ಕೈದಿಗಳ ನಡುವೆ ಹೊಡೆದಾಟ: ಇಬ್ಬರಿಗೆ ಗಾಯ

ಬೆಳಗ್ಗೆ ನಡೆದ ಘಟನೆ: ಕಾರಾಗೃಹಕ್ಕೆ ಪೊಲೀಸ್‌ ಆಯುಕ್ತರ ಭೇಟಿ

ಮಂಗಳೂರು, ಎ.25- ನಗರದ ಕೋಡಿಯಾಲ್‌ಬೈಲ್‌ನಲ್ಲಿರುವ ಕಾರಾಗೃಹದಲ್ಲಿ ರವಿವಾರ ಬೆಳಗ್ಗೆ ವಿಚಾರಣಾಧೀನ ಕೈದಿಗಳ ಮಧ್ಯೆ ಹೊಡೆದಾಟ ನಡೆದಿದೆ ಎಂದು ತಿಳಿದು ಬಂದಿದೆ. ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಿದ್ದಾರೆ.

ಸಮೀರ್ ಎಂಬಾತ ಅನ್ಸಾರ್ ಎಂಬಾತನಿಗೆ ಸ್ಪೂನ್ ಸಹಿತ ಅಡುಗೆ ಪರಿಕರಗಳನ್ನು ಬಳಸಿ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಈ ಘಟನೆಯಲ್ಲಿ‌ ಝೈನುದ್ದೀನ್ ಎಂಬಾತನಿಗೂ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಹಲ್ಲೆಗೆ ಕಾರಣ ಏನು ಎಂಬುದು ತಿಳಿದು ಬಂದಿಲ್ಲ. ಪಣಂಬೂರು‌ ಠಾಣಾ ವ್ಯಾಪ್ತಿಯಲ್ಲಿ ನಡೆದ ದರೋಡೆ ಪ್ರಕರಣದ ಆರೋಪಿ ಸಮೀರ್ ಎಂಬಾತ ಕಳೆದ ಜುಲೈನಿಂದ ಜೈಲಲ್ಲಿದ್ದಾನೆ. ಮುಲ್ಕಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಪ್ರಕರಣದ ಆರೋಪಿ ಸಮೀರ್ ಮತ್ತು ಮೂಡಬಿದ್ರೆ ಠಾಣಾ ವ್ಯಾಪ್ತಿಯಲ್ಲಿ ನಡೆದ ಪ್ರಕರಣದ ಆರೋಪಿ ಝೈನುದ್ದೀನ್‌ಗೆ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.