ಕೈನಿಂದ ಆದಿವಾಸಿಗಳ ನಿರ್ಲಕ್ಷ್ಯ: ಮೋದಿ ವಾಗ್ದಾಳಿ

ನಂದೂರ್ ಬಾರ್ (ಮಹಾರಾಷ್ಟ್ರ), ಮೇ ೧೦- ಕಾಂಗ್ರೆಸ್ ಪಕ್ಷ ಎಂದಿಗೂ ಆದಿವಾಸಿಗಳ ಕಲ್ಯಾಣ ಕುರಿತಂತೆ ತಲೆಕೆಡಿಸಿಕೊಂಡಿಲ್ಲ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.ಅವರು ಮಹಾರಾಷ್ಟ್ರದ ನಂದೂರ್ ಬಾರ್ ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿ ಹಾಗೂ ಸಂಸದೆ ಡಾ. ಹೀನಾ ಗವಿತ್ ಪರ ಚುನಾವಣಾ ಪ್ರಚಾರದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.ದೇಶದ ಅಭಿವೃದ್ಧಿಯಲ್ಲಿ ಮೋದಿಯೊಂದಿಗೆ ಸ್ಪರ್ಧಿಸಲು ಕಾಂಗ್ರೆಸ್‌ಗೆ ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸುಳ್ಳಿನ ಕಾರ್ಖಾನೆ ತೆರೆದಿದ್ದಾರೆ.
ಕಾಂಗ್ರೆಸ್‌ನ ಸ್ಥಿತಿ ಚೋರ್ ಮಚ್ಚೇ ಎನ್ನುವಂತಿದೆ. ಧರ್ಮಾಧಾರಿತ ಮೀಸಲಾತಿಯೂ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ತತ್ವಕ್ಕೆ ವಿರುದ್ಧವಾಗಿದೆ. ಇದು ಸಂವಿಧಾನವನ್ನು ರೂಪಿಸಿದವರಿಗೆ ಬೆನ್ನಿಗೆ ಚೂರಿ ಹಾಕಿದಂತಿದೆ ಎಂದು ಆರೋಪಿಸಿದರು.ನನಗೆ ಆದಿವಾಸಿಗಳ ಸೇವೆ ಮಾಡುವುದೆಂದರೆ ಕುಟುಂಬ ಸೇವೆ ಮಾಡಿದಂತೆ ಆದಿವಾಸಿಗಳ ಕಲ್ಯಾಣದ ಬಗ್ಗೆ ಕಾಂಗ್ರೆಸ್ ತಲೆ ಕೆಡಿಸಿಕೊಳ್ಳಲಿಲ್ಲ. ಮೀಸಲಾತಿ ಹಾಗೂ ಸಂವಿಧಾನ ಕುರಿತಂತೆ ಕಾಂಗ್ರೆಸ್ ಸುಳ್ಳುಗಳನ್ನು ಹರಡುತ್ತಿದೆ. ಕಾಂಗ್ರೆಸ್ ಸರ್ಕಾರ ರಾತ್ರೋರಾತ್ರಿ ಎಲ್ಲ ಮುಸ್ಲಿಮರನ್ನು ಒಬಿಸಿ ವರ್ಗಕ್ಕೆ ಸೇರಿಸಿ ಮೀಸಲಾತಿ ನೀಡಿದೆ ಎಂದು ಕಾಂಗ್ರೆಸ್‌ಗೆ ಟಾಂಗ್ ನೀಡಿದರು.ಹಿಂದೂ ಧರ್ಮವನ್ನು ತೊಲಗಿಸುವ ಷಡ್ಯಂತರದಲ್ಲಿ ಕಾಂಗ್ರೆಸ್ ತೊಡಗಿದೆ. ನಾನು ಬದುಕುವವರೆಗೂ ದಲಿತರು, ಆದಿವಾಸಿಗಳು, ಒಬಿಸಿಗಳ ಮೀಸಲಾತಿಯನ್ನು ಮುಸ್ಲೀಮರಿಗೆ ಧರ್ಮದ ಆಧಾರದ ಮೇಲೆ ನೀಡಲು ಬಿಡುವುದಿಲ್ಲ ಎಂದು ಧರ್ಮದ ಆಧಾರದ ಮೇಲೆ ಕೋಟಾ ಪ್ರಯೋಜನಗಳನ್ನು ಒದಗಿಸುವುದು ನಮ್ಮ ಸಂವಿಧಾನದಲ್ಲಿ ಪ್ರತಿಪಾದಿಸಲಾದ ಮತ್ತು ಮೀಸಲಾತಿ ತತ್ವಕ್ಕೆ ವಿರುದ್ಧವಾಗಿದೆ ಎಂದರು.
ಬುಡಕಟ್ಟು ಪ್ರದೇಶಗಳಲ್ಲಿ ರಕ್ತಹೀನತೆ ಬಹಳ ಅಪಾಯಕಾರವಾಗಿದೆ. ಆದರೆ ಕಾಂಗ್ರೆಸ್ ಆಡಳಿತದಲ್ಲಿ ಈ ರೋಗಕ್ಕೆ ಪರಿಹಾರವನ್ನು ಸೂಚಿಸಲಿಲ್ಲ. ಈ ಸಮಸ್ಯೆ ನಿವಾರಣೆಗೆ ಬಿಜೆಪಿ ಅನೇಕ ಪ್ರಯತ್ನಗಳನ್ನು ಆರಂಭಿಸಿತು. ಮುಂದಿನ ಪೀಳಿಗೆಯನ್ನು ಈ ಸಮಸ್ಯೆಯಿಂದ ಹೊರ ತರುವುದೇ ನನ್ನ ಉದ್ದೇಶ ಎಂದರು.
ಶ್ರೀಮಂತ ಕುಟುಂಬಕ್ಕೆ ನಾನು ಸೇರಿದವನಲ್ಲ. ಕಾಂಗ್ರೆಸ್‌ನ ಶಶಿಯಂತಹ ಶ್ರೀಮಂತ ಪರಿವಾರದೊಂದಿಗೆ ನಾನು ಬೆಳೆದಿಲ್ಲ. ಬಡತನದಲ್ಲಿ ಹುಟ್ಟಿ ಬೆಳೆದಿದ್ದೇನೆ ಎಂದನು.
ನಂದೂರ್ ಬಾರ್ ಮಹಾರಾಷ್ಟ್ರ ಲೋಕಸಭಾ ಕ್ಷೇತ್ರಗಳಲ್ಲಿ ಒಂದಾಗಿದೆ. ಒಟ್ಟು ರಾಜ್ಯದಲ್ಲಿ ೪೮ ಲೋಕಸಭಾ ಸ್ಥಾನಗಳಿದ್ದು, ನಂದೂರ್ ಬಾರ್ ೬ ವಿಧಾನಸಬಾ ಕ್ಷೇತ್ರಗಳನ್ನು ಒಳಗೊಂಡಿದೆ. ಈ ಕ್ಷೇತ್ರದಲ್ಲಿ ಬಿಜೆಪಿ ಕಾಂಗ್ರೇಸ್ ಪ್ರಮುಖ ಪಕ್ಷಗಳಾಗಿವೆ.