ಕೈಗಾರಿಕೋದ್ಯಮಿಗಳ ಯಶೋಗಾಥೆ ಓದಬೇಕು :ಡಾ. ಹನುಮಂತಯ್ಯ

ಬೀದರ,ಮಾ.9: ಇನ್‍ಫೋಸಿಸ್ ಮಾಲೀಕರಾದ ಸುಧಾ
ನಾರಾಯಣಮೂರ್ತಿ ಅವರು ಉದ್ಯಮ ಪ್ರಾರಂಭಕ್ಕಾಗಿ ತಮ್ಮ ಎಲ್ಲ
ಒಡವೆಗಳನ್ನು ಮಾರಿ ಅದರ ಬಂಡವಾಳದಿಂದ ಕೈಗಾರಿಕೋದ್ಯಮ
ಸ್ಥಾಪಿಸಿ ಇಂದು ಪ್ರಪಂಚದಲ್ಲೇ ಹೆಸರುವಾಸಿಯಾಗಿದ್ದು, ಅವರು
ದಾನಕ್ಕಾಗಿ ಇಟ್ಟಿರುವ ಹಣದ ಮೊತ್ತ ಹತ್ತು ಸಾವಿರ ಕೊಟಿ ರೂ. ಹೀಗೆ
ಅತ್ಯಂತ ಕಠಿಣ ಪರಿಶ್ರಮ ದಿಟ್ಟ ನಿಲುವಿನಿಂದ ಛಲ ಬಿಡದೆ ಆಹೋ ರಾತ್ರಿ
ಪ್ರಯತ್ನ ಮಾಡಿ ತಾವು ಕಂಡ ಕನಸನ್ನ ಸಾಕಾರ ಮಾಡಿಕೊಂಡು
ಗುರಿ ತಲುಪಿ ಯಶಸ್ವಿಯಾದ ಅನೇಕ ಕೈಗಾರಿಕೋದ್ಯಮಿಗಳ
ಯಶೋಗಾಥೆಯನ್ನು ಪ್ರತಿಯೊಬ್ಬ ಯುವ ಉತ್ಸಾಹಿ, ಕೈಗಾರಿಕೆ
ಸ್ಥಾಪನೆ ಮಾಡುವ ವ್ಯಕ್ತಿಗಳು ಓದಲೇಬೇಕು ಎಂದು ರಾಜ್ಯಸಭಾ
ಸದಸ್ಯ ಮತ್ತು ಕರ್ನಾಟಕ ರಾಜ್ಯ ದಲಿತ ಉದ್ಯಮಿದಾರರ ಸಂಘದ
ರಾಜ್ಯಾಧ್ಯಕ್ಷÀ ಡಾ. ಎಲ್. ಹನುಮಂತಯ್ಯನವರು ನುಡಿದರು.
ಅವರು ಬೀದರ ನಗರದಲ್ಲಿ ಬೀದರ ಜಿಲ್ಲಾ ಎಸ್‍ಸಿ. ಎಸ್‍ಟಿ ಸಣ್ಣ
ಕೈಗಾರಿಕೆ ಉದ್ಯಮೆದಾರರ ಸಂಘ ಏರ್ಪಡಿಸಿದ ಕೈಗಾರಿಕಾ
ಉದ್ಯಮಿಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ,ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಎಲ್ಲಿಯವರೆಗೆ ಕೈಗಾರಿಕೆಗಳ ಸ್ಥಾಪನೆಗೆ ಆಗುಹೋಗುಗಳ ಬಗ್ಗೆ ಸಮಸ್ಯೆ ತೊಂದರೆ ನಿವಾರಣೆ ಪರಿಹಾರೋಪಾಯಗಳನ್ನು ತಿಳಿದುಕೊಳ್ಳುವುದಿಲ್ಲವೋ ಅಲ್ಲಿಯವರೆಗೆಯಶಸ್ವಿ ಉದ್ಯಮಿದಾರ ಆಗಲಾರ. ಹತ್ತು ಲಕ್ಷ ಕೋಟಿ ರೂಪಾಯಿಸಾಲ ಮನ್ನಾ ಮಾಡಲಾಗಿದೆ ಎಂಬ ಅಂಶ ಸರ್ಕಾರದಿಂದ ತಿಳಿದಿದ್ದು, ಇದರಲ್ಲಿವಸೂಲಾತಿ ಒಂದು ಪ್ರತಿಶತ ಮಾತ್ರ ಎನ್.ಪಿ.ಎ. ಅಂತ ಹೇಳುತ್ತಾರೆ
ಆದರೆ ಅದರ ಪೂರ್ಣ ಮಾಹಿತಿ ಸಿಗುವುದಿಲ್ಲ. ಸಾಲ ಮುಳುಗಡೆ
ಮಾಡಿಕೊಳ್ಳುವ ವ್ಯಕ್ತಿ ಬೇರೊಂದು ಕಂಪನಿ ಹೆಸರಿನಲ್ಲಿ ಪುನಃ ಸಾಲ
ಪಡೆದಿರುತ್ತಾನೆ. ಅಂಥವರಿಗೆಯೇ ಬ್ಯಾಂಕ್‍ಗಳು ಸಾಲ ನೀಡಿ ಜಾಣ
ಮೋಸಹೋಗುತ್ತವೆ. ಕಾರ್ಯದಲ್ಲಿಪ್ರಾಮಾಣಿಕತೆ, ವಿಶ್ವಾಸ, ಶಿಸ್ತು ವರ್ತನೆಗಳುಉದ್ಯಮಿಗೆ ಯಶಸ್ವಿನ ಗುಟ್ಟುಗಳಾಗಿವೆ ಎಂದು ಸತ್ಯ
ಘಟನೆಗಳನ್ನು ತಿಳಿಸಿದರು. ಬೀದರನಲ್ಲಿ ದಲಿತ ಉದ್ಯಮಿದಾರರು ಹೆಚ್ಚಿನ ಸಂಖ್ಯೆಯಲ್ಲಿ ಮುಂದೆಬಂದು ಕಾರ್ಯದಲ್ಲಿ ತೊಡಗಿಸಿಕೊಂಡು ಸ್ವಯಂ
ಉದ್ಯಮಿಗಳಗುವುದರೊಂದಿಗೆ ಇತರರಿಗೆ ಉದ್ಯೋಗಗಳನ್ನು
ನೀಡಬೇಕೆಂದರು.ಸಂಘದ ಕಾಯಾಧ್ಯಕ್ಷ ಸಿ. ಜಿ. ಶ್ರೀನಿವಾಸನ್ ಅವರು ಮಾತನಾಡಿಉದ್ಯಮಿದಾರರು ಎಸ್.ಸಿ.ಪಿ. ಟಿ.ಎಸ್.ಪಿ. ಸೇರಿದಂತೆ ಇತರೆ ಎಲ್ಲ ಸೌಲಭ್ಯಗಳಬಗ್ಗೆ ತಿಳಿದುಕೊಂಡು ರಾಷ್ಟ್ರೀಕೃತ ಬ್ಯಾಂಕಗಳಿಂದ ಸಾಲ ಪಡೆದುಉದ್ಯಮ ಸ್ಥಾಪನೆ ಮಾಡಬೇಕೆಂದರು.ತಲಾ ಹತ್ತು ಕೋಟಿಯಂತೆ ಸಾಲ ಪಡೆದವರು ಹತ್ತು ಜನಸಿಗುವುದಿಲ್ಲ. ಆದರೆ ಸಾಮಥ್ರ್ಯವುಳ್ಳವವರು ಸಾವಿರಾರು ಕೋಟಿ ಸಾಲ ಪಡೆಯುತ್ತಾರೆ ಎಂದರು.
ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕಿ ಸುರೇಖಾಮುನಳ್ಳಿ ,ಕೆ. ಎಸ್. ಎಫ್. ಸಿ. ಶಾಖಾ ವ್ಯವಸ್ಥಾಪಕರು ಶಿವಕುಮಾರ ಎಸ್.ಮತ್ತು ಅಭಿವೃದ್ಧಿ ಅಧಿಕಾರಿ ಮಲ್ಲಿಕಾರ್ಜುನ ಜಕ್ಕಾ ಅವರುಮಾತನಾಡಿದರು.
ಸಂಘದ ಜಿಲ್ಲಾಧ್ಯಕ್ಷ ಪಿ. ವಿಜಯಕುಮಾರ ಅವರು ಮಾತನಾಡಿ,ಅಂದು ಸಹಾಯಧನ 30 ಪ್ರತಿಶತ ಇತ್ತುಈಗ 75 ಪ್ರತಿಶತವಿದ್ದರೂ ಎಸ್. ಸಿ. ಎಸ್. ಟಿ. ಯುವ ಪೀಳಿಗೆ ಮತ್ತುವ್ಯಕ್ತಿಗಳು ಈ ಕ್ಷೇತ್ರಕ್ಕೆ ಬರಲು ಹಿಂದೇಟು ಹಾಕುತಿದ್ದಾರೆ. ಎಂದುತೀವ್ರ ಕಳವಳ ವ್ಯಕ್ತಪಡಿಸಿ ಹೊಸ ಕೈಗಾರಿಕೆಗಳ ಸ್ಥಾಪನೆಗೆಕರೆ ನೀಡಿದರು. ಪ್ರಧಾನ ಕಾರ್ಯದರ್ಶಿ ಪ್ರಥ್ವಿರಾಜ್ ಎಸ್. ಸ್ವಾಗತಿಸಿ
ಪ್ರಾಸ್ತವಿಕವಾಗಿ ಮಾತನಾಡಿದರು.ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಸಿ. ಜೆ. ಶ್ರೀನಿವಾಸನ್ ಅವರಿಗೆ ಸನ್ಮಾನಿಸಲಾಯಿತು. ಪ್ರಶಾಂತ ದೊಡ್ಡಿ ವಂದಿಸಿದರು. ವೇದಿಕೆಯಮೇಲೆ ಅಶೋಕ ವಡ್ಡೆ ಉಪಸ್ಥಿತರಿದ್ದರು.