
ಬೀದರ:ಮಾ.31:ಸರಕಾರವು ಜೈಲನ್ನು ಕಾರಾಗೃಹ -ಸುಧಾರಣಾ ಕೇಂದ್ರ ವನ್ನಾಗಿ ಪರಿ ವರ್ತಿಸಿ, ಕೈದಿಗಳಿಗೆ ಸುಧಾರಣಾ ಕೇಂದ್ರದ ನಿವಾಸಿಗಳೆಂದು ಪರಿಗಣಿಸಿದೆ. ಅವರಿಗೆ ಸಕಲ ಸೌಲಭ್ಯಗಳನ್ನು ಒದಗಿಸಿ, ಅವರು ಕೂಡ ಸಮಾಜದಲ್ಲಿ ಒಳ್ಳೆಯ ನಾಗರಿಕರಾಗಿ ಬಾಳುವಂತೆ ನೋಡಿಕೊಳ್ಳುತ್ತಿದೆ. ಸೌಲಭ್ಯಗಳ ಸದುಪ ಯೋಗ ಪಡೆದು (ಶಿಕ್ಷೆ ಮುಗಿದ ನಂತರ) ಉತ್ತಮ ನಾಗರಿಕರಾಗಿ ಬಾಳ ಬೇಕೆಂದು ಕರೆ ನೀಡಿದರು.
ಜೈ ಹಿಂದ್ ಹಿರಿಯ ನಾಗರಿಕರ ಸಂಘದ ನಿಯೋಗವು ಜೈಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. 1920 ರಲ್ಲಿ ಅಂದಿನ ನಿಜಾಮ್ ಸರಕಾರವು ಕಟ್ಟಿಸಿದ್ದ ಗಟ್ಟಿಮುಟ್ಟಾದ ಕಟ್ಟಡದಲ್ಲಿ ಒಟ್ಟು ಏಳು ಬ್ಯಾರಕ್ ಗಳಿವೆ. ಮಹಿಳೆಯರು ಸೇರಿದಂತೆ ಒಟ್ಟು ಸುಮಾರು 167 ಜನ ಸುಧಾರಣಾ ಕೇಂದ್ರದ ನಿವಾಸಿಗ (ಕೈದಿ) ಳಿದ್ದಾರೆ. ಅವರನ್ನು ಬಂದಿಗಳು ಎಂದೂ ಕರೆಯಲಾಗುತ್ತದೆ ಎಂದರು. ಸಂಘದ ಕಾರ್ಯ ದರ್ಶಿ ವೀರಭದ್ರಪ್ಪ ಉಪ್ಪಿನ ರವರು ಪ್ರಾಸ್ತಾವಿಕವಾಗಿ ಮಾತನಾಡಿ, ದೇಶದಲ್ಲಿ ಹಾಗೂ ವಿಶ್ವದಲ್ಲಿ ಪ್ರಸಿದ್ಧ ರಾದ ಜನರು ಕೂಡ ವಿವಿಧ ಕಾರಣಗಳಿಂದ ಜೈಲುವಾಸ ಅನುಭವಿಸಿದ್ದಾರೆ. ವಿಚಾರ ಣಾಧೀನ ಕೈದಿ(ನಿವಾಸಿ) ಗಳಿಗೆ ಮುಂದೆ ಉಜ್ವಲ ಭವಿಷ್ಯವಿದೆ. ಅವರು ಹಿಂದಿನ ಕಹಿ ಘಟನೆಗಳನ್ನು ಮರೆತು, ಸಕಾರಾತ್ಮಕವಾದ ಯೋಚನೆಗಳನ್ನು ಮಾಡುತ್ತ ಕಾನೂನನ್ನು ಚಾಚೂ ತಪ್ಪದೆ ಗೌರವಿಸಿ, ಕಾಲ ಕಾಲಕ್ಕೆ ನೀಡಲಾಗುವ ನಿರ್ದೇಶನಗಳನ್ನು ಪಾಲಿಸಿ, ಜೈಲಿನಿಂದ ಬಿಡುಗಡೆ ಹೊಂದಿದ ಮೇಲೆ ರಾಗ, ದ್ವೇಷ, ಅಸೂಯೆಗಳನ್ನು, ಅಪರಾಧಿ ಮನೋಭಾವ ವನ್ನು ತೊರೆದು, ಸಮಾಜದ ಮುಖ್ಯ ವಾಹಿನಿಯಲ್ಲಿ ಜವಾಬ್ದಾರಿ ವ್ಯಕ್ತಿಗಳಾಗಿ ಬದುಕಬೇಕೆಂದು ಹಾರೈಸಿದರು. ಸಂಘದ ನಿಯೋಗದಿಂದ ಕೈದಿಗಳಿಗೆ ಹಣ್ಣು- ಹಂಪಲು ವಿತರಿಸ ಲಾಯಿತು.
ಜೈಲು ಅಧಿಕಾರಿ ಸಿದ್ದಪ್ಪ ಗೌಡರು ಸ್ವಾಗತಿಸಿದರು. ಪೆÇ್ರ. ದೆವೇಂದ್ರ ಕಮಲ್ ಹಾಗೂ ಮಹಿಳಾ ಕೈದಿ ಶಕುಂತಲಾ ಬಿರಾದಾರ ರವರು ಮಾತನಾಡಿದರು. ನಾರಾಯಣ್ ರಾವ ಕಾಂಬಳೆಯವರು ಸ್ವಾಗತ ಗೀತೆ ಹಾಡಿದರು. ಗಂಗಪ್ಪ ಸಾವಳೆಯವರು ಕೊನೆ ಯಲ್ಲಿ ವಂದಿಸಿದರು. ರಾಮಕೃಷ್ಣ ಮುನಿಗ್ಯಾಲ,
ಕೆ. ವಿ. ಪಾಟೀಲ್,ಶಂಕರ ಚಿದ್ರೀ,ವಿಜಯ ಅತನೂರ್, ಶಿವಪುತ್ರ ಮೆಟಗೆಯವರು ನಿಯೋಗದಲ್ಲಿದ್ದರು. ಡಾ. ತೂಗಾಂವೆ, ವಿಜಯ ಕುಮಾರ, ಎಸ್. ಬಿ. ಅಂಗಡಿ, ಸವಿತಾ, ಸುಜಾತಾ, ತೇಜಸ್ವಿನಿ
ಮೊದಲಾದ ಜೇಲ್ ಸಿಬ್ಬಂದಿಗಳು ಇದ್ದರು.