
ಸಂಜೆವಾಣಿ ವಾರ್ತೆ
ಮೊಳಕಾಲ್ಮೂರು,ಮಾ.7: ಸಮಾಜ ಚಿಂತಕರು, ದಾಸ ಸಾಹಿತ್ಯದ ಹರಿಕಾರರು, ಸಮಾಜ ಸುಧಾರಕರು ಕಾಲ ಜ್ಞಾನಿಗಳು ಶ್ರೀ ಕೈವಾರ ತಾತಯ್ಯ ನವರು ಎಂದು ತಹಶೀಲ್ದಾರ್ ಶ್ರೀಮತಿ ರೂಪ ತಿಳಿಸಿದರು.
ಅವರು ಇಂದು ಪಟ್ಟಣದ ತಾಲೂಕು ಕಚೇರಿಯಲ್ಲಿ ನಡೆದ ಶ್ರೀ ಕೈವಾರ ತಾತಯ್ಯ ನವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಹಿಂದಿನ ಕಾಲದ ದಾರ್ಶನಿಕ ಮಹಾನಿಯರ ಆದರ್ಶಗಳು ಮುಂದಿನ ಪೀಳಿಗೆಗೆ ಮಾರ್ಗದರ್ಶನಗಳು ಕೈವಾರ ತಾತಯ್ಯ ನವರು ಬಲಿಯ ಸಮಾಜದಲ್ಲಿ ಜನಿಸಿ ತನ್ನ ದಾಸ ಸಾಹಿತ್ಯದ ಮೂಲಕ ನಾಡಿಗೆ ಚಿರಪರಿಚಿತವಾದ ಮಹಾನ್ ವ್ಯಕ್ತಿಗಳು. 1726 ರಲ್ಲಿ ಕೈವಾರ ದಲ್ಲಿ ಜನಿಸಿದ ಅವರು ತಮ್ಮ ಬದುಕಿನುದ್ದಕ್ಕೂ ಸಮಾಜ ಮುಖಿಯಾಗಿ ಬಾಳಿ ದವರು ಅಂತಹ ಅಪ್ರತಿಮ ಸಾಧಕರ ಜಯಂತಿ ಆಚರಣೆ ಮಾಡುವುದು ನಮ್ಮ ಪುಣ್ಯ. ಇಂದಿನ ಯುವಕರಿಗೆ ಅವರ ಸಾಧನೆಗಳು ಸಾಹಿತ್ಯ ಗಳು ಅವಿಸ್ಮರಣೀಯ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಲಿಜ ಸಮಾಜ ಮುಖಂಡರಾದ ಬಿ.ಆರ್.ಮಂಜುನಾಥ್, ಭಾಸ್ಕರ್, ಮುರುಳಿ ಮಧುಸೂದನ್, ಚಂದ್ರಶೇಖರ್, ಆಂಜನಪ್ಪ, ರವಿ, ಸುಧಾಕರ್ ಹನುಮಂತ ವೆಂಕಟೇಶ್ ನಾಗರಾಜ್ ಮತ್ತು ತಾಲ್ಲೂಕು ಕಚೇರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.