ಕೈಲಾಗದ ಗಂಡ ಕೈಲಾಸ ಕಂಡ ನಾಟಕ ಪ್ರದರ್ಶನ

ಬೀದರ:ಮಾ.30: ತಾಲೂಕಿನ ಚಿಟ್ಟಾ ಗ್ರಾಮದಲ್ಲಿ ಕರ್ನಾಟಕ ನಾಟಕ ಅಕಾಡೆಮಿ, ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಜೈ ಭವನಿ ರಂಗಭೂಮಿ ಕಲಾವಿದರ ಸಂಘ (ರಿ) ಚಿಟ್ಟಾ ವತಿಯಿಂದ ಸಾಮಾಜಿಕ ನಾಟಕ “ಕೈಲಾಗದ ಗಂಡ ಕೈಲಾಸ ಕಂಡ” ಎಂಬ ನಾಟಕವನ್ನು ಏರ್ಪಡಿಸಲಾಯಿತು.
ಈ ಕಾರ್ಯಕ್ರಮದ ಉದ್ಘಾಟಕರಾಗಿ ಶ್ರೀ ಶುಭಮ್ ಮಾಲಿಪಾಟೀಲ ಚಿಟ್ಟಾ, ಮುಖ್ಯ ಅತಿಥಿಗಳಾಗಿ ಶ್ರೀ ಅಣ್ಣೆಪ್ಪಾ ಪೋಲಿಸ್ ಪಾಟೀಲ ಚಿಟ್ಟಾ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ರಮೇಶ ಬಿರಾದಾರ ಅಧ್ಯಕ್ಷರು ಗ್ರಾಮ ಪಂಚಾಯತ ಚಿಟ್ಟಾ ಇವರು ಮಾತನಾಡುತ್ತಾ, ಇಂತಹ ನಾಟಕಗಳಲ್ಲಿ ಭಾಗವಹಿಸುವುದರ ಜೊತೆಗೆ ಶಾಲಾ ಮಕ್ಕಳು ಓದುವುದಲ್ಲದೇ ನಾಟಕಗಳಲ್ಲಿ ಭಾಗವಹಿಸುವುದಲ್ಲದೇ ಇನ್ನೀತರ ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ತೊಡಸಿಕೊಳ್ಳಬೇಕೆಂದರು. ಅತಿಥಿಗಳಾಗಿ ಶ್ರೀ ದಶರಥ ಮೋರ್ಗಿ ತಾ.ಪಂ. ಸದಸ್ಯರು ಚಿಟ್ಟಾವಾಡಿ ಬೀದರ ಇವರು ಮಾತನಾಡುತ್ತಾ ನಾಟಕಗಳಲ್ಲದೇ ಹಲವು ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನಡೆಸಿ ಉಳಿಸುವುದು ಅತೀ ಮುಖ್ಯವಾಗಿದೆ ಎಂದು ಹೇಳಿದರು. ಶ್ರೀಮತಿ ಚಿನ್ನಮ್ಮ ಸ್ವಾಮಿ ಅಧ್ಯಕ್ಷರು ಅಕ್ಕಮಹಾದೇವಿ ದೇವಸ್ಥಾನ ಚಿಟ್ಟಾ, ಶ್ರೀ ಗಫೂರ ಖಾನ್ ಪಠಾನ್ ಹಿರಿಯ ಮುಖಂಡರು ಚಿಟ್ಟಾ, ಶ್ರೀ ಪಾಂಡಪ್ಪ ಚೌದ್ರಿ ಯುವ ಮುಖಂಡರು ಚಿಟ್ಟಾ, ಶ್ರೀ ಘಾಳೆಪ್ಪಾ ಮಾಸುಲ್ದಾರ್, ಹಣಮಂತರಾವ ಜೈನಾಪೂರೆ, ಹಣಮಂತ ನಿರ್ಣಾ, ಶ್ರೀಮತಿ ಕಸ್ತೂರಬಾಯಿ ಚಿಟ್ಟಾ, ಶ್ರೀಮತಿ ಸತ್ಯಮ್ಮಾ ಚಿಟ್ಟಾ ಇನ್ನೀತರರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಶ್ರೀ ಶೇಷಪ್ಪಾ ಹಿರಿಯ ರಂಗಭೂಮಿ ಕಲಾವಿದರು ಚಿಟ್ಟಾ ಹಾಗೂ ತಂಡದವರೊಂದಿಗೆ ನಾಟಕವನ್ನು ಪ್ರದರ್ಶಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಗ್ರಾಮಸ್ಥರಿಗೆ ಮನರಂಜಿಸಿದರು.