ಕೈಮಾ ಪೋಟ್ಲೆ ಸಮೋಸಾ

ಬೇಕಾಗುವ ಸಾಮಗ್ರಿಗಳು :

  • ಮಟನ್ ಕೈಮಾ – ೨೫೦ ಗ್ರಾಂ
  • ಮೈದಾಹಿಟ್ಟು – ೨೦೦ ಗ್ರಾಂ
  • ವನಸ್ಪತಿ – ೧೫೦ ಗ್ರಾಂ
  • ಎಣ್ಣೆ – ಅರ್ಧ ಲೀಟರ್
  • ಉಪ್ಪು – ರುಚಿಗೆ ತಕ್ಕಷ್ಟು
  • ಶುಂಠಿ – ಬೆಳ್ಳುಳ್ಳಿ ಪೇಸ್ಟ್ – ೧ ಚಮಚ
  • ಅರಿಶಿನಪುಡಿ – ೧ ಚಮಚ
  • ಗರಂ ಮಸಾಲ – ಅರ್ಧ ಚಮಚ
  • ಜೀರಿಗೆ ಪುಡಿ – ೧ ಚಮಚ
  • ಧನಿಯಾ ಪುಡಿ – ಅರ್ಧ ಚಮಚ
  • ಅಚ್ಚಖಾರದಪುಡಿ – ೧ ಚಮಚ
  • ಕೊತ್ತಂಬರಿ ಸೊಪ್ಪು – ೧ ಚಮಚ

ಮಾಡುವ ವಿಧಾನ:
ಬೌಲಿಗೆ ಮೈದಾಹಿಟ್ಟು ಬಿಸಿಮಾಡಿ ಕರಗಿಸಿಕೊಂಡ ವನಸ್ಪತಿ, ಉಪ್ಪು, ಅಗತ್ಯಕ್ಕೆ ತಕ್ಕಷ್ಟು ನೀರು ಹಾಕಿ, ಚಪಾತಿ ಹಿಟ್ಟಿನ ಹದಕ್ಕೆ ಕಲಸಿಡಿ. ಕಡಾಯಿಗೆ ೩ ಚಮಚ ಎಣ್ಣೆಹಾಕಿ, ಕಾದ ನಂತರ ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಕೈಮಾ ಹಾಕಿ ಚೆನ್ನಾಗಿ ಹುರಿಯಿರಿ. ಇದಕ್ಕೆ ಅಚ್ಚಖಾರದಪುಡಿ, ಜೀರಿಗೆ ಪುಡಿ, ಗರಂ ಮಸಾಲ, ಧನಿಯಾ ಪುಡಿ ಹಾಕಿ ಹುರಿದು ಸ್ವಲ್ಪ ನೀರು ಹಾಕಿ ಬೇಯಿಸಿ. ಇದಕ್ಕೆ ಅರಿಶಿನ, ಉಪ್ಪು, ಕೊತ್ತಂಬರಿ ಸೊಪ್ಪು ಹಾಕಿ ಹಸಿವಾಸನೆ ಹೋಗುವವರೆಗೆ ಹುರಿದುಕೊಳ್ಳಿ. ಕಲೆಸಿಟ್ಟುಕೊಂಡ ಹಿಟ್ಟನ್ನು ಪೂರಿಯಂತೆ ಲಟ್ಟಿಸಿ, ಮಧ್ಯಭಾಗಕ್ಕೆ ಹುರಿದುಕೊಂಡ ಕೈಮಾ ಮಸಾಲಾವನ್ನು ಇಟ್ಟು, ಸಮೋಸಾ ರೀತಿಯಲ್ಲಿ ನೀಟಾಗಿ ಮಡಚಿ, ಎಣ್ಣೆಯಲ್ಲಿ ಕರಿದರೆ, ರುಚಿಕರವಾದ ಕೈಮಾ ಪೋಟ್ಲೆ ಸಮೋಸಾ ಸವಿಯಲು ರೆಡಿ.