ಕೈಬಿಟ್ಟ ಚಿಮ್ಮಾಇದ್ಲಾಯಿ ತಾಪಂ ಕ್ಷೇತ್ರ: ಗ್ರಾಮಸ್ಥರ ಪ್ರತಿಭಟನೆ

ಚಿಂಚೋಳಿ,ಏ.6- ತಾಲೂಕಿನ ಚಿಮ್ಮಾಇದ್ಲಾಯಿ ಗ್ರಾಮವು ಕಳೆದ 30 ವರ್ಷಗಳ ಹಿಂದೆ ಮಂಡಲ ವರದಿಯ ಪ್ರಕಾರ ಚಿಮ್ಮಾಇದ್ಲಾಯಿ ಗ್ರಾಮ ಮಂಡಲ ಹಾಗೂ ತಾಲೂಕ ಪಂಚಾಯತ ಕ್ಷೇತ್ರವನ್ನಾಗಿ ಮಾಡುವ ಮೂಲಲಕ ಇದಕ್ಕೆ 8 ಗ್ರಾಮಗಳನ್ನು ಕೂಡಿಸಲಾಗಿತ್ತು.
ಈ ನೂತನ ತಾಪಂ ಕ್ಷೇತ್ರವೆಂದು ಘೋಷಿಸಲಾಗಿತ್ತು ಆದರೇ ಕ್ಷೇತ್ರ ಪುನರವಿಂಗಡಣೆಯಲ್ಲಿ ಮತ್ತು ತಾಲೂಕ ಪಂಚಾಯತ ಚುನಾವಣೆಯಲ್ಲಿ ಚಿಮ್ಮಾಇದ್ಲಾಯಿ ತಾಲೂಕ ಪಂಚಾಯತ ಕ್ಷೇತ್ರದ ಹೆಸರನ್ನು ಕೈಬಿಟ್ಟಿರುವುದನ್ನು ಖಂಡಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ತಾಪಂ ಪುನರ ವಿಂಗಡಣೆಯಲ್ಲಿ ಕೈಬಿಟ್ಟಿರುವ ಚಿಮ್ಮಾಇದ್ಲಾಯಿ ಗ್ರಾಮವನ್ನು ತಾಪಂ ಕ್ಷೇತ್ರವೆಂದು ಪರಿಗಣಿಸುವಂತೆ ಆಗ್ರಹಿಸಿ ಗ್ರಾಮಸ್ಥರು ತಹಸಿಲ್ದಾರ್ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.
ಚಿಮ್ಮಾಇದ್ಲಾಯಿ ಗ್ರಾಮ ಪಂಚಾಯತ ಅಧ್ಯಕ್ಷರಾದ ರೇಣುಕಾ ಗುಂಡಪ್ಪ ಅವರದಿ ಚಿಮ್ಮಾಇದ್ಲಾಯಿ ಗ್ರಾಮ ಪಂಚಾಯತ ಮಾಜಿ ಅಧ್ಯಕ್ಷರಾದ ಶಿವಶರಣಪ್ಪ ಪೆÇಲೀಸ್ ಪಾಟೀಲ್. ರೇವಣಸಿದ್ದಪ್ಪ ಇಂಗನಕಲ. ಮಲ್ಲಿಕಾರ್ಜುನ ದಳಪತಿ. ಉಮೇಶ. ಲಕ್ಷ್ಮಿ. ಜಗದೇವಿ. ಮುಕ್ತಾರ್ ಅಲಿ. ದಸರತ. ಶಿವರಾಜ ದೇಸಾಯಿ. ಭದ್ರಪ್ಪ ಹೊಳ್ಕರ್. ಸತೀಶ್ ದೇಸಾಯಿ. ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀನಿವಾಸ್ ಚಿಂಚೋಳಿಕರ್. ಮಲ್ಲಪ್ಪ ಕೋಟಪಳ್ಳಿ. ಮೊಗಲಪ್ಪ ದಾಸ್. ಅಮೃತ. ಗುಂಡಪ್ಪ ಅವರದಿ. ಚನಬಸಪ್ಪ. ಶಾಮರಾವ್. ಸುನಿಲ್. ಯಲ್ಲಲಿಂಗ್ ದಂಡಿನ್. ಚಂದ್ರಕಾಂತ ಹೊಳ್ಕರ್. ಈರಪ್ಪ ಸುಣಗಾರ್. ಲಕ್ಷ್ಮಣ್ ಸುಣಗಾರ್. ವಿನೋದ. ವೀರೇಶ್ ದೇಸಾಯಿ. ಮತ್ತು ಅನೇಕ ಚಿಮ್ಮಾಇದ್ಲಾಯಿ ಗ್ರಾಮದ ಮುಖಂಡರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.