ಕೈವಾರ ತಾತಯ್ಯ ಜಯಂತಿ ಆಚರಣೆಗೆ ಒತ್ತಾಯ

ದೇವನಹಳ್ಳಿ ಮಾ.೨೯:ರಾಜ್ಯಾದ್ಯಂತ ಫಾಲ್ಗುಣ ಮಾಸದ ಹುಣ್ಣಿಮೆ ಮಾರ್ಚ್ ೨೮ ರಂದು ಕಾಲಜ್ಞಾನಿ ಶ್ರೀ ಯೋಗಿ ನಾರಾಯಣ ಯತೀಂದ್ರ ಕೈವಾರ ತಾತಯ್ಯ ಜಯಂತಿ ಆಚರಣೆ ಮಾಡಬೇಕು,ಎಂದು ಬೂದಿಗೆರೆ ಬಲಜ ಸಂಘದ ಅಧ್ಯಕ್ಷ ರಾಮಾಂಜನೇಯ ಅಭಿಪ್ರಾಯ ವ್ಯಕ್ತಪಡಿಸಿದರು.
ದೇವನಹಳ್ಳಿ ತಾಲ್ಲೂಕು ಬೂದಿಗೆರೆ ಗ್ರಾಮದಲ್ಲಿ ಕಾಲ ಜ್ಞಾನಿ ಯೋಗ
ನಾರಾಯಣ ಕೈವಾರ ತಾತಯ್ಯ ನವರ ಜಯಂತಿ ಆಚರಣೆಯಲ್ಲಿ ಮಾತನಾಡಿದ ಅವರು,ಇತಿಹಾಸ ವಿರುವ ಕೈವಾರ ನಾರಾಯಣ ತಾತರವರು ಕಿರ್ತನೆಗಳ ಮೂಲಕ ಜಾಗೃತಿ ಮೂಡಿಸಿದ್ದಲ್ಲದೆ ಕಾಲಜ್ಞಾನ ವನ್ನು ರಚಿಸಿದ್ದಾರೆ,ಅವರ ಬರೆದಿರುವಂತೆ ಬಹುತೇಕವಾಗಿ ಪ್ರಕೃತಿಯಲ್ಲಿ ನದೆಯುತ್ತಿದೆ,ಆದ್ದರಿಂದ ನಮ್ಮ ಬಲಿಜ ಸಮಾಜ ಅವರ ಜಯವನ್ನು ಆಚರಿಸುತ್ತಿದ್ದೇವೆ ಎಂದರು.
ರಾಜ್ಯ ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಬೂದಿಗೆರೆ ಗ್ರಾಮದ ಭಜನೆ ಮನೆಯಲ್ಲಿ ಬಲಿಜ ಸಂಘದ ವತಿಯಿಂದ ಶ್ರೀ ಯೋಗಿ ನಾರಾಯಣ ಯತೀಂದ್ರ ಕೈವಾರ ತಾತಯ್ಯ ಅವರ ಜಯಂತಿಯನ್ನು ಆಚರಣೆ ಮಾಡುತ್ತಿದ ಹಲವು ದಿನಗಳಿಂದ ಕೈವಾರ ತಾತಯ್ಯ ಅವರ ಜಯಂತಿ ಆಚರಣೆ ಮಾಡಲು ದಿನಾಂಕದ ಗೊಂದಲವಿತ್ತು. ಇದೀಗ ಆ ಗೊಂದಲಕ್ಕೆ ತೆರೆ ಬಿದ್ದಿದ್ದು, ಈ ಗೊಂದಲದಿಂದ ಹೊರಬರಲು ಶ್ರೀ ಕೈವಾರ ಯೋಗಿ ನಾರೇಯಣ ಯತೀಂದ್ರ ಮಠವು ವಿದ್ವಾಂಸರು,ಪಂಡಿತರು,ಜ್ಞಾನಿಗಳು, ಸಂಶೋಧಕರ ಸಮಿತಿಯೊಂದನ್ನು ರಚಸಿತ್ತು. ಆ ಸಮಿತಿ ಪ್ರತಿ ವರ್ಷ ಫಾಲ್ಗುಣ ಮಾಸದ ಹುಣ್ಣಿಮೆಯಂದು ಆಚರಿಸಲು ತೀರ್ಮಾನ ತೆಗೆದುಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಇಂದು ಕೈವಾರ ತಾತಯ್ಯ ಅವರ ಜಯಂತಿ ಆಚರಣೆ ಮಾಡಲಾಗುತ್ತಿದೆ. ನಮ್ಮ ಬೂದಿಗೆರೆ ಗ್ರಾಮದಲ್ಲಿ ಸಹ ಕೊರೊನಾ ಹಿನ್ನೆಲೆಯಲ್ಲಿ ಸರಳವಾಗಿ ಜಯಂತಿ ಆಚರಣೆ ಮಾಡಲಾಗಿದೆ ಎಂದು ತಿಳಿಸಿದರು.
ದೇವನಹಳ್ಳಿ ತಾಲ್ಲೂಕು ಬಲಿಜ ಸಂಘದ ಉಪಾಧ್ಯಕ್ಷ ಮೂರ್ತಿ ಮಾತನಾಡಿ, ಶ್ರೀ ಯೋಗಿ ನಾರೇಯಣ ಕೈವಾರ ತಾತಯ್ಯ ಅವರ ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಣೆ ಮಾಡಲು ಆದೇಶ ಜಾರಿ ಮಾಡಬೇಕು. ರಾಜ್ಯದ ಎಲ್ಲಾ ಸರ್ಕಾರಿ ಕಛೇರಿಗಳಲ್ಲಿ ಜಯಂತಿಯಂದು ಕೈವಾರ ತಾತಯ್ಯ ಅವರ ಭಾವಚಿತ್ರಕ್ಕೆ ಪೂಜೆ ನಮನ ಸಲ್ಲಿಸಬೇಕು. ಕೈವಾರ ತಾತಯ್ಯ ಅವರ ರಚಿಸುವ ಕೃತಿಗಳು ಇಂದಿಗೂ ಪ್ರಸ್ತುತವಾಗಿದ್ದವೆ. ಎಲ್ಲ ಧರ್ಮಗಳನ್ನು ಸಮಾನವಾಗಿ ಕಾಣುತ್ತಿದ್ದ ಮಹಾನ್ ವ್ಯಕ್ತಿ ಕೈವಾರ ತಾತಯ್ಯನವರು. ಇಂತಹವರ ಜಯಂತಿಯನ್ನು ಸರ್ಕಾರದ ಆಚರಣೆ ಮಾಡಬೇಕೆಂದು ಒತ್ತಾಯ ಮಾಡಿದರು.
ಇದೇ ವೇಳೆ ತಾಲೂಕು ಬಲಿಜ ಸಂಘದ ನಿರ್ದೇಶಕ ಶ್ರೀಧರ್, ಬೂದಿಗೆರೆ ಬಲಿಜ ಸಂಘದ ಉಪಾಧ್ಯಕ್ಷ ಅಶ್ವಥ್, ಮುನಿರಾಜು, ಶ್ರೀನಿವಾಸ್, ಕಾರ್ಯದರ್ಶಿ ಜನಾರ್ಧನ್, ಸಹ ಕಾರ್ಯದರ್ಶಿ ಹರೀಶ್,ಸಂಚಾಲಕ ಗಿರೀಶ್, ರಾಮಾಂಜಿನಯ್ಯ, ಖಜಾಂಚಿ ಕೇಶವ್, ಸದಸ್ಯರಾದ ಲಕ್ಷ್ಮೀನಾರಾಯಣ್, ಲೋಕೇಶ್ , ನಾಗೇಶ್,ರಾಮಣ್ಣ, ಸುರೇಶ್ ಮತ್ತಿತರರಿದ್ದರು.