ಕೈವಾರ ತಾತಯ್ಯ ಆದರ್ಶ ಪಾಲಿಸಿ

ವಿಜಯಪುರ.ಏ೧೭:ಸದ್ಗುರು ತಾತಯ್ಯನವರು ಗುರುಗಳು ಹೌದು, ಯೋಗಿಗಳು ಹೌದು, ಕವಿಗಳು, ಕಾಲಜ್ಞಾನಿಗಳು ಹೌದು ಪಾಪ ಕರ್ಮಗಳು ನಾಶವಾಗಬೇಕಾದರೆ ಗುರುವಿನ ಸೇವೆ ಮಾಡಬೇಕು, ಬ್ರಹ್ಮನು ಬರೆದ ಹಣೆಬರಹವನ್ನು ಬದಲಿಸುವ ಶಕ್ತಿ ಇರುವುದು ಗುರುಗಳಿಗೆ ಮಾತ್ರ ಇಂತಹ ತಾತಯ್ಯನವರ ಜಯಂತಿಯನ್ನು ಆಚರಣೆ ಮಾಡಿಕೊಂಡು ಬರುತ್ತಿರುವುದು ಶ್ಲಾಘನೀಯವಾದದ್ದು ವಿದ್ವಾನ್ ಜೂನಿಯರ್ ಗಂಟಸಾಲ ಡಿ ಎನ್ ಲಕ್ಷ್ಮಿಪತಿ ತಿಳಿಸಿದರು.
ಅವರು ಸೋಮವಾರದಂದು ಶ್ರೀ ಚೆನ್ನಕೇಶವ ಸ್ವಾಮಿ ದೇವಾಲಯ ಆವರಣದಲ್ಲಿ ಶ್ರೀಕೃಷ್ಣ ಯತೀಂದ್ರ ಸೇವಾ ಟ್ರಸ್ಟ್ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ .ಶ್ರೀಮದ್ ಭಗವದ್ಗೀತಾ ಪಾರಾಯಣ ಶ್ರೀ ಕೈವಾರ ಯೋಗಿ ನಾರೇಯಣ ಯತೀಂದ್ರರ ಹಾಗೂ ಕನಕ ಪುರಂದರ ಗೀತಾ ತತ್ವಾಮೃತ ರಸಧಾರೆಯ ೨೨೬ ನೆಯ ಕಾರ್ಯಕ್ರಮ ಹಾಗೂ ಶ್ರೀ ಕೃಷ್ಣ ಮಾಸಿಕ ದ್ವಾದಶಿ ವಿಚಾರಧಾರೆಯಗೋಷ್ಠಿಯ ೧೭೭ನೇ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಕರ್ನಾಟಕ ಪತಂಜಲಿ ಯೋಗ ಶಿಕ್ಷಣ ಸಮಿತಿಯ ದೀಪ ರಮೇಶ್ ನೆರವೇರಿಸಿ ಮಾತನಾಡುತ್ತಾ ವೀರ ಬ್ರಹ್ಮೇಂದ್ರ ಸ್ವಾಮಿಗಳು ಯೋಗಿ ವೇಮನ, ನಾರೇಯಣ ಯತೀಂದ್ರರು ಧರ್ಮ ಪ್ರಚಾರಕರಾಗಿ ಸಮಾಜದ ಅಂಕು ಡೊಂಕುಗಳನ್ನು ತಿದ್ದಿದ್ದ ಮಹಾನುಭಾವರವರು ಎಂದು ತಿಳಿಸಿದರು.
ಟ್ರಸ್ಟ್ ನ ಅಧ್ಯಕ್ಷರಾದ ಜೆ. ಎಸ್. ರಾಮಚೆoದ್ರಪ್ಪನವರು ಮಾತನಾಡುತ್ತಾ ಅವನಿಲ್ಲದೆ ನಾನಿಲ್ಲ ಎಂಬಂತೆ ಮಾನವನು ಜೀವಿಸಬೇಕಾದರೆ ಜೀವಾತ್ಮ ಮತ್ತು ಪರಮಾತ್ಮನ ಅವಶ್ಯಕತೆ ಇದೆ ಎಂದರು.
ಸದ್ಗುರು ಶ್ರೀ ಯೋಗಿ ನಾರೇಯಣ ಯತೀಂದ್ರ ಜಯಂತಿಯ ಬಗ್ಗೆ ಉಪನ್ಯಾಸ ನೀಡಿದ ಜೂನಿಯರ್ ಗಂಟಸಾಲ ಡಿಎನ್ ಲಕ್ಷ್ಮಿಪತಿ ರವರನ್ನು ಸನ್ಮಾನಿಸಿ ಗೌರವಿಸಿದರು
ಈ ಕಾರ್ಯಕ್ರಮದಲ್ಲಿ ಹತ್ತು ಜನ ಭಕ್ತರಿಗೆ ಕಂಬಳಿ ಮತ್ತು ಸುಮಂಗಲಿಯರಿಗೆ ಕುಪ್ಪಸ ಹರಿಶಿನ ಕುಂಕುಮ ಬಳೆ ಸೇವೆ ನಡೆಸಲಾಸಯಿತು.
ಭಕ್ತಿ ಸೇವೆಯನ್ನು ದಿ. ವೆಂಕಟಮ್ಮ ಮತ್ತು ದಿ. ಫ್ಲೋರ್ ಮಿಲ್ ಸಿ. ಎನ್. ರಾಮಯ್ಯನವರ ಸ್ಮರಣಾರ್ಥವಾಗಿ ಮೀನಾಕ್ಷಿ ಬಿ. ಕೆ. ಮತ್ತು ಆರ್. ಮುನಿರಾಜು ನೆರವೇರಿಸಿದರು.
ಮುಖ್ಯ ಅತಿಥಿಗಳಾಗಿ ಬಲಿಜ ಸಂಘದ ಮಾಜಿ ಅಧ್ಯಕ್ಷರಾದ ಎನ್ ಮನಿಕೃಷ್ಣಪ್ಪ. ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರಾದ
ಆರ್ ನಾಗರಾಜು, ರಮೇಶ್,ಚಂದ್ರಕಲಾ ವುಡ್ ವರ್ಕ್ಸ್ ಕೃಷ್ಣಪ್ಪ, ಎಸ್. ಆರ್. ಲಕ್ಷ್ಮೀನಾರಾಯಣಪ್ಪ, ಬ್ಯಾಂಕ್ ರಾಜಶೇಖರ್ ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಕೀರ್ತನೆಗಳನ್ನು ಟಿ. ಮಹಾತ್ಮಾoಜನೇಯ. ನರಸಿಂಹಪ್ಪ, ಶ್ರೀಮತಿ ಸೀತಾಲಕ್ಷ್ಮಿ ಸುಶ್ರಾವ್ಯವಾಗಿ ಹಾಡಿದರು ಕೀ ಬೋರ್ಡ್ ಎಂ.ವಿ.ನಾಯ್ದು ತಬಲ ವಾದಕರಾಗಿ ಎಂ. ಅನಿಲ್ ಕುಮಾರ್ ನುಡಿಸಿದರು.
ಟ್ರಸ್ಟ್ ಸಂಚಾಲಕರಾದ ವಿ. ಎನ್. ವೆಂಕಟೇಶ್ ಮತ್ತು ವಿನಾಗಯ್ಯ ಮತ್ತು ಪದಾಧಿಕಾರಿಗಳು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟರು..