ಕೈಗೆ ಕಾನೂನು ಮೇಲೆ ವಿಶ್ವಾಸ ಇಲ್ಲ : ಶ್ರೀರಾಮುಲು

ಕೋಲಾರ,ನ,೨೭- ರಾಜ್ಯದ ಉಪ ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ದ ಅಕ್ರಮ ಆಸ್ತಿ ಸಂಬಂಧವಾಗಿ ದಾಖಲಾಗಿರುವ ಪ್ರಕರಣವನ್ನು ಕ್ಯಾಬಿನೆಟ್ ವಾಪಾಸ್ ಪಡೆದಿರುವುದು ಅವರಿಗೆ ಸಂವಿಧಾನದ ಕಾನೂನುಗಳ ಮೇಲೆ ವಿಶ್ವಾಸ ಇಲ್ಲವೆಂಬ ಸಂದೇಶವನ್ನು ನೀಡಿದಂತ ಅಭಿಪ್ರಾಯ ಸಮಾಜಕ್ಕೆ ನೀಡಿದಂತಾಗಿದೆ. ನಾನು ಕಳೆದ ೩೦ ವರ್ಷಗಳ ರಾಜಕಾರಣದ ಇತಿಹಾಸದಲ್ಲಿ ಇಂಥಹ ಪ್ರಕರಣವನ್ನು ಕಂಡಿಲ್ಲ. ಇದು ರಾಜಕಾರಣದಲ್ಲಿ ಸಂಘರ್ಷಕ್ಕೆ ಎಡೆ ಮಾಡಿ ಕೊಟ್ಟಂತೆ ಅಗಿದೆ ಎಂದು ಬಿಜೆಪಿ ಮಾಜಿ ಸಚಿವರಾದ ಶ್ರೀರಾಮುಲು ತಿಳಿಸಿದರು,
ಮುಳಬಾಗಿಲು ಕುರುಡುಮಲೆ ವಿನಾಯಕನ ದೇವಾಲಯದಲ್ಲಿ ತನ್ನ ಮಗಳ ವಿವಾಹದ ಲಗ್ನಪತ್ರಿಕೆಯನ್ನು ಪ್ರಥಮವಾಗಿ ಗಣನಾಯಕನಿಗೆ ಸಮರ್ಪಿಸುವ ಮೂಲಕ ವಿಶೇಷ ಪೂಜೆ ಸಲ್ಲಿಸಿದರು. ಬಿಜೆಪಿ ಕಚೇರಿಗೆ ಭೇಟಿ ನೀಡಿ ಕಾರ್ಯಕರ್ತರಿಗೆ ವಿವಾಹದ ಅಮಂತ್ರಣದ ಪತ್ರಿಕೆಯನ್ನು ವಿತರಿಸಿದ ನಂತರ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
ನೂತನ ಸರ್ಕಾರವು ಆಡಳಿತದಲ್ಲಿ ಅಧಿಕಾರವನ್ನು ಸಂವಿಧಾನ ಬದ್ದವಾಗಿ ನಿರ್ವಹಿಸದೆ ತನ್ನು ಕೈಗೊಂಬೆಯನ್ನಾಗಿ ಆಡಿಸುವ ಪ್ರಯತ್ನಕ್ಕೆ ಮುಂದಾಗಿರುವುದು ಘೋರ ಅಪರಾಧವಾಗಲಿದೆ. ಪ್ರಕರಣವನ್ನು ವಾಪಸ್ ಪಡೆಯುವ ನಿರ್ಧಾರಕ್ಕೆ ಮುನ್ನ ಕಾನೂನು ತಜ್ಞರ ಮಾರ್ಗದರ್ಶನವನ್ನು ಪಡೆದು ನಿರ್ಧರವನ್ನು ಕೈಗೊಳ್ಳದೆ ತಪ್ಪು ಮಾಡಿದೆ ಎಂದು ಪ್ರತಿಪಾದಿಸಿದರು,
ಪ್ರಶ್ನೆಯೊಂದಕ್ಕೆ ಈ ಹಿಂದಿನ ಸರ್ಕಾರದ ಆಡಳಿತದಲ್ಲಿ ಡಿ.ಕೆ. ಶಿವಕುಮಾರ್ ಮೇಲೆ ಮಾತ್ರವಲ್ಲ ಆಡಳಿತ ಪಕ್ಷದವರ ಮೇಲೂ ಕ್ರಮ ಕೈಗೊಂಡಿತ್ತು ಎಂದ ಅವರು ಡಿ.ಕೆ.ಶಿವಕುಮಾರ್ ಅವರ ಮೇಲೆ ತನಿಖೆಯ ವಿಚಾರಣೆ ನಡೆದು ಚಾರ್ಚಶೀಟ್ ದಾಖಲಿಸುವ ಅವಧಿಯಲ್ಲಿ ಪ್ರಕರಣವನ್ನು ವಾಪಸ್ ಪಡೆದಿರುವ ನಿರ್ಧಾರವು ಮೂರ್ಖತನದ ಪರಮಾವಧಿಯಾಗಿದೆ. ಇದಕ್ಕೆ ಮುಂದಿನ ದಿನಗಳಲ್ಲಿ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು,
ಕಳೆದ ಚುನಾವಣೆಯಲ್ಲಿ ೧೩೫ ಸ್ಥಾನಗಳನ್ನು ನೀಡುವ ಮೂಲಕ ಜನಾದೇಶ ನೀಡಿದೆ ಅದರೆ ಮತದಾರರಿಗೆ ಈ ಸರ್ಕಾರದ ಬಂಡಾವಳವು ಕಳೆದ ೬ ತಿಂಗಳ ಅವಧಿಯಲ್ಲಿ ಆಡಳಿತದಿಂದ ಬಯಲಾಗಿದೆ. ಚುನಾವಣೆಗೆ ಮುನ್ನ ಮತದಾರರಿಗೆ ನೀಡಿದ್ದ ೫ ಗ್ಯಾರೆಂಟಿಗಳ ಭರವಸೆಗಳನ್ನು ೬ ತಿಂಗಳಾಗಿದ್ದರೂ ಸಹ ಕನಿಷ್ಠ ೨೫ ರಷ್ಟು ತಲುಪಿಲ್ಲ. ಮತ್ತೊಂದು ಕಡೆ ಅಭಿವೃದ್ದಿಯನ್ನು ಮಾಡದೆ ಹೊರರಾಜ್ಯಗಳ ಚುನಾವಣೆಗಳ ಪ್ರಚಾರದಲ್ಲಿ ಕಾಲಹರಣ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಜನರ ಮುಂದೆ ಹೋದಾಗ ಕಲ್ಲೇಟು ಬೀಳುವುದು ಖಚಿತ ಎಂದು ತಿಳಿಸಿದರು.
ಪ್ರಶ್ನೆಯೊಂದಕ್ಕೆ ಸೋಮಣ್ಣ ಮತ್ತು ಬಸವರಾಜ ಯತ್ನಳ್ ಇಬ್ಬರು ಸಹ ಹಿರಿಯ ಮುಖಂಡರು ಅವರೆಂದು ಬಿಜೆಪಿ ತೊರೆಯುವುದಿ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮುಂದಿನ ದಿನಗಳಲ್ಲಿ ಬಿಜೆಪಿ ಪಕ್ಷದ ನೊತನ ಅಧ್ಯಕ್ಷ ಬಿ.ವೈ. ವಿಜೇಂದ್ರ ಅವರು ಸೋಮಣ್ಣ. ಯತ್ನಳ್ ಹಾಗೂ ಬಿ.ಎಸ್. ಯಡಿಯೂರಪ್ಪ ಅವರೊಟ್ಟಿಗೆ ಪಕ್ಷವನ್ನು ಸಂಘಟಿಸಲಿದ್ದಾರೆ ಎಂದರು.
ಜರ್ನಾದನ್ ರೆಡ್ಡಿ ಬಿಜೆಪಿ ಪಕ್ಷಕ್ಕೆ ಬಂದರೆ ಸಂತೋಷ ಅವರನ್ನು ಮನಪೂರ್ವಕವಾಗಿ ಸ್ವಾಗತಿಸುತ್ತೇನೆ ಎಂದ ಅವರು ಜನಗಣತಿಯ ವರದಿಯ ತೀರ್ಮಾನವನ್ನು ಸ್ವೀಕರಿಸಿ ಸ್ವಾಗತಿಸುತ್ತೇವೆ.ಮುಖ್ಯ ಸರ್ಕಾರವು ಅಭಿವೃದ್ದಿ ಕೆಲಸಗಳತ್ತ ಗಮನ ಹರಿಸ ಬೇಕಾಗಿದೆ, ಜನರ ಸಮಸ್ಯಗಳಿಗೆ ಸ್ಪಂದಿಸುವ ಕೆಲಸವಾಗ ಬೇಕಾಗಿದೆ ಎಂದು ಕಿವಿ ಮಾತು ತಿಳಿಸಿದರು,