ಕೈಗಾರಿಕ ಪ್ರದೇಶ ನಿರ್ಮಾಣ ತ್ವರಿತಗತಿಯಲ್ಲಿ ಪೂರ್ಣಕ್ಕೆ ಡಿಸಿ ಸೂಚನೆ

ರಾಯಚೂರು, ಜ.೧೮-ಜಿಲ್ಲೆಯಲ್ಲಿ ಹೊಸ ಕೈಗಾರಿಕ ಪ್ರದೇಶ ನಿರ್ಮಾಣಕ್ಕೆ ಸಂಬಂಧಿಸಿ ಭೂಸ್ವಾದಿನ ಮತ್ತು ಜಂಗಲ್ ಕಟಿಂಗ್ ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅವರಿಂದು ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಹಮ್ಮಿಕೊಂಡ ಜಮೀನು ಚೆಕ್ ಬಂಧಿ ಜಿಲ್ಲಾ ಮಟ್ಟದ ಪರಿಶೀಲನೆ ಸಭೆಯಲ್ಲಿ ಮಾತನಾಡುತ್ತಾ,ದೇವದುರ್ಗ ಕೈಗಾರಿಕಾ ಪ್ರದೇಶದ ಜಮೀನಿನ ಚಕ್‌ಬಂದಿ ಹಾಗೂ ಅಲ್ಲಿ ಬೆಳೆದಿರುವ ಗಿಡಗಂಟಿಗಳನ್ನು ಸ್ವಚ್ಛ ಮಾಡಿ ಹಂಚಿಕೆಯ ನೀಲಿ ನಕ್ಷೆಯನ್ನು ಸಿದ್ಧಪಡಿಸುವಲ್ಲಿ ನಿರ್ಲಕ್ಷ ಮುಂದುವರಿದಿದ್ದು ಅತಿ ಶೀಘ್ರದಲ್ಲಿ ಜಂಗಲ್ ಪೂರ್ಣಗೊಳಿಸಬೇಕು ಎಂದು ತಿಳಿಸಿದರು. ಪೊಲೀಸ್ ಬಿಗ್ ಭದ್ರತೆಯೊಂದಿಗೆ ಜಂಗಲ್ ಕಟಿಂಗ್ ಮಾಡುವಂತೆ ಸೂಚನೆ ನೀಡಿದರು ಚುನಾವಣೆ ನೆಪದಲ್ಲಿ ಕಾಮಗಾರಿ ವಿಳಂಬ ಆಗದಂತೆ ಆರಂಭ ಮಾಡಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಯಾವುದೆ ಕಾರಣಕ್ಕೂ ಕಾಮಗಾರಿ ಆರಂಭ ವಿಳಂಬ ಆಗಬಾರದು. ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಸಿಇಒ, ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.