ಕೈ ಅಧಿಕಾರಕ್ಕೆ ಬಂದರೆ ಅಸ್ಸಾಂನಲ್ಲಿ ಸಿಎಎ ಜಾರಿ ಇಲ್ಲ : ರಾಹುಲ್ ಭರವಸೆ

ಗುವಾಹಟಿ, ಮಾ.19- ಅಸ್ಸಾಂನಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯಾಗದಂತೆ ನೋಡಿಕೊಳ್ಳಲಾಗುವುದು‌ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭರವಸೆ ನೀಡಿದ್ದಾರೆ.
ಅಸ್ಸಾಂನ ದಿಬ್ರುಗಡದಲ್ಲಿ ವಿದ್ಯಾರ್ಥಿಗಳ ಜತೆ ಸಂವಾದದಲಲ್ಲಿ ಮಾತನಾಡಿದ ಅವರು, ಅಸ್ಸಾಂ ಒಪ್ಪಂದದ ಅನುಸಾರ ಜನರ ಹಕ್ಕುಗಳನ್ನು ರಕ್ಷಿಸಲಿದ್ದೇವೆ ಎಂದು ಹೇಳಿದರು.
ಸಮಾಜ ವಿಭಜಿಸಲು ಬಿಜೆಪಿ ದ್ವೇಷವನ್ನು ಮಾರುತ್ತಿದೆ. ಬಿಜೆಪಿ ದ್ವೇಷವನ್ನು ಹರಡುವ ಜಾಗಗಳಲ್ಲಿ ನಾವು ಪ್ರೀತಿ ಮತ್ತು ಸಾಮರಸ್ಯ ಬಿತ್ತಲಿದ್ದೇ ಎಂದು ತಿಳಿಸಿದರು.
ನಾಗಪುರದ ಶಕ್ತಿ ದೇಶವನ್ನು ನಿಯಂತ್ರಿಸಲು ಯತ್ಬಿಸುತ್ತಿದೆ. ಎಂದು ಆರ್ ಎಸ್ ಎಸ್‌ ವಿರುದ್ದ ತೀವ್ರ ವಾಗ್ದಾಳಿ ನಡೆಸಿದರು.
126 ಸದಸ್ಯಬಲದ ಅಸ್ಸಾಂ ವಿಧಾನಸಭೆಗೆ ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮೊದಲ ಹಂತ ಮಾರ್ಚ್ 27, ಎರಡನೇ ಹಂತ ಏಪ್ರಿಲ್ 1 ಹಾಗೂ ಮೂರನೇ ಹಂತದ ಮತದಾನ ಏಪ್ರಿಲ್ 6ರಂದು ನಡೆಯಲಿದೆ.

ಮೊದಲ ಹಂತದಲ್ಲಿ 47 ಕ್ಷೇತ್ರಗಳಿಗೆ, ಎರಡನೇ ಹಂತದಲ್ಲಿ 39 ಕ್ಷೇತ್ರಗಳಿಗೆ ಹಾಗೂ ಕೊನೆಯ ಹಂತದಲ್ಲಿ 40 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.