ಕೈಮಾ ಸಾರು

ಬೇಕಾಗುವ ಸಾಮಗ್ರಿಗಳು

*ಮಟನ್ ಕೈಮಾ – ೧/೪ ಕೆ.ಜಿ
*ಮೊಟ್ಟೆ – ೧
*ಅಕ್ಕಿ ಹಿಟ್ಟು – ೨ ಚಮಚ
*ಹುರಿಗಡಲೆ ಹಿಟ್ಟು – ೧/೨ ಕಪ್
*ಕಾಳು ಮೆಣಸು – ೧ ಚಮಚ
*ಒಣ ಕೊಬ್ಬರಿ ತುರಿ – ೩ ಚಮಚ
*ತೆಂಗಿನಕಾಯಿ ತುರಿ – ೩ ಚಮಚ
*ಶುಂಠಿ, ಬೆಳ್ಳುಳ್ಳಿ ಪೇಸ್ಟ್ – ೧ ಚಮಚ
*ಚಕ್ಕೆ – ೫-೬ ಪೀ
*ಲವಂಗ – ೩
*ಹಸಿರು ಮೆಣಸಿನಕಾಯಿ – ೩
*ಪುದೀನ – ೨ ಚಮಚ
*ಕೊತ್ತಂಬರಿ ಸೊಪ್ಪು – ೨ ಚಮಚ
*ಮೆಂತ್ಯೆ ಸೊಪ್ಪು –
*ಧನಿಯಾ ಪುಡಿ – ೧ ಚಮಚ
*ಅಚ್ಚ ಖಾರದ ಪುಡಿ – ೧ ಚಮಚ
*ಅರಿಶಿಣ – ೧ ಚಮಚ
*ಈರುಳ್ಳಿ – ೧
*ಉಪ್ಪು – ರುಚಿಗೆ ತಕ್ಕಷ್ಟು
*ಎಣ್ಣೆ – ೫೦ ಮಿ.ಲೀ
*ನೀರು- ೨೦೦ ಮಿ,ಲೀ

ಮಾಡುವ ವಿಧಾನ :

ಬಾಣಲಿಗೆ ಎಣ್ಣೆ ಹಾಕಿ. ಕಾದ ಮೇಲೆ ಕಾಳು ಮೆನಸು, ಒಣಕೊಬ್ಬರಿ ತುರಿ, ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಚಕ್ಕೆ, ಲವಂಗ, ಏಲಕ್ಕಿ ಈರುಳ್ಳಿ, ಚಿಕ್ಕದಾಗಿ ಕತ್ತರಿಸಿದ ಹಸಿರು ಮೆಣಸಿನಕಾಯಿ, ಪುದೀನಾ, ಕೊತ್ತಂಬರಿ ಸೊಪ್ಪು, ಅರಿಶಿಣ ಪುಡಿ, ಧನಿಯಾ ಪುಡಿಯನ್ನು ಒಂದೊಂದಾಗಿ ಹಾಕಿ, ಹುರಿದು ಕೊಳ್ಳಿ, ತಣ್ಣಗಾದ ಮೇಲೆ ನುಣ್ಣಗೆ ರುಬ್ಬಿಕೊಳ್ಳಿ. ನಂತರ ಕೈಮಾ, ಮೊದಲೇ ರುಬ್ಬಿಕೊಂಡು ಮಸಾಲ ಸ್ವಲ್ಪ, ಉಪ್ಪು ಹಾಕಿ ಮತ್ತೆ ರುಬ್ಬಿಕೊಳ್ಳಿ. ರುಬ್ಬಿದ ಮಿಶ್ರಣವನ್ನು ಬೌಲ್‌ಗೆ ಹಾಕಿಡಿ. ಅಕ್ಕಿ ಹಿಟ್ಟು, ಹುರಿದಗಡಲೆ ಹಿಟ್ಟು, ಮೊಟ್ಟೆ ಹಾಕಿ ಗಂಟಾಗದಂತೆ ಚೆನ್ನಾಗಿ ಕಲಸಿಕೊಳ್ಳಿ. ಕೈಮಾ ಉಂಡೆಯನ್ನು ರೆಡಿ ಮಾಡಿಕೊಳ್ಳಿ. ಬಾಣಲಿಗೆ ಎಣ್ಣೆ ಹಾಕಿ, ಬಿಸಿಯಾದ ಮೇಲೆ ಚಿಕ್ಕದಾಗಿ ಕಟ್ ಮಾಡಿದ ಈರುಳ್ಳಿ, ಕೊತ್ತಂಬರಿ ಸೊಪ್ಪು, ಅರಿಶಿಣ, ರುಬ್ಬಿಕೊಂಡ ಉಳಿದ ಮಿಶ್ರಣ, ನೀರು, ಉಪ್ಪು ಹಾಕಿ ಚೆನ್ನಾಗಿ ಕುದಿಸಿ. ಇದಕ್ಕರ ಕೈಮಾ ಉಂಡೆಗಳನ್ನು ಹಾಕಿ ಮುಚ್ಚಳ ಮುಚ್ಚಿ, ಹದವಾಗಿ ಬೇಯಿಸಿ ತೆಗೆದರೆ ರುಚಿ ರುಚಿಯಾದ ಕೈಮಾ ಸಾರು ಸವಿಯಲು ಸಿದ್ಧ.