ಕೈಲಾಸಂ ಪ್ರಶಸ್ತಿಗೆ ರವಿ ಕುಲಕರ್ಣಿ ಭಾಜನ

ಧಾರವಾಡ,ಜು29: ವಿಜಯನಗರ ಜಿಲ್ಲೆ ಹೊಸಪೇಟೆ ಟಿ.ಬಿ.ಡ್ಯಾಂನ ಕನ್ನಡ ಕಲಾ ಸಂಘ ನಾಟಕಕಾರ ಟಿ.ಪಿ ಕೈಲಾಸಂ ದಿನಾಚರಣೆ ಅಂಗವಾಗಿ ಕೊಡಮಾಡುವ ಪ್ರಸಕ್ತ ಸಾಲಿನ ಕೈಲಾಸಂ ಪ್ರಶಸ್ತಿಗೆ ಧಾರವಾಡದ ಹವ್ಯಾಸಿ ರಂಗಭೂಮಿ ಕಲಾವಿದ, ಪತ್ರಕರ್ತ, ನಟ, ನಿರ್ದೇಶಕ, ಬೆಳಕು ವಿನ್ಯಾಸಕಾರ ರವಿ ಕುಲಕರ್ಣಿ ಭಾಜನರಾಗಿದ್ದಾರೆ.
ಕಳೆದ ಮೂರು ದಶಕಗಳಿಂದ ರಂಗಭೂಮಿಯಲ್ಲಿ ಕ್ರಿಯಾಶೀಲರಾಗಿರುವ ರವಿ ಕುಲಕರ್ಣಿ ವೃತ್ತಿಯಿಂದ ವಕೀಲರು, ಹಲವು ವರ್ಷಗಳ ಕಾಲ ಕಾನೂನು ವರದಿಗಾರರಾಗಿ ವಿವಿಧ ಪತ್ರಿಕೆಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಸುಮಾರು 25 ನಾಟಕಗಳ ನಿರ್ದೇಶನ, ಸಾವಿರಕ್ಕೂ ಹೆಚ್ಚು ಪ್ರದರ್ಶನಗಳಲ್ಲಿ ಭಾಗಿ, ಅಭಿನಯ ಭಾರತಿ, ಸಮುದಾಯ, ಜೀವಿ ಕಲಾಬಳಗ, ನಾಟಕ ಅಕಾಡೆಮಿ ಜಿಲ್ಲಾ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಜತೆಗೆ ಹಲವಾರು ಟಿವಿ ಧಾರಾವಾಹಿಗಳು ಮತ್ತು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಜು. 30 ರಂದು ತುಂಗಭದ್ರಾ ಡ್ಯಾಮ್‍ನ ಪಂಪ ಕಲಾಮಂದಿರದಲ್ಲಿ ನಡೆಯಲಿರುವ ಟಿ.ಪಿ.ಕೈಲಾಸಂ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಘದ ಕಾರ್ಯದರ್ಶಿ ಎಸ್.ಎಸ್.ಚಂದ್ರಶೇಖರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.