ಕೈಗೆ ಅಧಿಕಾರ ಅಲ್ಪಸಂಖ್ಯಾತರ ಆರ್ಭಟ: ಎಸ್‌ಆರ್‌ವಿ ಕಳವಳ

ಬೆಂಗಳೂರು, ಮೇ ೨೦- ಕಾಂಗ್ರೆಸ್ ಬಹುಮತ ಪಡೆದ ಬೆನ್ನಲ್ಲೆ ಅಲ್ಪಸಂಖ್ಯಾತರ ಆರ್ಭಟ ಶುರುವಾಗಿದೆ ಇದು ಹೀಗೆ ಮುಂದುವರೆ ದೇಶಕ್ಕೆ ಮಾರಕವಾಗಿ ಪರಿಣಮಿಸಲಿದೆ ಎಂದು ಶಾಸಕ ಎಸ್.ಆರ್.ವಿಶ್ವನಾಥ್ ಇಂದಿಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.
ಯಲಹಂಕದ ರಾಜಾನುಕುಂಟೆ,ಅರಕೆರೆ,ಸೊಣ್ಣೇನಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಮತದಾರರಿಗೆ ಧನ್ಯವಾದ ಸಲ್ಲಿಸುವ ನಿಟ್ಟಿನಲ್ಲಿ ರ್‍ಯಾಲಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಬಹುಮತ ಪಡೆದ ಹಿನ್ನೆಲೆಯಲ್ಲಿ ಸಂಭ್ರಮಾಚರಣೆಯಲ್ಲಿ ಮುಸ್ಲಿಮರು ತಮ್ಮ ಬಾವುಟ ಹಿಡಿದು ಪಾಕಿಸ್ತಾನಪರ ಘೋಷಣೆ ಕೂಗಿದ್ದಾರೆ. ಇದಕ್ಕೆ ಕಾಂಗ್ರೆಸ್‌ನ ಓಲೈಕೆಯೆ ಕಾರಣ ಎಂದರು.
ಪ್ರಧಾನಿ ನರೇಂದ್ರ ಮೋದಿ ಬಿಟ್ಟರೆ ಬೇರಾರಿಂದಲೂ ದೇಶ ಉಳಿಸಲು ಸಾಧ್ಯವಿಲ್ಲ. ಶತ್ರು ಗಳಿಂದ ರಕ್ಷಿಸುತ್ತಿದ್ದಾರೆ. ದೇಶದ ದೃಷ್ಟಿಯಿಂದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಬೇಕು. ಯಲಹಂಕದಲ್ಲಿ ೧ ಲಕ್ಷ ಮತಗಳ ಬಹುಮತ ನೀಡಬೇಕು ಎಂದು ಮನವಿ ಮಾಡಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಒಂದು ಕುಟುಂಬಕ್ಕೆ ವಾರ್ಷಿಕವಾಗಿ ೨೪ಸಾವಿರ ರೂ.ನಷ್ಟು ಸಹಾಯ ಧನ ನೀಡುವುದಾಗಿ ಭರವಸೆ ನೀಡಿದ್ದಾರೆ. ಆದರೀಗ ಗೆದ್ದಮೇಲೆ ಷರತ್ತುಗಳನ್ನು ವಿಧಿಸುತ್ತಾರೆ. ಜನತೆ ಸುಳ್ಳು ಭರವಸೆಗೆ ಮರುಳಾಗಿರುವುದು ವಿಪರ್ಯಾಸ ಎಂದು ಹೇಳಿದರು.
ವಿರೋಧ ಪಕ್ಷದಲ್ಲಿದ್ದರೂ ಕೂಡಾ ಅಭಿವೃದ್ಧಿಗೆ ಶ್ರಮಿಸುತ್ತೇನೆ. ನನ್ನುರು ನನ್ನ ಜನಕ್ಕಾಗಿ ಶ್ರಮಿಸುತ್ತೇನೆ. ಈ ಬಾರಿ ೧ ೬೪ಸಾವಿರಕ್ಕೂ ಹೆಚ್ಚು ಮತಗಳ ನೀಡಿ ಬೆಂಬಲಿಸಿದ್ದಕ್ಕೆ ಧನ್ಯವಾದ ತಿಳಿಸಿದರು.
ಈ ವೇಳೆ ಬಿಜೆಪಿ ಮುಖಂಡರಾದ ಚೊಕ್ಕನಹಳ್ಳಿ ವೆಂಕಟೇಶ್, ರಾಜಾನುಕುಂಟೆ ಗ್ರಾಮ ಪಂಚಾಯತಿ ಅಧ್ಯಕ್ಷ ನರಸಿಂಹಮೂರ್ತಿ (ಎಸ್‌ಟಿಡಿ ಮೂರ್ತಿ), ಬಿಜೆಪಿ ಯಲಹಂಕ ಗ್ರಾಮಾಂತರ ಮಂಡಲ ಅಧ್ಯಕ್ಷ ಹನುಮಯ್ಯ, ಕಾರ್ಯದರ್ಶಿ ಜನಾರ್ಧನ್(ಜಾನಿ), ಮುಖಂಡ ಅದ್ದೆ ಮಂಜುನಾಥ್ ಸೇರಿದಂತೆ ಇನ್ನಿತರರಿದ್ದರು.