ಕೈಮಾ ವಡೆ

ಬೇಕಾಗುವ ಸಾಮಗ್ರಿಗಳು:

  • ಮಟನ್ ಕೈಮಾ -ಕಾಲು ಕೆಜಿ
  • ಮೊಟ್ಟೆ – ೨
  • ಈರುಳ್ಳಿ – ೨
  • ತೆಂಗಿನಕಾಯಿತುರಿ – ೫೦ ಗ್ರಾಂ
  • ಹಸಿರು ಮೆಣಸಿನಕಾಯಿ – ೫೦ ಗ್ರಾಂ
  • ಕೊತ್ತಂಬರಿ ಸೊಪ್ಪು – ೫೦ ಗ್ರಾಂ
  • ಸಬ್ಬಸ್ಸಿಗೆ ಸೊಪ್ಪು – ೫೦ ಗ್ರಾಂ
  • ಶುಂಠಿ – ಬೆಳ್ಳುಳ್ಳಿ ಪೇಸ್ಟ್ – ೧ ಚಮಚ
  • ಗರಂ ಮಸಾಲ – ೧ ಚಮಚ
  • ಧನಿಯಾ ಪುಡಿ – ೧ ಚಮಚ
  • ಕಸೂರಿ ಮೇಥಿ – ೧ ಚಮಚ
  • ಹುರಿಗಡಲೆ – ೧ ಚಮಚ
  • ಉಪ್ಪು – ರುಚಿಗೆ ತಕ್ಕಷ್ಟು
  • ಎಣ್ಣೆ – ೨೦೦ ಮಿ. ಲೀ.

ಮಾಡುವ ವಿಧಾನ:
ಸಣ್ಣಗೆ ಹೆಚ್ಚಿದ ಹಸಿರು ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಶುಂಠಿ – ಬೆಳ್ಳುಳ್ಳಿ ಪೇಸ್ಟ್, ಗರಂ ಮಸಾಲ, ಉಪ್ಪು, ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿ. ಈ ಮಿಶ್ರಣಕ್ಕೆ ಕೈಮಾ, ತೆಂಗಿನಕಾಯಿತುರಿ, ಧನಿಯಾ ಪುಡಿ, ಕಸೂರಿ ಮೇಥಿ, ನೀರು ಹಾಕಿ ಮತ್ತೊಂದು ಬಾರಿ ರುಬ್ಬಿಕೊಳ್ಳಿ. ರುಬ್ಬಿಕೊಂಡಿರುವುದನ್ನು ಬೌಲ್‌ಗೆ ಹಾಕಿ. ಹುರಿಗಡಲೆ, ಸಬ್ಬಸ್ಸಿಗೆ ಸೊಪ್ಪು, ಈರುಳ್ಳಿ, ಮೊಟ್ಟೆ ಹಾಕಿ ಚೆನ್ನಾಗಿ ಕಲೆಸಿ. ಈ ಮಿಶ್ರಣವನ್ನು ವಡೆಯಂತೆ ಮಾಡಿ, ಬಾಣಲಿಗೆ ಎಣ್ಣೆ ಹಾಕಿ ಕಾದ ನಂತರ ಮಾಡಿಟ್ಟುಕೊಂಡಿರುವ ವಡೆಗಳನ್ನು ಕೆಂಪಾಗುವವರೆಗೆ ಕರಿಯಿರಿ, ಈಗ ನಿಮ್ಮ ನೆಚ್ಚಿನ ಕೈಮಾ ವಡೆ ರೆಡಿ.