ಕೈತಪ್ಪುತ್ತಿದೆ ಮಹಾಮಾರಿ ಕರೊನಾ ವೈರಸ್?

ದೇವದುರ್ಗ: ತಾಲೂಕಿನಲ್ಲಿ ಕೋವಿಡ್-೧೯ ನಿಧಾನವಾಗಿ ತನ್ನ ವಿಷದ ಬೇರು ಬಿಡುತ್ತಿದ್ದು, ಏಪ್ರಿಲ್‌ನಲ್ಲಿ ಸೋಂಕಿತರ ಸಂಖ್ಯೆ ಶತಕ ದಾಟಿದೆ. ಇದು ಸಾರ್ವಜನಿಕರು ಮಾತ್ರವಲ್ಲ ಅಧಿಕಾರಿ ವರ್ಗದಲ್ಲೂ ತಲ್ಲಣಗೊಳಿಸಿದ್ದು, ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಹರಸಾಹಸ ಪಡುತ್ತಿದೆ.
ಕೆಲ ತಿಂಗಳ ಹಿಂದೆ ಬೆರೆಳೆಣಿಕೆಗೆ ಇಳಿಕೆಯಾಗಿದ್ದ ಬಾದಿತರ ಸಂಖ್ಯೆ ತಿಂಗಳಿನಿಂದ ತಿಂಗಳಿಗೆ ಹೆಚ್ಚುತ್ತ ಸಾಗಿದೆ. ಸದ್ಯ ತಾಲೂಕಿನಲ್ಲಿ ಸಕ್ರಿಯ ಪ್ರಕರಣಗಳು ೧೦೫ಕ್ಕೆ ಏರಿಕೆಯಾಗಿದ್ದು, ಪ್ರಥಮ ಹಾಗೂ ದ್ವಿತಿಯ ಸಂಪರ್ಕಿತರ ಗಂಟಲು ದ್ರವ ಪರೀಕ್ಷೆ ನಡೆಸಿದ್ದು, ಇದರ ಪ್ರಮಾಣ ಹೆಚ್ಚಾಗುವ ಸಾಧ್ಯತೆಯಿದೆ.
ಜನವರಿಯಲ್ಲಿ ೫, ಫೆಬ್ರುವರಿಯಲ್ಲಿ ೫, ಮಾರ್ಚ್‌ನಲ್ಲಿ ೨೬ ಹಾಗೂ ಏಪ್ರಿಲ್‌ನಲ್ಲಿ ೬೮ ಕೇಸ್ ಪತ್ತೆಯಾಗಿವೆ. ೧೦೫ ಸಕ್ರಿಯ ಕೇಸ್‌ಗಳಿದ್ದು, ಬಹುತೇಕರನ್ನು ಹೋಂ ಐಸುಲೇಷನ್ ಮಾಡಲಾಗಿದೆ. ರೋಗಿಗಳು ನಿಯಮ ಪಾಲನೆ ಮಾಡದ ಕಾರಣ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ ಎಂದು ಹೇಳಲಾಗುತ್ತಿದೆ. ಇಲ್ಲಿನ ಕಿತ್ತೂರುರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಆರಂಭಿಸಿದ ಕೋವಿಡ್ ಕೇಂದ್ರದಲ್ಲಿ ಸೋಂಕಿತರನ್ನು ಕ್ವಾರಂಟೈನ್ ಮಾಡಿದ್ದರೆ ಇದರ ಪ್ರಮಾಣ ಇಷ್ಟು ಹಬ್ಬುತ್ತಿರಲಿಲ್ಲ ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ.
ಕರೊನಾ ನಿಯಮಗಳು ಎನ್ನುವುದು ನಾಮ್‌ಕೆ ಅವಸ್ತೆ ಎನ್ನುವಂತಾಗಿದ್ದು, ಎಲ್ಲಿಯೂ ಕಟ್ಟುನಿಟ್ಟಾಗಿ ಪಾಲನೆ ಆಗುತ್ತಿಲ್ಲ. ಪೊಲೀಸರು ವಾಹನಗಳಿಗೆ ದಂಡ ಹಾಕಿದ್ದು ಬಿಟ್ಟರೆ, ಕಠಿಣ ಕ್ರಮಕೈಗೊಂಡಿಲ್ಲ. ಎಂದಿನಂತೆ ವಾರದ ಸಂತೆಗಳು ನಡೆಯುತ್ತಿವೆ. ಕರೊನಾ ಬಗ್ಗೆ ಜಾಗೃತಿ ಕೊರತೆಯಿದೆ. ಯಾವ ವ್ಯಾಪಾರಿ ಮಳಿಗೆಯಲ್ಲೂ ಸಾನಿಟೈಸರ್, ದೈಹಿಕ ಅಂತರ ಪಾಲನೆಯಾಗುತ್ತಿಲ್ಲ. ಸರ್ಕಾರದ ವಿವಿಧ ಇಲಾಖೆ ಕಚೇರಿಯಲ್ಲೂ ನಿಯಮ ಗಾಳಿಗೆ ತೂರಲಾಗಿದೆ.
ಬೆಲೆ ಏರಿಕೆ:
ರಾಜ್ಯಾದ್ಯಂತ ಕರೊನಾ ಸೋಂಕು ವ್ಯಾಪಕವಾಗಿ ಹಬ್ಬುತ್ತಿರುವ ಹಿನ್ನೆಲೆ ಎಲ್ಲೆಡೆ ಲಾಕ್‌ಡೌನ್ ಭಯ ಆವರಿಸಿದೆ. ಇದರಿಂದ ವಿವಿಧ ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದು, ಜನರಿಗೆ ಸಮಸ್ಯೆಯಾಗುತ್ತಿದೆ. ಗುಟ್ಕಾ ಪ್ರಿಯರಿಗೆ ಬೆಲೆ ಏರಿಕೆ ಹೊಡೆತ ನೀಡುತ್ತಿದ್ದು, ಪ್ರತಿಪ್ಯಾಕ್ ಮೇಲೆ ೩-೪ರೂ. ಏರಿಕೆಯಾಗಿದೆ. ಇನ್ನು ಸಿಗರೇಟ್ ಬೆಲೆ ಕೂಡ ಹೆಚ್ಚುತ್ತಿದ್ದು, ಹೆಚ್ಚಿನ ಬೆಲೆ ದೇಹದ ಜತೆ ಹಿಡಿಯವ ಕೈಕೂಡ ಸುಡುತ್ತಿದೆ. ತರಕಾರಿ, ದಿನಿಸಿ, ಕಿರಾಣಿ ಸಾಮಗ್ರಿ ಕೂಡ ಎರಡ್ಮೂರು ರೂ. ಏರಿಕೆ ಕಂಡಿವೆ. ಲಾಕ್‌ಡೌನ್ ಭಯದ
ತೀವ್ರ ಆರೋಗ್ಯ ಸಮಸ್ಯೆಯಿರುವ ರೋಗಿಗಳಿಗೆ ಮಾತ್ರ ಕೋವಿಡ್ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುವುದು. ಲಕ್ಷಣಗಳು ಇರದ ಸೋಂಕಿತರನ್ನು ಹೋಂ ಐಸುಲೇಷನ್ ಮಾಡಿ, ಚಿಕಿತ್ಸೆ ನೀಡಲಾಗುತ್ತಿದೆ. ಕರೊನಾ ಬಗ್ಗೆ ಆರೋಗ್ಯ ಇಲಾಖೆಯಿಂದ ಜಾಗೃತಿ ಮೂಡಿಸಲಾಗುತ್ತಿದೆ.
| ಡಾ.ಆರ್.ಎಸ್.ಹುಲಿಮನಿ
ತಾಲೂಕು ವೈದ್ಯಾಧಿಕಾರಿ