಲು ಸಾಧ್ಯವಾಗಿಲ್ಲ ಎಂಬ ಕೊರಗು ನನ್ನಗೆ ಕಾಡುತ್ತಿರುತ್ತಿದೆ ಎಂದು ಅಬ್ದುಲ್ ರಹೇಮಾನ ನಿರಾಶೆ ವ್ಯಕ್ತಪಡಿಸಿದ್ದಾರೆ.


ಅಂಗವಿಕಲನಾಗಿ ಹುಟ್ಟಿದ ನನ್ನಗೆ ತಂದೆ ತಾಯಿ ಮಾತ್ರ ಆಸರೆ. ಅವರು ನನ್ನಗೆ ನೀಡಿರೂವ ಜೀವನಕ್ಕೆ ನಾನು ಋಣಿ. ನಾನು ದೊಡ್ಡ ಉದ್ಯಾಮಿಯಾಗಬೇಕೆಂಬ ಕನಸ್ಸುಹೊಂದಿದ್ದು, ಎಲ್ಲಾ ಕೆಲಸ ಕಲಸಿದ ಗುರುಗಳಿಗೆ ನಾನು ಆಭಾರಿಯಾಗಿದ್ದೇನೆ. ಶ್ರಮದ ಪ್ರತಿಫಲ ನಾನು ಬೇಳೆಯುತ್ತಿದ್ದೇನೆ. ಸರಕಾರದಿಂದ ಸಿಗಬೇಕಾದ ಸೌಲಭ್ಯ ಮತ್ತು ಸೌಕರ್ಯಗಳ ಮಾಹಿತಿ ಕೊರತೆಯಿಂದ ಪಡೆಯಲು ಸಾಧ್ಯವಾಗಿಲ್ಲ. ಸಂಬಂಧಪಟ್ಟ ಅಧಿಕಾರಿಗಳು, ಜನ ಪ್ರತಿನಿಧಿಗಳು ಕಾಳಜಿ ವಹಿಸಿ ಸೌಲಭ್ಯಗಳು ಕೊಡಸಿ, ನನ್ನ ಕನಸಿಗೆ ಬೆಂಬಲದಿಂದ ಉದ್ಯಾಮಿಯಾಗಿ ಬೇಳೆಯಲು ಪ್ರಯತ್ನಿಸುತ್ತೇನೆ. -ಅಬ್ದಲ್ ರಹೇಮಾನ್.


ಅಬ್ದುಲ್ ರಹೇಮಾನ್ ಸೇರಿ ಮೂವರು ಮಕ್ಕಳು ಇವನೊಬ್ಬನೆ ನಮಗೆ ಗಂಡು ಮಗ, ಇಬ್ಬರು ಹೇಣು ಮಕ್ಕಳು. ಪೇನಸ್ ಹಣದಿಂದ ಜೀವನ ನಡೆಯುತ್ತಿದೆ. ನಾಳೆ ನಾವು ಇಲ್ಲದಿದ್ದೇರೆ ಅವನ ಬದುಕು ಅತಂತ್ರ. ಅವನ ಬಗ್ಗೆ ನಮ್ಮಗೆ ಚಿಂತೆಯಾಗಿದೆ. ಅವನ ಸಾಮಥ್ರ್ಯಕ್ಕೆತಕ್ಕಂತೆ ಅವನಿಗೆ ಸರಕಾರಿ ಕೆಲಸ ಸಿಕ್ಕಿದರೆ ಸೂಕ್ತ. -ಮೊಹಮ್ಮದ್ ಅರ್ಶದ್, ಅಬ್ದುಲ್ ರಹೇಮಾನ್ ತಂದೆ.