ಕೈಗಾರಿಕೆ ಸ್ಥಾಪನೆಯಿಂದ ಉದ್ಯೋಗ ಸೃಷ್ಠಿ: ಎಂ.ವೈ.ಪಾಟೀಲ

ಅಫಜಲಪುರ: ನ.24: ಮತಕ್ಷೇತ್ರದ ಹಲವಾರು ಜನ ಮುಖಂಡರು ಹಾಗೂ ಯುವಕರು ಕಾಟನ್ ಜಿನ್ನಿಂಗ್, ಆಯಿಲ್ ಮಿಲ್ಲ್‍ಗಳನ್ನು ಸ್ಥಾಪಿಸುವ ಮೂಲಕ ಕೈಗಾರಿಕೆ ಕ್ಷೇತ್ರದ ಕಡೆ ಹೆಜ್ಜೆ ಹಾಕಿರುವುದು ಸ್ವಾಗತಾರ್ಹವಾಗಿದೆ ಎಂದು ಶಾಸಕ ಎಂ.ವೈ.ಪಾಟೀಲ ಹೇಳಿದರು.

ಪಟ್ಟಣದ ಹೊರವಲಯದ ಕಲ್ಲೂರ ಗ್ರಾಮಕ್ಕೆ ಹೋಗುವ ಮಾರ್ಗದಲ್ಲಿ ನೂತನವಾಗಿ ನಿರ್ಮಿಸಿದ ವೈಭವ ಕಾಟನ್ ಮತ್ತು ಆಯಿಲ್ ಇಂಡಸ್ಟ್ರೀಜ್‍ನ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಕೇವಲ ಒಬ್ಬ ವ್ಯಕ್ತಿ ವ್ಯಾಪಾರ ಮಾಡಿಕೊಂಡರೆ ಸಾಲದು, ಇಂತಹ ಬೃಹತ್ ಪ್ರಮಾಣದ ಮಿಲ್ಲಗಳ ಸ್ಥಾಪನೆಯಿಂದ ಬಡವರಿಗೆ ಉದ್ಯೋಗ ನೀಡಿದಂತಾಗುತ್ತದೆ. ಇದರಿಂದ ರೈತರಿಗೆ ಅನುಕೂಲವಾಗಲಿದೆ. ಕಷ್ಟಪಟ್ಟು ದೊಡ್ಡ ಪ್ರಮಾಣದ ಬಂಡವಾಳ ಹೂಡಿಕೆ ಮಾಡಿ ಕಾಟನ್ ಜಿನ್ನಿಂಗ್ ಮತ್ತು ಆಯಿಲ್ ಮಿಲ್ಲ ಸ್ಥಾಪಿಸಿದ್ದು ಸಂತಸ ತಂದಿದೆ. ಈಗಾಗಲೇ ತಾಲೂಕಿನಲ್ಲಿ ರೈತರು ವಾಣಿಜ್ಯ ಬೆಳೆಗಳು ಬೆಳೆಯುತ್ತಿದ್ದು, ಇಲ್ಲಿನ ರೈತರ ಬೆಳೆಗೆ ಬರುವ ದಿನಗಳಲ್ಲಿ ಈ ಕಾರ್ಖಾನೆಗಳಿಂದ ಉತ್ತಮ ಬೆಲೆ ಸಿಗಲಿದೆ. ಹಿಂದುಳಿದ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಇಂತಹ ಬೃಹತ್ ಪ್ರಮಾಣದ ಮಿಲ್ಲಗಳನ್ನು ಸ್ಥಾಪಿಸಿ ಉದ್ಯೋಗ ಸೃಷ್ಠಿಗೆ ಒತ್ತುನೀಡಿರುವ ವೈಭವ ಮಿಲ್ಲ್‍ನ ಮಾಲೀಕರಾದ ಶರಣು ನೂಲಾ, ಶರಣು ಅಳ್ಳಗಿ, ರವೀಂದ್ರ ಉಪಾಧ್ಯ ಅವರಿಗೆ ಅಭಿನಂದಿಸಿ ಶುಭಹಾರೈಸಿದ ಅವರು ಸರಕಾರದಿಂದ ಬರುವ ಸಹಾಯ ಹಾಗೂ ತಮ್ಮ ಸಹಕಾರ ನೀಡುವುದಾಗಿ ತಿಳಿಸಿದರು.

ಸಮಾರಂಭವನ್ನುದ್ದೇಶಿಸಿ ಮುಖಂಡರಾದ ಮಕ್ಬೂಲ್ ಪಟೇಲ್, ಕೆನರಾ ಬ್ಯಾಂಕ್ ಆರ್.ಂ ಸಂಜೀವಪ್ಪ, ಆರ್. ಬೇಗಾರ ರೈತ ಮುಖಂಡರಾದ ಶ್ರೀಮಂತ ಬಿರಾದಾರ ಮಾತನಾಡಿ ಗ್ರಾಮೀಣ ಭಾಗದಲ್ಲಿ ಮಿಲ್ಲಗಳ ಸ್ಥಾಪನೆಯಿಂದ ಯುವಕರಿಗೆ ಉದ್ಯೋಗ ಸಿಗಲಿದೆ ಹಾಗೂ ರೈತರಿಗೆ ಅನುಕೂಲವಾಗಲಿದೆ. ಈ ಪ್ರದೇಶ ಮುಂಬರುವ ದಿನಗಳಲ್ಲಿ ಆರ್ಥಿಕ ಪ್ರಗತಿ ಸಾಧಿಸಲಿದೆ ಎಂದು ಹೇಳಿದರು. ಕಾರ್ಯಕ್ರಮದ ಸಾನಿಧ್ಯವನ್ನು ಅಫಜಲಪುರ ಸಂಸ್ಥಾನ ಹಿರೇಮಠ ಪೂಜ್ಯರಾದ ಶ್ರೀ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರು, ಬಡದಾಳ ತೇರಿನ ಮಠದ ಪೂಜ್ಯರಾದ ಶ್ರೀ ಚನ್ನಮಲ್ಲ ಶಿವಯೋಗಿ ಶಿವಾಚಾರ್ಯರು ವಹಿಸಿ ಆಶೀರ್ವಚನ ನೀಡಿದರು.

ಸಮಾರಂಭದಲ್ಲಿ ಮುಖಂಡರಾದ ಸಿದ್ದಯ್ಯ ಆರ್ ಹಿರೇಮಠ, ಮಲ್ಲಪ್ಪ ಗುಣಾರಿ, ಕಲಬುರಗಿಯ ವೀರಣ್ಣ ಜಿ ಮಹಾಂತಗೋಳ, ಡಾ|| ಸಂಜೀವಕುಮಾರ ಪಾಟೀಲ, ಎಸ್ ವಾಯ್ ಪಾಟೀಲ,. ಶಿವಪುತ್ರಪ್ಪ ಸಂಗೋಳಗಿ, ಸಂಜು ನಿಂಬಾಳ, ದಕ್ಷಿಣ ಕನ್ನಡ ಜಿಲ್ಲೆಯ ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ ಶಿವಕುಮಾರ ಗುಣಾರಿ, ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಸಾಂಸ್ಕøತಿಕ ಸಂಘದ ಕಾರ್ಯದರ್ಶಿ ಭೀಮಾಶಂಕರ ತೆಗ್ಗೆಳ್ಳಿ, ಕೃಷಿ ಮಹಾವಿದ್ಯಾಲಯದ ಡೀನ್ ಡಾ|| ಸುರೇಶ ಎನ್ ಪಾಟೀಲ, ಜೆಸ್ಕಾಂ ಡಿವಿಜನ್ ಇಇ ಸಂತೋಷ ಚವ್ಹಾಣ, ಜೆಸ್ಕಾಂ ಎಇಇ ನಾಗರಾಜ ಕೆ, ವೈಭವ ಮಿಲ್‍ನ ಮಾಲೀಕರಾದ ಶರಣು ನೂಲಾ, ಶರಣು ಅಳ್ಳಗಿ, ರವೀಂದ್ರ ಕೆ ಉಪಾಧ್ಯ, ಯುವ ಮುಖಂಡರಾದ ಕಂಠೆಪ್ಪ ಬಳೂರ್ಗಿ, ಚಿದಾನಂದ ಮಠ, ಗಂಗಾಧರ ಶ್ರೀಗಿರಿ, ರವಿ ನಂದಿಗೌಡರ, ಸಂತೋಷ ದಾಮಾ, ಪ್ರಶಾಂತ ಹಿರೇಮಠ, ಶರಣು ವಾಳಿ, ಮಲ್ಲಿಕಾರ್ಜುನ ಶೇರಿಕರ, ಶ್ರೀಶೈಲ ದೇಸಾಯಿ, ಬಸು ಕಲಶೆಟ್ಟಿ, ಎ.ಬಿ.ಪಟೇಲ್ ಸೊನ್ನ, ಹಣಮಂತ ಕಲಶೆಟ್ಟಿ, ರಾಹುಲ ನೂಲಾ, ಪವನ ಅಳ್ಳಗಿ, ಗಣೇಶ ನೂಲಾ, ವರುಣ ಅಳ್ಳಗಿ ಸೇರಿದಂತೆ ಹಲವಾರು ಜನ ಮುಖಂಡರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.